Sunday, 24th November 2024

Vastu Tips: ದೀಪ ಬೆಳಗಿಸಿ ಮನೆಯೊಳಗೆ ಸಂತೋಷವನ್ನು ಸ್ವಾಗತಿಸಿ

Vastu Tips

ಮನೆಯಲ್ಲಿ ಕತ್ತಲು (dark) ಎಂದರೆ ಅದು ಸೂತಕದ ಛಾಯೆಯಂತೆ ಭಾಸವಾಗುತ್ತದೆ. ಅದೇ ಬೆಳಕಿದ್ದರೆ (light) ಏನೋ ಸಂಭ್ರಮ ಎದ್ದು ಕಾಣುತ್ತದೆ. ಮನೆಯ ಸುಖ, ಶಾಂತಿ, ಸಮೃದ್ಧಿಗೆ ಗಾಳಿ, ಬೆಳಕು (Air and light) ಮನೆಯೊಳಗೆ ಹರಿದಾಡುತ್ತಿರಬೇಕು. ಇದು ಸಕಾರಾತ್ಮಕ ಶಕ್ತಿಯ (Positive energy) ಪ್ರವೇಶಕ್ಕೆ ದಾರಿ ಮಾಡಿ ಕೊಡುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ (Vastu Tips).

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದು ಭಾರತೀಯರ ಪ್ರಾಚೀನ ವಿಜ್ಞಾನವಾಗಿದೆ. ಇದನ್ನು ಅನುಸರಿಸುವ ಮೂಲಕ ಜೀವನದಲ್ಲಿ ನಕಾರಾತ್ಮಕತೆಯನ್ನು ತೊಡೆದುಹಾಕಬಹುದು ಮತ್ತು ಸಕಾರಾ ತ್ಮಕತೆಯನ್ನು ಹರಡಬಹುದು.

ಮನೆಯನ್ನು ಬೆಳಗಿಸುವ ಏಕೈಕ ಅಂಶವೆಂದರೆ ಬೆಳಕು. ಉತ್ತಮವಾದ ಬೆಳಕಿನೊಂದಿಗೆ ಮನೆಯನ್ನು ಬೆಳಗಿಸಿದರೆ ಮನೆ ಸಂತೋಷದ ಗೂಡಾಗುತ್ತದೆ. ಮನೆಯಲ್ಲಿ ದೀಪಗಳನ್ನು ಇಡುವುದು ಸಾಕಷ್ಟು ಪ್ರಯೋಜನಕಾರಿ ಎನ್ನುತ್ತದೆ ವಾಸ್ತು ನಿಯಮ. ಆದರೆ ಈ ದೀಪಗಳಿಂದ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಲು ವಾಸ್ತು ಶಾಸ್ತ್ರವು ಕೆಲವು ಉತ್ತಮ ಸಲಹೆಗಳನ್ನು ನೀಡಿದೆ.

ಮನೆಯಲ್ಲಿ ದೀಪ ಬೆಳಗಿಸುವುದು ಕೇವಲ ಸಂಪ್ರದಾಯವಲ್ಲ. ಅದು ದೈವಿಕತೆಯನ್ನು, ನಮ್ಮೊಳಗಿನ ಸಂತೋಷ, ಸಂಭ್ರಮವನ್ನು ಹೊರ ತೆಗೆಯುವ ಒಂದು ವಿಧಾನ. ಮನೆಯಲ್ಲಿ ದೀಪ ಬೆಳಗುವುದಕ್ಕೂ ರೀತಿ ನೀತಿಗಳಿವೆ. ಕೆಲವೊಂದು ದಿಕ್ಕು ಕೆಲವು ವಿಶೇಷ ಪ್ರಯೋಜನವನ್ನು ಕೊಡುತ್ತದೆ. ಇನ್ನು ಕೆಲವು ದಿಕ್ಕುಗಳು ನಷ್ಟ, ಹಣಕಾಸಿನ ತೊಂದರೆಯನ್ನು ಉಂಟು ಮಾಡಬಹುದು. ಹೀಗಾಗಿ ಮನೆಯಲ್ಲಿ ದೀಪ ಬೆಳಗುವ ಮುನ್ನ ಇದರ ಬಗ್ಗೆ ತಿಳಿದು ಕೊಳ್ಳುವುದು ಒಳ್ಳೆಯದು.

Vastu Tips

ಪಶ್ಚಿಮ ದಿಕ್ಕು

ಪಶ್ಚಿಮ ದಿಕ್ಕಿನಲ್ಲಿ ದೀಪವನ್ನು ಬೆಳಗಿಸುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿ ಸಕಾರಾತ್ಮಕತೆ ಮತ್ತು ಸಾಮರಸ್ಯವನ್ನು ತರುತ್ತದೆ. ಕುಟುಂಬದ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.

ಪೂರ್ವ ದಿಕ್ಕು

ಪೂರ್ವ ದಿಕ್ಕಿನಲ್ಲಿ ದೀಪವನ್ನು ಇಡುವುದರಿಂದ ಕುಟುಂಬದ ಸದಸ್ಯರ ಆಯುಷ್ಯ ಮತ್ತು ಆರೋಗ್ಯ ವೃದ್ಧಿಸುತ್ತದೆ. ಈ ದಿಕ್ಕು ಸೂರ್ಯನ ಉದಯದೊಂದಿಗೆ ಸಂಬಂಧಿಸಿದೆ. ಇದು ಹೊಸ ಆರಂಭ ಮತ್ತು ಚೈತನ್ಯವನ್ನು ಸಂಕೇತಿಸು ತ್ತದೆ.

ಉತ್ತರ ದಿಕ್ಕು

ಉತ್ತರ ದಿಕ್ಕು ಸಂಪತ್ತಿನ ದೇವರಾದ ಕುಬೇರನಿಗೆ ಸಂಬಂಧಿಸಿದೆ. ಈ ದಿಕ್ಕಿನಲ್ಲಿ ದೀಪವನ್ನು ಬೆಳಗಿಸುವುದರಿಂದ ಹಣಕಾಸಿನ ಸ್ಥಿರತೆ ಮತ್ತು ಸಮೃದ್ಧಿಯನ್ನು ಖಾತ್ರಿಗೊಳಿಸುತ್ತದೆ. ಇದು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ.

Vastu Tips: ಮನೆಯೊಳಗಿನ ಹಲವು ಸಮಸ್ಯೆಗಳನ್ನು ದೂರ ಮಾಡುತ್ತದೆ ಕರ್ಪೂರ

ಈ ದಿಕ್ಕಿನಲ್ಲಿ ದೀಪ ಬೆಳಗಬೇಡಿ

ದಕ್ಷಿಣ ದಿಕ್ಕನ್ನು ಸಾವಿನ ದೇವರು ಯಮರಾಜನು ಆಳುತ್ತಾನೆ. ಈ ದಿಕ್ಕಿನಲ್ಲಿ ದೀಪವನ್ನು ಹಚ್ಚುವುದರಿಂದ ಕುಟುಂಬದ ಸದಸ್ಯರ ಆಯುಷ್ಯ ಕಡಿಮೆಯಾಗುತ್ತದೆ ಮತ್ತು ಆರೋಗ್ಯ ಸಮಸ್ಯೆಗಳು ಮತ್ತು ಆರ್ಥಿಕ ತೊಂದರೆಗಳು ಉಂಟಾಗುತ್ತವೆ.