Saturday, 23rd November 2024

Rahul Gandhi Marriage: ಸಂಸದೆ ಪ್ರಣಿತಿ ಶಿಂಧೆ ಜತೆ ರಾಹುಲ್‌ ಗಾಂಧಿ ಮದುವೆ? ಸೋಶಿಯಲ್‌ ಮೀಡಿಯಾದಲ್ಲಿ ಹಸಿ-ಬಿಸಿ ಚರ್ಚೆ

Rahul Gandhi Marriage

ನವದೆಹಲಿ: ಸದಾ ರಾಜಕೀಯದಲ್ಲಿ ಬ್ಯುಸಿಯಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi Marriage) ಮದುವೆಯಾಗದೇ ಉಳಿದಿರುವ ಬಗ್ಗೆ ಆಗಾಗ ಚರ್ಚೆಗೆ ಬರುತ್ತಲೇ ಇರುತ್ತವೆ. ಸ್ಟಿಲ್‌ ಎಲಿಜಿಬಲ್‌ ಬ್ಯಾಚುಲರ್‌ ಆಗಿರುವ ರಾಹುಲ್‌ ಜತೆ ಆಗಾಗ ಬೇರೆ ಬೇರೆ ತರುಣಿಯರ ಹೆಸರು ತಳುಕು ಹಾಕಿಕೊಳ್ಳುತ್ತಿರುತ್ತವೆ. ಕೊನೆಗೆ ಅವುಗಳು ವದಂತಿಗಳಾಗಿಯೇ ಉಳಿದು ಬಿಡುತ್ತದೆ. ಇದೀಗ ರಾಹುಲ್‌ ಗಾಂಧಿ ವಿವಾಹದ ಚರ್ಚೆ ಮತ್ತೆ ಭುಗಿಲೆದ್ದಿದ್ದು, ಸಂಸದೆ ಪ್ರಣಿತಿ ಶಿಂಧೆ(Pranithi Shinde) ಹೆಸರು ಕೇಳಿಬರುತ್ತಿದೆ. ಇವರಿಬ್ಬರು ಹಸೆಮಣೆ ಏರಳಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಣಿತಿ ಶಿಂಧೆ ವಿವಾಹದ ವದಂತಿಗಳು ಮತ್ತೆ ವೇಗ ಪಡೆದುಕೊಂಡಿವೆ. ಕಾಂಗ್ರೆಸ್ ಸಂಸದೆ ಪ್ರಣಿತಿ ಶಿಂಧೆ ಹಾಗೂ ರಾಹುಲ್ ಗಾಂಧಿ ಅವರ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಊಹಾಪೋಹಗಳು ಹರಿದಾಡುತ್ತಿವೆ.

ರಾಹುಲ್ ಗಾಂಧಿ ಮತ್ತು ಮಹಾರಾಷ್ಟ್ರದ ಸೋಲಾಪುರದಿಂದ ಮೊದಲ ಬಾರಿಗೆ ಸಂಸದರಾಗಿರುವ ಪ್ರಣಿತಿ ಶಿಂಧೆ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ವೈರಲ್ ಆಗುತ್ತಿರುವ ಈ ವದಂತಿಗಳಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಈ ವದಂತಿ ರೆಕ್ಕೆ ಪುಕ್ಕ ಕೊಡುವಂತಹ ಅನೇಕ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಹರಿದಾಡುತ್ತಿವೆ. ಅದರಲ್ಲಿ ಪತ್ರಕರ್ತರು ಮತ್ತು ಯೂಟ್ಯೂಬರ್‌ಗಳು ಇಬ್ಬರು ಈ ಜೋಡಿಯ ಮದುವೆಯ ಸಾಧ್ಯತೆಯನ್ನು ಚರ್ಚಿಸುತ್ತಿದ್ದಾರೆ.

