Friday, 22nd November 2024

Ganeshotsava: ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ 48ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ

ತುಮಕೂರು: ನಗರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ 48ನೇ ವರ್ಷದ 28 ದಿನಗಳ ಗಣೇಶೋ ತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.

48ನೇ ವರ್ಷದ ಗಣೇಶೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮನಸ್ಸು ಮತ್ತು ಭಾವನೆಗಳು ಶುದ್ಧಿಗೊಳಿಸುವಂತಹದ್ದು ಹಬ್ಬಗಳ ಆಚರಣೆಯ ಮುಖ್ಯ ಸಂದೇಶ ವಾಗಿದೆ. ಎಲ್ಲ ಸಮುದಾಯದವರು ಸಾಂದರ್ಭಿಕವಾಗಿ ಹಬ್ಬಗಳನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ ಎಂದರು.

ಮನೆಗಳಲ್ಲಿ ಗಣೇಶೋತ್ಸವನ್ನು ಮಾಡಿಕೊಳ್ಳುವಂತಹ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಗ್ರವಾಗಿ ಒಟ್ಟಾಗಿ ಸೇರಿ ಐಕ್ಯತೆಯಿಂದ ಗಣೇಶೋತ್ಸವವನ್ನು ಮಾಡಬೇಕೆಂಬ ವ್ಯವಸ್ಥೆ ಮಾಡಿ ಜನರಲ್ಲಿ ಸ್ವಾತಂತ್ರ್ಯೋತ್ಸವದ ಕಿಚ್ಚನ್ನು ಹಚ್ಚಬೇಕು ಎಂಬ ಉದ್ಧೇಶವನ್ನಿಟ್ಟುಕೊಂಡು ಪ್ರಾರಂಭ ಮಾಡಿದರು ಎಂದು ಹೇಳಿದರು.

ಮಹಾದ್ವಾರ ಉದ್ಘಾಟಿಸಿದ ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಡೀ ನಾಡು ಸಂಭ್ರಮದಿAದ ಗಣೇಶನ ಪ್ರತಿಷ್ಠಾಪನಾ ಉತ್ಸವದಲ್ಲಿ ಭಾಗಿಯಾಗಿದೆ. ಹಾಗೆಯೇ ಸಿದ್ದಿವಿನಾಯಕ ಸೇವಾ ಮಂಡಳಿ ಕಳೆದ 48 ವರ್ಷಗಳಿಂದ ನಗರದಲ್ಲಿ ಗಣಪತಿ ಹಬ್ಬವನ್ನು ಮಾಡುತ್ತಾ ಬಂದಿದೆ. ನಿರಂತರವಾಗಿ 48 ವರ್ಷಗಳಿಂದ ವಿಘ್ನೇಶ್ವರನ ಜಾತ್ರೆ ನಡೆಸಿಕೊಂಡು ಬರುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಗಣೇಶ ಸಂಘಟನೆಗೆ ಪ್ರಧಾನ ದೇವತೆ, ಇದನ್ನೇ ಅರಿತೇ ತಿಲಕರು ಸ್ವಾತಂತ್ರ ಹೋರಾಟದಲ್ಲಿ ಜನರನ್ನು ತೊಡಗಿ ಸಲು ಸಾಮೂಹಿಕ ಗಣೇಶ ಉತ್ಸವಗಳನ್ನು ಆರಂಭಿಸಿದರು. ಅದನ್ನು ಇಂದಿಗೂ ಮುಂದುವರೆಸಿಕೊಂಡು ಬರಲಾಗು ತ್ತಿದೆ. ಘರ್ ಘರ್ ಮೇ ಗಣಪತಿ ಹೋಗಿ, ಇಂದು ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆಯುತ್ತಿದೆ. ಇದು ಒಳ್ಳೆಯ ಬೆಳೆವಣ ಗೆ, ಯುವಜನತೆ ಹೆಚ್ಚಿನ ರೀತಿಯಲ್ಲಿ ಇದರಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂಘಟನೆಯ ದೃಷ್ಟಿಯಿಂದ ಒಳ್ಳೆಯದು ಎಂದರು.

