Friday, 20th September 2024

MP Ramesh Jigajinagi: ರಾಜಕಾರಣ ಬಿಸಿಲು ಕುದುರೆ ಬೆನ್ನು ಹತ್ತಬಾರದು-ರಮೇಶ ಜಿಗಜಿಣಗಿ

ಇಂಡಿ: ಸಾರ್ವಜನಿಕ ವಲಯದಲ್ಲಿ ನನ್ನ 26ನೇ ವಯಸ್ಸಿನಿಂದ ಇಲ್ಲಿಯವರೆಗೆ ರಾಜಕಾರಣದಲ್ಲಿ ಸುದೀರ್ಘ ಬೆಳೆಸಿದ ಜನತೆಗೆ ಯಾವ ಪದಗಳಿಂದ ಹೂಗಳಿದರೂ ಸಾಲದು. ನಾನು ರಾಜಕಾರಣದಲ್ಲಿ ಜಾತಿ ಮಾಡಲಿಲ್ಲ. ನೀತಿ, ಧರ್ಮದ ರಾಜಕೀಯ ಮಾಡಿರುವೆ ರಾಜಕಾರಣ ಬಿಸಿಲು ಕುದುರೆ ಇದ್ದ ಹಾಗೆ ಎಂದು ನನ್ನ ರಾಜಕೀಯ ಆದರ್ಶ ಗುರುಗಳಾದ ಜೆ.ಹೆಚ್ ಪಟೇಲ್ ರಾಮಕೃಷ್ಣ ಹೆಗಡೆ ಹೇಳಿದ್ದಾರೆ. ಇದು ಇಂದಿಗೂ ಮರೆತಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಹೆದ್ದಾರಿ ಮಹಾರಾಷ್ಟ್ರದ ಗಡಿ ಮುರುಮದಿಂದ ಮಾಶ್ಯಾಳ, ಇಂಡಿ, ಅಥರ್ಗಾ,ನಾಗಠಾಣ ವಿಜಯಪೂರ ವರೆಗೆ ೧೦೨ ಕೀಮಿ ಉದ್ದದ ರಸ್ತೆ ಭೂಮಿ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಾನು ಎಂದಿಗೂ ಪ್ರಚಾರದ ಅಬ್ಬರ ವ್ಯಕ್ತಿಯಲ್ಲ ಅಬ್ಬರ ಮಾಡಿದವರೂ ಉಳಿಯುವುದಿಲ್ಲ ಎಂಬುದು ಗೊತ್ತು. 

ಸಾರ್ವಜನಿಕರಿಗೆ ಒಳ್ಳೆಯ ಕೆಲಸಗಳಾದರೆ ಸಾಕು ಬ್ಯಾನರ್, ಕಟೌಟ್ ಬೇಕಾಗಿಲ್ಲ ಜಿಲ್ಲೆಯ ಅಭಿವೃದ್ದಿಗೆ ಸಾವಿರಾರು ಕೋಟಿ ಅನುಧಾನ ತಂದಿದ್ದೇನೆ ಆದರೆ ಬೇರೆಯವರು ನಾನೇ ತಂದಿರುವೆ ಎಂದು ಅಬ್ಬರ ಪ್ರಚಾರ ಭೂಮಿ ಪೂಜೆ ಮಾಡುತ್ತಾರೆ ಮಾಡಲಿ ಬೀಡ್ರೀ ಮರ‍್ಯಾಯರಾ ಎಂದಿದ್ದೇನೆ. ‌

ಇಂದಿನ ಕಾರ್ಯಕ್ರಮಕ್ಕೆ ಸಾವಿರಾರು ಜನರಿಗೆ ಕರೆಸಿ ಭೂಮಿ ಪೂಜಾ ಮಾಡುವುದು ನನಗೆ ಇಷ್ಟವಿಲ್ಲ ಜನರಿಗೆ ಗಾಡಿ, ಜೀಪು, ಹಣ ಕೊಟ್ಟು ಕರೆಸುತ್ತಾರೆ ನಾನು ಬಡ ವ್ಯಕ್ತಿ ನನ್ನಲ್ಲಿ ಹಣ ಇಲ್ಲ ಯಾರಿಗೂ ಕೈಚಾಚುವ ಅಭ್ಯಾಸ ನನಗಿಲ್ಲ ರಾಜಕಾರಣದ ಇತಿಹಾಸದಲ್ಲಿ ಯಾವ ಅಧಿಕಾರಿಯಿಂದ ಹಣ ಕಿತ್ತು ಕೊಂಡಿಲ್ಲ, ಹೀಗಾಗಿ ಭೂಮಿ ಪೂಜಾ ಕಾರ್ಯಕ್ರಮಗಳು ಸರಳವಾಗಿ ಜನರಿಗೆ ಒಳ್ಳೇಯದಾದರೆ ಸಾಕು ಎಂಬ ಮನೋಧೋರಣೆ ಇಟ್ಟುಕೊಂಡಿದ್ದೇನೆ. 

