ಬೆಂಗಳೂರು: ಇಂಗ್ಲೆಂಡ್ ತಂಡದ (England Cricket Team) ಸ್ಟಾರ್ ಆಲ್ರೌಂಡರ್ ಮೊಯೀನ್ ಅಲಿ (Moeen Ali) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಇಂಗ್ಲೆಂಡ್‌ನ ವೈಟ್-ಬಾಲ್ ತಂಡದಲ್ಲಿಅ ವರಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಜೂನ್ 27 ರಂದು ಗಯಾನಾದಲ್ಲಿ ನಡೆದ ಐಸಿಸಿ ಪುರುಷರ ಟಿ 20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಸೆಮಿಫೈನಲ್‌ನಲ್ಲಿ ಅವರು ಇಂಗ್ಲೆಂಡ್ ಪರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. 37 ವರ್ಷದ ಮೊಯೀನ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ ಸಮಯ ಎಂದು ಕರೆದುಕೊಂಡಿದ್ದು, ಯುವ ಆಟಗಾರರಿಗೆ ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಅವಕಾಶ ನೀಡುವುದೇ ಗುರಿ ಎಂದಿದ್ದಾರೆ. ಮೊಯೀನ್ ಅವರು ಕ್ರಿಕೆಟ್ ಲೀಗ್‌ಗಳಲ್ಲಿ ತಮ್ಮ ಆಟ ಮುಂದುವರಿಸಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಅವರು ಇಲ್ಲೂ ಅಭಿಯಾನ ಮುಂದುವರಿಸುವ ಸಾಧ್ಯತೆಗಳಿವೆ.
Moeen Ali retires from international cricket
— Cricketopia (@CricketopiaCom) September 8, 2024
250 runs and 20 wickets in a test series ✔️
An ODI hundred in less than 60 balls ✔️
A Test Hat-trick ✔️
A Ten-for in a test ✔️
World Cup Winner ✔️ pic.twitter.com/Vs0gzlhT4i
ನನಗೆ 37 ವರ್ಷ ವಯಸ್ಸಾಗಿದ್ದು ಈ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿಲ್ಲ ಎಂದು ಮೊಯೀನ್ ಡೈಲಿ ಮೇಲ್ ಸಂದರ್ಶನದಲ್ಲಿ ಹೇಳಿದ್ದರು. ನಾನು ಇಂಗ್ಲೆಂಡ್ ಪರ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಇದು ಮುಂದಿನ ಪೀಳಿಗೆಗೆ ಅವಕಾಶ ಕೊಡುವ ಸಮಯ. ನಿವೃತ್ತಿಗೆ ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ, “ಎಂದು 2014 ರಲ್ಲಿ ಇಂಗ್ಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಆಲ್‌ರೌಂಡರ್ ಮೊಯೀನ್ ಹೇಳಿದ್ದಾರೆ.
ಮೊಯಿನ್ ಅಲಿ ವೃತ್ತಿಜೀವನ
ಮೊಯಿನ್ ಇಂಗ್ಲೆಂಡ್ ತಂಡದ ನಿಯಮಿತ ಆಟಗಾರರಾಗಿದ್ದರು. ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ಕೊಡುಗೆ ನೀಡಿದ್ದಾರೆ. ಇಂಗ್ಲೆಂಡ್ ಪರ 68 ಟೆಸ್ಟ್, 138 ಏಕದಿನ ಹಾಗೂ 92 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಇಂಗ್ಲೆಂಡ್ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ 6678 ರನ್, ಎಂಟು ಶತಕಗಳು, 28 ಅರ್ಧಶತಕಗಳು ಮತ್ತು 366 ವಿಕೆಟ್‌ಗಳನ್ನು ಉರುಳಿಸಿ ಮಿಂಚಿದ್ದಾರೆ.