ಪ್ರಣಿತಿ ಶಿಂಧೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ. 43 ವರ್ಷದ ಪ್ರಣಿತಿ ಶಿಂಧೆ ಸೊಲ್ಲಾಪುರ ಸಿಟಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ, ಪ್ರಣಿತಿ ಅವರು ಸೋಲಾಪುರದಿಂದ ಎಂಪಿ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸಿದರು ಮತ್ತು ಬಿಜೆಪಿ ಅಭ್ಯರ್ಥಿ ರಾಮ್ ವಿಠ್ಠಲ್ ಸತ್ಪುಟೆ ಅವರನ್ನು ಸೋಲಿಸಿದರು.

ಪ್ರಣಿತಿ ಶಿಂಧೆ ಅವರ ಈ ಗೆಲುವು ವಿಶೇಷವಾಗಿತ್ತು ಏಕೆಂದರೆ ಅವರು ಸೊಲ್ಲಾಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಮಹಿಳಾ ಸಂಸದರಾಗಿದ್ದಾರೆ. ಬಿಜೆಪಿ ಮುಖಂಡ ಡಾ.ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಈ ಕ್ಷೇತ್ರದ ಸಂಸದರಾಗಿದ್ದರು. ಸುಶೀಲ್ ಕುಮಾರ್ ಶಿಂಧೆ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾದ ನಂತರ ಅವರು ತಮ್ಮ ರಾಜಕೀಯ ಪರಂಪರೆಯನ್ನು ಮಗಳು ಪ್ರಣಿತಿಗೆ ಹಸ್ತಾಂತರಿಸಿದ್ದರು. 2009 ರಲ್ಲಿ, ಅವರು ಸೋಲಾಪುರ ಸಿಟಿ ಸೆಂಟ್ರಲ್‌ನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಗೆಲುವು ಸಾಧಿಸಿದರು. 2014 ಮತ್ತು 2019ರ ಚುನಾವಣೆಯಲ್ಲಿಯೂ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

9 ಡಿಸೆಂಬರ್ 1980 ರಂದು ಜನಿಸಿದ ಪ್ರಣಿತಿ ಶಿಂಧೆ, ಪ್ರಣಿತಿ 2001 ರಲ್ಲಿ ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಮುಂಬೈ ವಿಶ್ವವಿದ್ಯಾಲಯದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಪಡೆದರು. ಅವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ. ಅವಳು ತನ್ನ NGO ಮೂಲಕ ಸಮಾಜಸೇವೆ ಮಾಡುತ್ತಿದ್ದು, ಹಾಗಾಗಿಯೇ ಸೋಲಾಪುರ ಕ್ಷೇತ್ರದಲ್ಲಿ ಪ್ರಣಿತಿ ಶಿಂಧೆ ಅವರಿಗೆ ಅಪಾರ ಬೆಂಬಲಿಗರಿದ್ದಾರೆ.

ಅವರು 2021 ರಿಂದ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷೆಯೂ ಆಗಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಮರಾವತಿ ವಲಯದ ಜವಾಬ್ದಾರಿಯನ್ನು ಪ್ರಣಿತಿ ಶಿಂಧೆ ಅವರಿಗೆ ನೀಡಿತ್ತು. ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೊಸ ತಂಡ ರಚಿಸಿದಾಗ ಅದರಲ್ಲಿ ಪ್ರಣಿತಿ ಕೂಡ ಸೇರ್ಪಡೆಗೊಂಡಿದ್ದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ವಿಶೇಷ ಆಹ್ವಾನಿತರಾಗಿ ಸ್ಥಾನ ಪಡೆದಿದ್ದರು.

ಈ ಸುದ್ದಿಯನ್ನೂ ಓದಿ: Rahul Gandhi : ರಾಹುಲ್‌ ಗಾಂಧಿ ಅಪ್ಪ ರಾಜೀವ್‌ ಗಾಂಧಿಗಿಂತಲೂ ಚತುರ ಎಂದು ಹೊಗಳಿದ ಸ್ಯಾಮ್‌ ಪಿತ್ರೋಡಾ