ಇಂದು ನಿಮಗೆ ಖುಷಿಯಾಗಿದೆಯೋ ಅಥವಾ ಇಲ್ಲೋ ಗೊತ್ತಿಲ್ಲ ಆದರೆ ನನಗೆ ಬಹಳ ಸಂತೋಷವಾಗಿದೆ. ಈ ರಾಷ್ಟ್ರೀಯ ಹೆದ್ದಾರಿ ಆಗಬೇಕಾದರೆ ಬಹಳ ಪ್ರಯಾಸವಾಗಿದೆ. ಕೇಂದ್ರ ಮಂತ್ರಿ ನಿತೀನ ಗಡ್ಕರಿಯವರಿಗೆ ಮುರುಮ ದಿಂದ ಸಂಕೇಶ್ವರ ಇಂಡಿ ಮೇಲಿನಿಂದ ರಾಷ್ಟ್ರೀಯ ಹೆದ್ದಾರಿ ಹಾಯಿಸಿ ಎಂದು ಮನವಿ ಮಾಡಿ ರುವದರಿಂದ ಇಂದು ಸುಮಾರು ೧೦೨ ಕೀ,ಮೀ ಉದ್ದ ೯೮೪ ಕೋಟಿ ರೂ ಮಂಜೂರಾತಿ ತಂದಿರುವೆ. ನಾನು ಏನೂ ಮಾಡಿಲ್ಲ ಎನ್ನುತ್ತಾರೆ. ೭೦ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಯಾದ ಜಲಜೀವನ್ ಮಶೀನ್ ೧೧೦ ಕೋಟಿಯ ಕುಡಿಯುವ ನೀರಿನ ಯೋಜನೆ ತಂದಿದ್ದೇನೆ. ಈ ಹಿಂದೆ ಇಂಡಿ ತಾಲೂಕಿನ ನೀರಾವರಿ ಯೋಜನೆಗಳಿಗೆ ಅಂದಿನ ಪ್ರಧಾನ ಮಂತ್ರಿ ದೇವೇಗೌಡರ ಕೃಪಾರ್ಶೀವಾದಿಂದ ೬೪ ಸಾವಿರ ಕೋಟಿ ರೂ ನೀರಾವರಿ ಯೋಜನೆ ನಾನೇ ಮಾಡಿಸಿರುವೆ.

ಜಿಲ್ಲೆಯಲ್ಲಿ ವಿದ್ಯುತ ಅಭಾವ ಇರುವದರಿಂದ ಮಂಗಳೂರಿಗೆ ಮಂಜೂರಾಗಿದ್ದ ಉಷ್ಣಸ್ಥಾವರವನ್ನು ಅಂದಿನ ಕೇಂದ್ರ ಮಂತ್ರಿ ಸುಶೀಲ ಕುಮಾರ ಸಿಂಧೆಯವರಿಗೆ ಕಾಲಿಗೆ ಬಿದ್ದು ಕೂಡಿಗಿಯಲ್ಲಿ ಎನ್.ಟಿ.ಪಿ.ಸಿ ಸ್ಥಾವರ ಸ್ಥಾಪಿಸಬೇಕು ಎಂದು ಹೇಳಿದಾಗ ನನ್ನ ಹಿರಿತನಕ್ಕೆ ಗೌರವ ನೀಡಿ ಎನ್.ಟಿ.ಪಿ.ಸಿ ಉಷ್ಣಸ್ಥಾವರ ಸುಮಾರು ೪೨ ಸಾವಿರ ಕೋಟಿ ಯೋಜನೆ ಮಂಜೂರಾತಿ ತಂದಿದ್ದೇನೆ.

ತಾಲೂಕಿನ ನೀರಾವರಿ ಯೋಜನೆಗಳಾದ ಶ್ರೀರೇವಣಸಿದ್ದೇಶ್ವರ ಯಾತ ನೀರಾವರಿಗೆ ಹಿಂಬದಿಯಿಂದ ರೈತರ ಹೋರಾಟಕ್ಕೆ ಸಾಥ್ ನೀಡಿ ಅಂದಿನ ನೀರಾವರಿ ಸಚಿವ ಗೋವಿಂದ ಕಾರಜೋಳ ಹಾಗೂ ಮುಖ್ಯ ಮಂತ್ರಿ ಬೋಮ್ಮಾಯಿಯವರಿಗೆ ರೈತರ ಸಮಸ್ಯ ಮನವರಿಕೆ ಮಾಡಿ ೩ ಸಾವಿರ ಕೋಟಿ ನೀರಾವರಿ ಯೋಜನೆ ತಂದಿರುವೆ ಆ ಕಾರ್ಯ ತ್ವರಿತಗತಿಯಲ್ಲಿ ನಡೆದಿದೆ.