ದೃಶ್ಯಾವಳಿ ಉದ್ಘಾಟಿಸಿ ಶಾಸಕ ಜ್ಯೋತಿಗಣೇಶ್ ಮಾತನಾಡಿ, ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಳಸ ಪ್ರಾಯವಾಗಿದೆ,

ಮುಂದಿನ ದಿನಗಳಲ್ಲಿ ಸಿದ್ದಿವಿನಾಯಕ ಸೇವಾ ಮಂಡಳಿಯ ಅಭಿವೃದ್ಧಿ ಕಾರ್ಯಕ್ಕೆ ಶಾಸಕರ ಅನುದಾನ ನೀಡುವು ದಾಗಿ ಭರವಸೆ ನೀಡಿದ ಅವರು, ಮಂಡಳಿಯ ಇತಿಹಾಸ ಕಾಪಾಡಿಕೊಂಡು ಹೋಗುವುದು ಮಂಡಳಿಯ ಪ್ರತಿಯೊಬ್ಬ ಸದಸ್ಯರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಮಾತನಾಡಿ, ರಾಜ್ಯದಲ್ಲಿ ಅತಿಹೆಚ್ಚು ಹಳೆಯ ಇತಿಹಾಸವನ್ನು ಸಿದ್ದಿವಿನಾಯಕ ಸೇವಾ ಮಂಡಳಿ ಹೊಂದಿದೆ. ಭಕ್ತಿ ಭಾವದಿಂದ ಒಗ್ಗಟ್ಟಿನಿಂದ ಗಣೇಶೋತ್ಸವವನ್ನು ಆಚರಿಸುತ್ತಿರು ವುದು ಸಂತೋಷಕರ ವಿಚಾರ ಎಂದರು.

ಸಿದ್ದಿವಿನಾಯಕ ಸೇವಾ ಮಂಡಳಿಯ ಅಧ್ಯಕ್ಷ ಎಚ್.ಆರ್.ನಾಗೇಶ್ ಮಾತನಾಡಿ, 1977ರಿಂದ ಈ ಸಿದ್ದಿ ವಿನಾಯಕ ಸೇವಾ ಮಂಡಳಿ ಶ್ರೀ ಸಿದ್ದಗಂಗಾ ಶ್ರೀಗಳ ನೇತೃತ್ವದಲ್ಲಿ ಆರಂಭವಾದ ಗಣೇಶಮೂರ್ತಿ ಪ್ರತಿಷ್ಠಾಪನೆ ಯಾವುದೇ ವಿಘ್ನವಿಲ್ಲದೆ ನಡೆಯುತ್ತಿದೆ. ಸುಮಾರು 28 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಉತ್ಸವದಲ್ಲಿ ದೇಶದ ಹಿರಿಯ ಕಲಾವಿದರು ಪಾಲ್ಗೊಂಡು ಕಾರ್ಯಕ್ರಮ ನೀಡುತ್ತಿದ್ದಾರೆ. ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಸಮುದಾಯವನ್ನು ಶುಭ ಸಮಾರಂಭಗಳಿಗೆ ಅತಿ ಕಡಿಮೆ ಬಾಡಿಗೆಗೆ ನೀಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಡಳಿಯ ಉಪಾಧ್ಯಕ್ಷ ಟಿ.ಹೆಚ್. ಪ್ರಸನ್ನಕುಮಾರ್, ಕೋರಿ ಮಂಜಣ್ಣ, ರಾಘವೇಂದ್ರ, ಜಗಜ್ಯೋತಿ ಸಿದ್ದರಾಮಯ್ಯ ಟಿ.ಎಸ್, ಪ್ರಭು ಎಸ್.ಜಿ., ಆರ್.ಜೆ. ಸುರೇಶ್, ರೇಣುಕಾ ಪರಮೇಶ್, ಜಿಯಾವುಲ್ಲಾ, ಅನುಸೂಯಮ್ಮ, ನಟರಾಜು, ಶ್ರೀನಾಥ್ ಮತ್ತಿತರರು ಉಪಸ್ಥಿತರಿದ್ದರು.