ಚಂಡಿಗಢ: ಹರಿಯಾಣ ವಿಧಾನಸಭಾ ಚುನಾವಣೆಗೆ (Haryana Election) ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಈಗಾಗಲೇ ಬಿಜೆಪಿ (BJP) ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಬಲವಾದ ಆಡಳಿತ ವಿರೋಧಿ ಅಲೆಗಳ ನಡುವೆಯೂ ಬಿಜೆಪಿ ರಾಜ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಪಣ ತೊಟ್ಟಿದ್ದು, ಅದಕ್ಕಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಪಕ್ಷದ ಹೊಸ ಪ್ರಯೋಗಕ್ಕೆ ಸಿಲುಕಿ ಸೀಟ್ ಕಳೆದುಕೊಂಡ ಪಕ್ಷದ ಇಬ್ಬರು ಪ್ರಮುಖ ನಾಯಕರು ಅತ್ತು ಗೋಳಾಡಿರುವ ಘಟನೆ ವರದಿಯಾಗಿದೆ. ಈ ಇಬ್ಬರು ನಾಯಕರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಜಿ ಶಾಸಕನ ಗೋಳಾಟ
ಬಿಜೆಪಿ ಮಾಜಿ ಶಾಸಕ ಶಶಿ ರಂಜನ್ ಪಾರ್ಮರ್ ಅವರನ್ನು ಬಿಜೆಪಿ ಈ ಬಾರಿ ಪಟ್ಟಿಯಿಂದ ಕೈಬಿಟ್ಟಿದೆ. ಅವರ ಬದಲಿಗೆ ಹೊಸ ಅಭ್ಯರ್ಥಿಗೆ ಮಣೆ ಹಾಕಿದೆ. ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಪಾರ್ಮರ್‌ಗೆ ಪಕ್ಷದ ನಿರ್ಧಾರ ಬಹಳ ಆಘಾತವನ್ನುಂಟು ಮಾಡಿದೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಪಾರ್ಮರ್ ನೋವಿನಿಂದ ಗೊಳೋ ಅಂತ ಅಂತಿದ್ದಾರೆ. ಪಟ್ಟಿಯಲ್ಲಿ ನನ್ನ ಹೆಸರು ಇದ್ದೇ ಇದೆ ಎಂದು ಭಾವಿಸಿದ್ದೆ. ನಾನು ನನ್ನ ಬೆಂಬಲಿಗರಿಗೂ ಹೇಳಿದ್ದೆ. ಈ ನಾನೇನು ಮಾಡಲಿ. ನಾನೀಗ ಅಸಹಾಯಕ ಎಂದು ಕಣ್ಣೀರಿಟ್ಟಿದ್ದಾರೆ.
Shashi Ranjan Parmar, former BJP candidate from Tosham, broke down in tears after losing his ticket to Shruti Choudhry, Has called a meeting with his supporters on September 6 at Bhiwani. may contest as independent #HaryanaElections2024 #BJP #Tosham #ShashiRanjan #ShrutiChoudhry pic.twitter.com/VgQimmX4Of
— Sushil Manav (@sushilmanav) September 5, 2024
ಆಗ ಸಂದರ್ಶಕ ಧೈರ್ಯವಾಗಿರಿ..ಎಲ್ಲವೂ ಸರಿ ಹೋಗುತ್ತೆ ಎಂದು ಸಮಾಧಾನ ಹೇಳುತ್ತಾನೆ. ನನ್ನ ತಪ್ಪೇನಿದೆ? ನನ್ನನ್ನು ಪಕ್ಷ ನಡೆಸಿಕೊಂಡ ರೀತಿ ಸರಿಯಿಲ್ಲ. ನಅನು ಈಗ ಬಹಳ ನೋವಿನಲ್ಲಿದ್ದೇನೆ? ನಾನೇನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಹಳ ನೋವಿನಿಂದಲೇ ಪಾರ್ಮರ್ ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ ಮಾಜಿ ಸಚಿವ ವಿಶಮ್ದಾರ್ ವಾಲ್ಮೀಕಿಗೂ ಈ ಬಾರಿ ಟಿಕೆಟ್ ಮಿಸ್ಸಾಗಿದೆ. ಟಿಕೆಟ್ ತಪ್ಪುತ್ತಿದ್ದಂತೆ ಬೆಂಬಲಿಗರ ಸಭೆ ನಡೆಸಿದ ಅವರು, ನೋವಿನಿಂದ ಕಣ್ಣೀರಿಟ್ಟಿದ್ದಾರೆ.
Former minister Vishambar Valmiki burst into tears while meeting his supporters.
— Akashdeep Thind (@thind_akashdeep) September 5, 2024
Reason:- A ticket denied by the BJP for the forthcoming Haryana assembly elections. pic.twitter.com/xicrButD9c
ಈ ಸುದ್ದಿಯನ್ನೂ ಓದಿ: Haryana Election: ಹರಿಯಾಣದಲ್ಲಿ ಹ್ಯಾಟ್ರಿಕ್ ಗೆಲುವಿಗೆ ಬಿಜೆಪಿ ಶತಪ್ರಯತ್ನ; ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