ತಾಲೂಕಿನ ೧೯ ಕೆರೆಗಳ ನೀರಾವರಿ ೨ ನೂರು ಕೋಟಿ ಅನುಧಾನ ತಂದಿದ್ದೇನೆ. ತಿಕೋಟಾ ಭಾಗದಲ್ಲಿ ೨ ಕೋಟಿ ಕಾಮಗಾರಿ ಮಂಜೂರಾತಿ ಆಗಲು ಶ್ರಮಿಸಿದ್ದೇನೆ ಆದರೆ ಆಭಾಗದ ಜನಪ್ರತಿನಿಧಿಗಳು ನಾನು ತಂದಿ ರುವೆ ಎಂದು ಅಬ್ಬರದ ಪ್ರಚಾರ ಮಾಡಿಕೊಳ್ಳುತ್ತಾರೆ. 

ಇಂದು ಕೇನಾಲ್‌ಗಳಿಗೆ ಕೊನೆಯ ಹಂತದವರೆಗೆ ನೀರು ಹರಿಯುತ್ತಿಲ್ಲ ಇದರ ದುರಸ್ತೆಗಾಗಿ ಅಭಿವೃದ್ದಿಗೆ ೨ ಸಾವಿರದಾ ೭ ನೂರು ಕೋಟಿ ರೂ ಕೇಂದ್ರ ಸರಕಾರಕ್ಕೆ ಮನವಿ ಮಾಡಿರುವೆ.೧೦ ವರ್ಷದಲ್ಲಿ ಸಾವಿರ ಕೀ.ಮೀ ರಸ್ತೆ ಕಾಮಗಾರಿ ನಡೆದಿದ್ದು ಅದಕ್ಕಾಗಿ ೩ ಸಾವಿರದ ೫ ನೂರಾ ೧೬ ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ ಎಂದರು.

ಮಾಜಿ ವಿಧಾನ ಪರಿಷ್ಯತ ಸದಸ್ಯ ಅರುಣ ಶಹಾಪೂರ. ಮಾಜಿ ಶಾಸಕ ರಮೇಶ ಭೂಸನೂರ, ಚಂದ್ರಶೇಖರ ಕೌಟಗಿ,ಕಾಸುಗೌಡ ಬಿರಾದಾರ, ಬಿ.ಡಿ ಪಾಟೀಲ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಶಂಕರಗೌಡ ಪಾಟೀಲ, ಶೀಲವಂತ ಉಮರಾಣಿ, ಉದ್ದೇಮಿ ಶ್ರೀಪತಿಗೌಡ ಬಿರಾದಾರ, ಬಿ.ಎಸ್ ಪಾಟೀಲ, ಸಂಜು ಐಹೋಳಿ ಸಿದ್ದಲಿಂಗ ಹಂಜಗಿ, ಉಮೇಶ ಕೊಳಕೂರ, ವಿವೇಕ ಡಬ್ಬಿ, ಶ್ರೀಶೈಲ ಗೌಡ ಬಿರಾದಾರ, ಅಣ್ಣಪ್ಪ ಖೈನೂರ, ವಿರಾಜ ಪಾಟೀಲ,ಅನೀಲ ಜಮಾದಾರ, ನ್ಯಾಯವಾದಿ ವಾಲೀಕಾರ, ಮಲ್ಲಿಕಾರ್ಜುನ ಕೀವುಡೆ,ದೇವೇಂದ್ರ ಕುಂಬಾರ, ಸುನಂದಾ ವಾಲೀಕಾರ, ವಿಜಯಲಕ್ಷ್ಮೀ ರೂಗಿಮಠ ವೇದಿಕೆಯಲ್ಲಿದ್ದರು.

ಹಣಮಂತರಾಯಗೌಡ ಪಾಟೀಲ, ವೇಂಕಟೇಶ ಕುಲಕರ್ಣಿ, ರಾಮಸಿಂಗ್ ಕನ್ನೋಳ್ಳಿ, ಸಂಜು ದಶವಂತ, ಅದೃಶ್ಯಪ್ಪ ವಾಲಿ ,ಅನೀಲಗೌಡ ಬಿರಾದಾರ, ಅನೀಲಪ್ರಸಾದ ಏಳಗಿ, ಬಾಳು ಮುಳಜಿ, ಶಾಂತು ಕಂಬಾರ, ರಮೇಶ ಧರೇನವರ್, ಸತೀಶಗೌಡ ಪಾಟೀಲ ರೂಡಗಿ, ಸಚೀನ ಬೋಳೇಗಾಂವ್, ದತ್ತಾ ಬಂಡೇನವರ್ ಸೇರಿದಂತೆ ಇಂಡಿ , ನಾಗಠಾಣ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಅಭಿಮಾನಿಗಳು ಇದ್ದರು. ದೇವೇಂದ್ರ ಕುಂಬಾರ ಸ್ವಾಗತಿಸಿ, ಮಲ್ಲಿಕಾರ್ಜುನ ಕೀವುಡೆ ನಿರೂಪಿಸಿ ವಂದಿಸಿದರು.