ತಿಪಟೂರು: ನಗರದ ಅಮಾನಿಕೆರೆಯಲ್ಲಿ ವಾಯುವಿಹಾರ(Morning Walk)ಕ್ಕೆ ನಿರ್ಮಿಸಲಾಗಿರುವ ವಾಕಿಂಗ್ ಮಧ್ಯಭಾಗ ಹಾಗೂ ಅಕ್ಕಪಕ್ಕದಲ್ಲಿ ಗಿಡಗಂಟೆಗಳು, ಮುಳ್ಳಿನ ಗಿಡಗಳು ಬೃಹದಾಕಾರವಾಗಿ ಬೆಳೆದಿದ್ದು ವಾಯು ವಿಹಾರಿಗಳಿಗೆ ವಾಕಿಂಗ್ ಮಾಡಲು ತುಂಬಾ ತೊಂದರೆಯಾಗುತ್ತಿದೆ.
ಪ್ರತಿದಿನ ವಾಯುವಿಹಾರಕ್ಕೆ ಎಂದು ಬರುವ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಕಾಟಾಚಾರಕ್ಕೆ ಸಣ್ಣ ನೀರಾವರಿ ಇಲಾಖೆ(Small Irrigation Department) ಯವರು ಮೇಲ್ನೋಟಕ್ಕೆ ಕಾಣುವಂತೆ ಐದರಿಂದ ಆರು ಇಂಚು ಗಿಡದ ಬಳ್ಳಿಗಳನ್ನು ನೆಲದಲ್ಲಿಯೇ ಬಿಟ್ಟು ನಾವು ಕೆರೆಯ ವಾಕಿಂಗ್ ಜಾಗ ಸ್ವಚ್ಛ ಗೊಳಿಸಿದ್ದೇವೆ ಎಂದು ಬಿಂಬಿಸಿ ಕೊಳ್ಳುತ್ತಿದ್ದಾರೆ. ಈ ಕೆಲಸವು ಸಾರ್ವಜನಿಕರಿಗೆ ಮೆಚ್ಚುಗೆಯಂತೂ ವ್ಯಕ್ತಪಡಿಸು ತ್ತಿಲ್ಲ, ಸಾರ್ವಜನಿಕರು ಚರ್ಚೆಯಲ್ಲಿ ತೊಡಗಿದ್ದಾರೆ.
ಸಾರ್ವಜನಿಕರ ಅಭಿಪ್ರಾಯವೆಂದರೆ ನಾವು ನಗರಸಭೆಗೆ ಎಲ್ಲಾ ರೀತಿಯ ತೆರಿಗೆಗಳನ್ನು ಕಟ್ಟುತ್ತೇವೆ ಆದರೆ ನಮಗೆ ನಗರಸಭೆ ಅಥವಾ ಸಣ್ಣ ನೀರಾವರಿ ಇಲಾಖೆಯವರಿಂದಾಗಲಿ ಸೂಕ್ತ ವ್ಯವಸ್ಥೆ ದೊರೆಯುತ್ತಿಲ್ಲವೆಂದು ಸಾರ್ವಜನಿಕರು ದೂರಿದ್ದಾರೆ.