Friday, 20th September 2024

ಕಳೆದ 200 ದಿನಗಳಿಂದ ಈ ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ!

ತೈವಾನ್ : ಇಡೀ ವಿಶ್ವವೇ ಕೊರೋನಾ ಸೋಂಕಿಗೆ ಹೈರಾಣಾಗಿ ಹೋಗಿದೆ. ಕೊರೋನಾ ವೈರಸ್ ನಿಯಂತ್ರಣಕ್ಕೂ ಹರಸಾಹಸ ಪಡುವಂತಾಗಿದೆ. ಇದರ ಮಧ್ಯೆಯೂ ಈ ದೇಶದಲ್ಲಿ ಕಳೆದ 200 ದಿನಗಳಿಂದ ಒಂದೇ ಒಂದು ಕೊರೋನಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ ಇಡೀ ವಿಶ್ವವೇ ಈ ದೇಶದತ್ತ ಅಚ್ಚರಿಯಿಂದ ನೋಡುತ್ತಿದೆ.

ತೈವಾನ್ ದೇಶದಲ್ಲಿ ಕಳೆದ 200 ದಿನಗಳಿಂದ ಒಂದೇ ಒಂದು ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿಲ್ಲ. ಕಳೆದ ಏಪ್ರಿಲ್ 12ರಂದು ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದನ್ನು ಬಿಟ್ಟರೆ, ಇದುವರೆಗೆ ಒಂದೇ ಒಂದು ಕೊರೋನಾ ಸೋಂಕಿನ ಪ್ರಕರಣ ದಾಖಲಾಗಿಲ್ಲ.

ತೈವಾನ್ ನಲ್ಲಿ ಮಾತ್ರ ಸಮುದಾಯಕ್ಕೆ ಹರಡುವುದು ಇರಲೀ, ಕೊರೋನಾ ಸೋಂಕಿನ ಮತ್ತಷ್ಟು ಪ್ರಕರಣಗಳು ಏ.12ರಿಂದ ಇಲ್ಲಿಯವರೆಗೂ ದಾಖಲಾಗಿಲ್ಲ. ಹಾಗಾದರೆ 23 ಮಿಲಿಯನ್ ಜನರನ್ನು ಹೊಂದಿರುವ ತೈವಾನ್ ದ್ವೀಪ ರಾಷ್ಟ್ರ ಕೊರೋನಾ ನಿಯಂತ್ರಣ ಮಾಡಿದ್ದೇಗೆ ?

ಕೊರೋನಾ ವಿಶ್ವದೆಲ್ಲೆಡೆ ವ್ಯಾಪಿಸುತ್ತಿದ್ದಂತೆ, ಈ ದೇಶದ ತನ್ನ ಎಲ್ಲಾ ಗಡಿಗಳನ್ನು ಮುಚ್ಚಲಾಗಿತ್ತು. ಕೊರೋನಾ ಸೋಂಕು ಮತ್ತಷ್ಟು ಜನರಿಗೆ ಹರಡದಂತೆ ಕ್ವಾರಂಟೈನ್ ನಿಮಯವನ್ನು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವಂತ ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸಿದೆ. ಇದೇ ಕಾರಣದಿಂದ ತೈವಾನ್ ದೇಶದಲ್ಲಿ 553 ಜನರಿಗೆ ಮಾತ್ರವೇ ಕೊರೋನಾ ಸೋಂಕು ದೃಢ ಪಟ್ಟಿತ್ತು. ಬಲಿಯಾದವರ ಸಂಖ್ಯೆ 7 ಮಾತ್ರವೇ ಆಗಿದೆ.

ತೈವಾನ್ ಸರ್ಕಾರವೇ ತನ್ನ ದೇಶದ ಜನರಿಗೆ ಉತ್ತಮ ದರ್ಜೆಯ ಫೇಸ್ ಮಾಸ್ಕ್ ವಿತರಿಸಿದ್ದಲ್ಲದೇ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಕೊರೋನಾ ಸೋಂಕು ಪತ್ತೆ, ನಿಯಂತ್ರಣ ಕ್ರಮ ಕೈಗೊಂಡಿದೆ.