ಮುಂಬೈ: ಮಹಾರಾಷ್ಟ್ರದ (Maharashtra) ತಿಲಾರಿ ಡ್ಯಾಂನಲ್ಲಿ ನಡೆದ ರಿವರ್ ಕ್ರಾಸಿಂಗ್ (River Crossing) ತರಬೇತಿ ವೇಳೆ ಬೋಟ್ ಮುಳುಗಿ ಬೆಳಗಾವಿ ಕಮಾಂಡೋ ಸೆಂಟರ್‌ನ ಇಬ್ಬರು ಕಮಾಂಡೋಗಳು (Commando) ಮೃತಪಟ್ಟಿದ್ದಾರೆ. ಮೃತರನ್ನು ಬೆಳಗಾವಿಯ (Belagavi) ಜೆಎಲ್ ವಿಂಗ್ ಕಮಾಂಡೋ ತರಬೇತಿ ಕೇಂದ್ರದ ರಾಜಸ್ಥಾನ ಮೂಲದ ವಿಜಯ್ ಕುಮಾರ್ ದಿನವಾಲ್ (28) ಹಾಗೂ ಪಶ್ಚಿಮ ಬಂಗಾಳ ಮೂಲದ ದಿವಾಕರ್ ರಾಯ್ (26) ಎಂದು ಗುರುತಿಸಲಾಗಿದೆ (Boat Sinking).
ʼʼರಿವರ್ ಕ್ರಾಸಿಂಗ್ ತರಬೇತಿ ವೇಳೆ ಬೋಟ್ ಮುಳುಗಿ ಇಬ್ಬರು ಕಮಾಂಡೋಗಳು ಮೃತಪಟ್ಟಿದ್ದಾರೆ. ಈ ವೇಳೆ ನಾಲ್ವರು ಪವಾಡ ಸದೃಶವಾಗಿ ಪಾರಾಗಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ. ಹಿನ್ನೀರಿನ ಒಂದು ದಡದಿಂದ ಇನ್ನೊಂದು ದಡಕ್ಕೆ 6 ಮಂದಿ ಬೋಟ್‌ನಲ್ಲಿ ಚಲಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಕಾರಣ ತಿಳಿದು ಬಂದಿಲ್ಲ
ಮೃತಪಟ್ಟ ಇಬ್ಬರು ಜವಾನರು ಕಮಾಂಡೋ ಸೆಂಟರ್‌ನ ಸೈನಿಕರಿಗೆ ರಿವರ್ ಕ್ರಾಸಿಂಗ್ ತರಬೇತಿ ನೀಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೋಟ್ ಯಾವ ಕಾರಣಕ್ಕಾಗಿ ಮುಳುಗಿದೆ ಎನ್ನುವ ಬಗ್ಗೆ ಮಾಹಿತಿ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಲಾಗುತ್ತಿದೆ.
ಹೆಲಿಕಾಪ್ಟರ್ ಪತನ
ಗಾಂಧಿನಗರ: ಇತ್ತೀಚೆಗೆ ಗುಜರಾತ್(Gujarat)ನ ಪೋರ್ ಬಂದರ್‌ನ ಸಮೀಪ ಅರಬ್ಬಿ ಸಮುದ್ರದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ (Emergency Landing) ಮಾಡಿದ್ದ ಭಾರತೀಯ ಕರಾವಳಿ ಭದ್ರತಾ ಪಡೆ (Indian Coast Guard-ICG)ಯ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (Advanced Light Helicopter-ALH) ಪತನವಾಗಿ ಅದರಲ್ಲಿದ್ದ ಇಬ್ಬರ ಮೃತದೇಹ ಪತ್ತೆಯಾಗಿತ್ತು. ಮತ್ತೊರ್ವ ಸಿಬ್ಬಂದಿಗಾಗಿ ತೀವ್ರ ಹುಡುಕಾಟ ನಡೆಸಲಾಗಿದೆ.
ಹಡಗನ್ನು ಸ್ಥಳಾಂತರಿಸುವ ವೇಳೆ ಈ ಅವಘಢ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಗುಜರಾತ್‌ನಲ್ಲಿ ಇತ್ತೀಚೆಗೆ ಬೀಸಿದ ಭೀಕರ ಚಂಡಮಾರುತದ ಸಮಯದಲ್ಲಿ 67 ಮಂದಿಯನ್ನು ಭಾರತೀಯ ಕರಾವಳಿ ಭದ್ರತಾ ಪಡೆ ಈ ಹೆಲಿಕಾಪ್ಟರ್ ಮೂಲಕ ರಕ್ಷಿಸಿತ್ತು. ಪ್ರಾಥಮಿಕ ಮಾಹಿತಿಯಿಂದ ಹೆಲಿಕಾಪ್ಟರ್ (ಟೈಲ್ ನಂಬರ್ ಸಿಜಿ 863) ಸಮುದ್ರ ಮಟ್ಟಕ್ಕಿಂತ ಕೆಲವೇ ಕೆಲವು ಮೀಟರ್ ಎತ್ತರದಿಂದ ಹಾರಾಟ ನಡೆಸಿ ತುರ್ತು ಲ್ಯಾಂಡಿಂಗ್‌ಗೆ ಯತ್ನಿಸಿತ್ತು. ಈ ವೇಳೆ ಪತನಗೊಂಡಿತ್ತು.
ಕೋಸ್ಟ್ ಗಾರ್ಡ್ ತನ್ನ ALH ಫ್ಲೀಟ್‌ನ ಒಂದು-ಬಾರಿ ಸುರಕ್ಷತಾ ತಪಾಸಣೆಗೊಳಪಡಿಸಿದ್ದು, ಇದನ್ನು ಬೆಂಗಳೂರು ಮೂಲದ ವಿಮಾನ ತಯಾರಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿತ್ತು.
ಈ ಸುದ್ದಿಯನ್ನೂ ಓದಿ: Shivamogga News: ಡೊಳ್ಳು ಬಾರಿಸುವ ಬದಲು ಎದುರಾಳಿ ಗುಂಪಿಗೆ ಬಾರಿಸಿದರು! ಗಣಪತಿ ವಿಸರ್ಜನೆ ಗಲಾಟೆ