ನನಗೆ ತುಂಬಾ ಹೆಮ್ಮೆ ಇದೆ. ಮೊದಲು ಇಂಗ್ಲೆಂಡ್ ಪರ ಆಡಿದಾಗ ಎಷ್ಟು ಪಂದ್ಯಗಳನ್ನು ಆಡಲಿದ್ದೇನೆ ಎಂದು ತಿಳಿದಿರಲಿಲ್ಲ. ಆದರೂ ಸುಮಾರು 300 ಪಂದ್ಯಗಳನ್ನು ಆಡಲು ಸಾಧ್ಯವಾಯಿತು. ನನ್ನ ಮೊದಲ ಕೆಲವು ವರ್ಷಗಳು ಟೆಸ್ಟ್ ಕ್ರಿಕೆಟ್ ಬಗ್ಗೆಯೇ ಇದ್ದವು. ಇಯಾನ್ ಮಾರ್ಗನ್ ಏಕದಿನ ತಂಡದ ನಾಯಕತ್ವ ವಹಿಸಿಕೊಂಡ ನಂತರ ಆ ತಂಡದಲ್ಲಿ ಆಡುವುದು ಮೋಜಿನ ಸಂಗತಿಯಾಗಿತ್ತು ಎಂದು ಮೊಯೀನ್ ಹೇಳಿದ್ದಾರೆ.
ಮೊಯೀನ್ 10 ವರ್ಷಗಳ ಹಿಂದೆ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ತಮ್ಮ ತಂಡದ ಪರ ಪಾದಾರ್ಪಣೆ ಮಾಡಿದ್ದರು. ಆ ವರ್ಷದ ಕೊನೆಯಲ್ಲಿ ಶ್ರೀಲಂಕಾ ಇಂಗ್ಲೆಂಡ್‌ಗೆ ಭೇಟಿ ನೀಡಿದಾಗ ಈ ಸರಣಿಯಲ್ಲಿ ಅವರು ಅವಕಾಶ ಪಡೆದಿದ್ದರು.
“ತಂಡವು ವಿಕಸನಗೊಳ್ಳಬೇಕಾಗಿದೆ”
ಈಗಲೂ ನಾನು ವಾಸ್ತವದಲ್ಲಿರಲು ಪ್ರಯತ್ನಿಸುತ್ತಿದ್ದೇನೆ. ನಾನು ಮತ್ತೆ ಇಂಗ್ಲೆಂಡ್ ಪರ ಆಡಲು ಪ್ರಯತ್ನಿಸಬಹುದು, ಆದರೆ ಅದು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಆದರೆ ನಾನು ಇನ್ನೂ ಆಡಬಲ್ಲೆ ಎಂದು ನಾನು ಭಾವಿಸುತ್ತೇನೆ. ಆದಾಗ್ಯೂ ಹೊಸಬರ ಆಗಮನದೊಂದಿಗೆ ತಂಡ ಇನ್ನಷ್ಟು ವಿಕಸನಗೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Anushka Sharma : ಇಬ್ಬರು ಮಕ್ಕಳನ್ನು ಪೋಷಿಸುವ ಬವಣೆ ವಿವರಿಸಿದ ಅನುಷ್ಕಾ ಶರ್ಮಾ
ಮೊಯೀನ್ ಅವರು ಫ್ರ್ಯಾಂಚೈಸ್ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತಾರೆ ಮತ್ತು ತಮ್ಮ ವೃತ್ತಿಜೀವನದ ನಂತರದ ವರ್ಷಗಳಲ್ಲಿ ಕೋಚಿಂಗ್‌ನಲ್ಲಿ ತೊಡಗಿಸಿಕೊಳ್ಳಬಹುದು ಎಂದು ಹೇಳಿದ್ದಾರೆ, ಮೊಯೀನ್ ಪ್ರಸ್ತುತ ಸಿಪಿಎಲ್ 2024 ರಲ್ಲಿ ಹಾಲಿ ಚಾಂಪಿಯನ್ ಗಯಾನಾ ಅಮೆಜಾನ್ ವಾರಿಯರ್ಸ್ ಪರ ಆಡುತ್ತಿದ್ದಾರೆ.
ಸ್ವಲ್ಪ ಫ್ರ್ಯಾಂಚೈಸ್ ಕ್ರಿಕೆಟ್ ಆಡಬೇಕಾಗಿದೆ. ಏಕೆಂದರೆ ನಾನು ಇನ್ನೂ ಆಡಲು ಇಷ್ಟಪಡುತ್ತೇನೆ. ಆದರೆ ಕೋಚಿಂಗ್ ನಾನು ಮಾಡಲು ಬಯಸುವ ವಿಷಯವಾಗಿದೆ. ನಾನು ಅತ್ಯುತ್ತಮರಲ್ಲಿ ಒಬ್ಬನಾಗಲು ಬಯಸುತ್ತೇನೆ. ಬ್ರೆಂಡನ್ ಮೆಕಲಮ್ ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ ಎಂದು ಮೊಯೀನ್ ಹೇಳಿದ್ದಾರೆ.