Thursday, 19th September 2024

Viral Video: ಶಿಕ್ಷಕರ ದಿನಾಚರಣೆ ದಿನ ಶಿಕ್ಷಕನನ್ನು ಗೌರವಿಸಲು ಹೋದ ವಿದ್ಯಾರ್ಥಿಗೆ ಆದ ಗತಿಯೇನು ನೋಡಿ!

Viral Video


ನವದೆಹಲಿ: ಸೆಪ್ಟೆಂಬರ್ 5ರಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ವಿದ್ಯಾರ್ಥಿಗಳು ತಮಗೆ ಶಿಕ್ಷಣ ನೀಡಿದ ತಮ್ಮ ಪ್ರೀತಿಪಾತ್ರರಾದ ಶಿಕ್ಷಕರಿಗೆ ಗೌರವ ಸಲ್ಲಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಹಜ. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತನ್ನ ಗುರುವಿಗೆ ಗೌರವ ನೀಡಲು ಹೋದ ವಿದ್ಯಾರ್ಥಿಯ ಒಂದು ಹಳೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ. ಅದರಲ್ಲಿ ಒಂದಷ್ಟು ವಿದ್ಯಾರ್ಥಿಗಳು ತಮ್ಮ ಗುರುವಿಗೆ ಧನ್ಯವಾದ ಅರ್ಪಿಸುವ ಯೋಜನೆ ಹಾಕಿಕೊಂಡಿದ್ದರು. ಆದರೆ ಈ ವೇಳೆ ನಡೆದ ಒಂದು ಘಟನೆಯಿಂದ ಕೋಪಗೊಂಡ ಶಿಕ್ಷಕರೊಬ್ಬರು ವಿದ್ಯಾರ್ಥಿಯೊಬ್ಬನಿಗೆ ಥಳಿಸಿದ್ದಾರೆ.

“ಘರ್ ಕಾ ಕಾಲೇಶ್” ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ಸಣ್ಣ ವಿಡಿಯೊದಲ್ಲಿ, ಕೆಲವು ವಿದ್ಯಾರ್ಥಿಗಳು ತರಗತಿಯೊಳಗೆ ಶಿಕ್ಷಕನಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯ ಹೇಳುತ್ತಿರುವಾಗ ಅವರಲ್ಲಿ ಒಬ್ಬ ವಿದ್ಯಾರ್ಥಿಯು ಸ್ನೋ ಸ್ಪ್ರೇಯನ್ನು ಶಿಕ್ಷಕನ ಮೇಲೆ ಸಿಂಪಡಿಸಿದ್ದಾನೆ. ಇದರಿಂದ ಕೋಪಗೊಂಡ ಶಿಕ್ಷಕ ಅವನ ಕಾಲರ್ ಹಿಡಿದು, ಅವನನ್ನು ಮೇಜಿನ ಮೇಲೆ ಮಲಗಿಸಿ , ಬೆನ್ನಿಗೆ ಹೊಡೆದಿದ್ದಾರೆ.

ಇದು ನಿಜವಾಗಿಯೂ ವಿಚಿತ್ರ ಕ್ಷಣವಾಗಿದೆ. ಏಕೆಂದರೆ ಶಿಕ್ಷಕರ ದಿನಾಚರಣೆಯ ದಿನ ವಿದ್ಯಾರ್ಥಿಗಳು ಶಿಕ್ಷಕರನ್ನು ಸಂತೋಷಪಡಿಸಲು ಏನೆಲ್ಲ ಮಾಡುತ್ತಾರೆ. ಆದರೆ ಇಷ್ಟಕ್ಕೇ ಶಿಕ್ಷಕರು ವಿದ್ಯಾರ್ಥಿಯ ಮೇಲೆ ಕೈ ಮಾಡಿದ್ದಾರೆ. ವಾಸ್ತವವಾಗಿ, ಈ ವಿಡಿಯೊಗೆ ನೆಟ್ಟಿಗರು ಹಲವು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈ ವಿಡಿಯೊ ನೋಡಿ ಅನೇಕರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ:ಕ್ಲಾಸ್ ರೂಂನೊಳಗೆ ಜಡೆ ಎಳೆದಾಡಿಕೊಂಡು ಹೊಡೆದಾಡಿದ ವಿದ್ಯಾರ್ಥಿನಿಯರು!

ಇದು ಆ ಶಿಕ್ಷಕ ಒಬ್ಬ ಕಟ್ಟುನಿಟ್ಟಾದ ವ್ಯಕ್ತಿ ಎಂಬುದನ್ನು ತಿಳಿಸುತ್ತದೆ. ಮತ್ತು ಈ ಕ್ಷಣವು ಶಿಕ್ಷಕರು ಮತ್ತು ಅವರ ವಿದ್ಯಾರ್ಥಿಗಳ ನಡುವೆ ಇರಬಹುದಾದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ವಿಶೇಷವಾಗಿ ಜನ್ಮದಿನಗಳು ಮತ್ತು ಇತರ ಸಂತೋಷದ ಸಂದರ್ಭಗಳಲ್ಲಿ ತಮ್ಮವರ ಜೊತೆ ಮಾಡುವಂತಹ ಮೋಜು ಮಸ್ತಿಯನ್ನು, ವಿದ್ಯಾರ್ಥಿಗಳು ತಮ್ಮ ಪ್ರಿಯ ಶಿಕ್ಷಕರ ಜೊತೆ ಮಾಡಿದ್ದಾರೆ. ಅದಕ್ಕೆ ಶಿಕ್ಷಕರು ಅಷ್ಟೊಂದು ಕೋಪಗೊಂಡು ಹೊಡೆದಿದ್ದು, ಅನೇಕರಲ್ಲಿ ಬೇಸರವನ್ನುಂಟುಮಾಡಿದೆ. ಈ ವಿಡಿಯೊ ನೋಡಿದಾಗ ವಿದ್ಯಾರ್ಥಿಗಳು ಶಿಕ್ಷಕರ ಜೊತೆಯಲ್ಲಿ ಯಾವುದೇ ಸಂದರ್ಭಗಳಲ್ಲಿ ಶಿಸ್ತಿನಿಂದ ವರ್ತಿಸಬೇಕು ಎಂಬುದನ್ನು ತಿಳಿಸುತ್ತದೆ.