Saturday, 23rd November 2024

Dr Venugopal: ವಿದ್ಯಾರ್ಥಿಗಳು ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಿ: ಡಾ.ವೇಣುಗೋಪಾಲ್

ಹುಯಿಲ್‌ದೊರೆ ಸರಕಾರಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಶಿರಾ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜ ಮುಖಿ ಕೆಲಸ ಮಾಡಿ, ಹಳ್ಳಿಗಳ ಸುಧಾರಣೆಗೆ ತೊಡಗಬೇಕು ಎಂದು ನಿವೃತ್ತ ಪ್ರಾಂಶುಪಾಲರಾದ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಹೇಳಿದರು.

ಅವರು ತಾಲ್ಲೂಕಿನ ಹುಯಿಲ್ ದೊರೆ ಗ್ರಾಮದ ಸರಕಾರಿ ಸ್ವತಂತ್ರ ಪದವಿ ಪೂರ್ವ ಹಾಗೂ ಪ್ರಥಮ ಧರ್ಜೆ ಕಾಲೇಜಿ ನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ಯಶಸ್ಸು ಗಳಿಸಿ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಪರಶುರಾಮಯ್ಯ ಮಾತನಾಡಿ, ಶಿಕ್ಷಣ ಸಾಮಾನ್ಯರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯು ವುದು, ಹಾಗಾಗಿ ಶಿಕ್ಷಣದ ಕಡೆ ಗ್ರಾಮೀಣ ಮಕ್ಕಳು ಹೆಚ್ಚು ಒತ್ತು ನೀಡಬೇಕೆಂದು ಹೇಳಿದರು.

ಪ್ರಾಂಶುಪಾಲ ಎನ್.ವಸಂತಕುಮಾರ್ ಮಾತನಾಡಿ, ಇಷ್ಟಪಟ್ಟು ಪಡೆದುಕೊಂಡ ಶಿಕ್ಷಣ ಜೀವನಕ್ಕೆ ದಾರಿದೀಪ ಆಗುವುದು. ವಿದ್ಯಾರ್ಥಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಿಂದ ಸುಮಾರು 10 ಸಾವಿರ ಮೌಲ್ಯದ ಪುಸ್ತಕಗಳನ್ನು ಕಾಲೇಜಿಗೆ ನೀಡಲಾ ಯಿತು. ಉಪನ್ಯಾಸಕರಾದ ಲತಾರಾಣಿ, ಶ್ರೀನಿವಾಸ್, ಡಾ. ಶಂಕರಪ್ಪ ಎನ್.ಎಸ್., ರಂಗಪ್ಪ ಸೇರಿದಂತೆ ಹಲವರು ಹಾಜರಿದ್ದರು.