Thursday, 19th September 2024

Skill Training: ರಾಜ್ಯ ಸರಕಾರದಿಂದ ಬ್ರಿಟಿಷ್‌ ಸಹಯೋಗದಲ್ಲಿ 4 ಹೊಸ ಕೌಶಲ್ಯ ತರಬೇತಿ ಕಾರ್ಯಕ್ರಮ

skill training program

ನವದೆಹಲಿ: ಉದ್ಯೋಗಾವಕಾಶಗಳನ್ನು (Job opportunities) ಹೆಚ್ಚಿಸುವ ದೃಷ್ಟಿಯಿಂದ ನಾಲ್ಕು ಹೊಸ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು (Skill training, skill development Programs) ಬ್ರಿಟಿಷ್‌ ಕೌನ್ಸಿಲ್‌ ಸಯೋಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರ (Karnataka Government) ಪ್ರಾರಂಭಿಸಿದೆ.

ವಿದ್ಯಾರ್ಥಿಗಳ ಭಾಷಾ ಕೌಶಲ್ಯವನ್ನು ಹೆಚ್ಚಿಸುವ, ಉದ್ಯೋಗಾವಕಾಶವನ್ನು ಸುಧಾರಿಸುವ ದೃಷ್ಟಿಯಿಂದ ಅನುಕೂಲವಾಗುವಂತೆ, ಬ್ರಿಟಿಷ್ ಕೌನ್ಸಿಲ್ ಸಹಯೋಗದೊಂದಿಗೆ ಈ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ. ಇದೇ ಫೆಬ್ರವರಿ 26ರಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ (KSHEC) ಮತ್ತು ಬ್ರಿಟಿಷ್ ಕೌನ್ಸಿಲ್ ನಡುವೆ ಈ ಕುರಿತು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು.

ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇದಕ್ಕಾಗಿ ಸ್ಕಾಲರ್ಸ್‌ ಫಾರ್‌ ಔಟ್‌ಸ್ಟಾಂಡಿಂಗ್‌ ಅಂಡರ್‌ಗ್ರಾಜುಯೇಟ್‌ ಟ್ಯಾಲೆಂಟ್‌ (SCOUT) ಪ್ರೋಗ್ರಾಮ್‌, ಇಂಗ್ಲಿಷ್‌ ಸ್ಕಿಲ್ಸ್‌ ಫಾರ್‌ ಯುತ್‌, ಕೆಪಾಸಿಟಿ ಬಿಲ್ಡಿಂಗ್‌ ಟ್ರೇನಿಂಗ್‌ ಫಾರ್‌ ಇಂಟರ್‌ನ್ಯಾಷನಲ್‌ ಅಫೀಸರ್ಸ್‌ ಹಾಗೂ ಫ್ರೀಮಿಯಂ ಡಿಜಿಟಲ್ ಲೈಬ್ರರಿ ವಾಲ್ ಎಂಬ ನಾಲ್ಕು ಕೌಶಲ್ಯ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ.

ಸ್ಕೌಟ್ ಕಾರ್ಯಕ್ರಮ

ಈ ಕಾರ್ಯಕ್ರಮದ ಅಡಿಯಲ್ಲಿ, KSHEC 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ. ಇದರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯ, ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿ, ರಾಯಚೂರು ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯ ಮತ್ತು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ತಲಾ ಐದು ವಿದ್ಯಾರ್ಥಿಗಳು, ಒಬ್ಬ ಅಧ್ಯಾಪಕರು ಮತ್ತು ಇಬ್ಬರು KSHEC ಅಧಿಕಾರಿಗಳು ಭಾಗವಹಿಸುತ್ತಾರೆ. ನವೆಂಬರ್ 9-22 ರಿಂದ ಪೂರ್ವ ಲಂಡನ್ ವಿಶ್ವವಿದ್ಯಾಲಯದಲ್ಲಿ ಎರಡು ವಾರಗಳ ತರಬೇತಿಯಿದೆ.

ಯುವಕರಿಗೆ ಇಂಗ್ಲಿಷ್ ಕೌಶಲ್ಯ

ಇದು ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ಬ್ರಿಟಿಷ್ ಕೌನ್ಸಿಲ್ ಮತ್ತು ಮೈಕ್ರೋಸಾಫ್ಟ್ ಇಂಡಿಯಾ ಆರಂಭಿಸಿರುವ ಉಪಕ್ರಮ. ಕೆಎಸ್‌ಹೆಚ್‌ಇಸಿ ಅಡಿಯಲ್ಲಿ 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಯುವಕರಿಗಾಗಿ ಇಂಗ್ಲಿಷ್ ಸ್ಕಿಲ್‌ ಕಾರ್ಯಕ್ರಮ ಜಾರಿಗೊಳಿಸಲಾಗುತ್ತದೆ. ಸೆಮಿಸ್ಟರ್ II ಮತ್ತು III ರಲ್ಲಿ 5,795 ವಿದ್ಯಾರ್ಥಿಗಳಿಗೆ ಪ್ರಯೋಜನ ದೊರೆಯಲಿದೆ. ವಿದ್ಯಾರ್ಥಿಗಳು ಮೈಕ್ರೋಸಾಫ್ಟ್ ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (LMS) ಮೂಲಕ 40 ಗಂಟೆಗಳ ಕೋರ್ಸ್‌ವರ್ಕ್ ಅನ್ನು ಪೂರ್ಣಗೊಳಿಸುತ್ತಾರೆ. 30 ಗಂಟೆಗಳ ವೈಯಕ್ತಿಕ ಅಥವಾ ಮಿಶ್ರಿತ ಇಂಗ್ಲಿಷ್ ಪ್ರಾಕ್ಟೀಸ್ ಕ್ಲಬ್ ಸೆಷನ್‌ಗಳಿವೆ.

ಕೆಪಾಸಿಟಿ ಬಿಲ್ಡಿಂಗ್‌ ಟ್ರೇನಿಂಗ್‌

ಈ ಕಾರ್ಯಕ್ರಮದ ಅಡಿಯಲ್ಲಿ, KSHEC 28 ವಿಶ್ವವಿದ್ಯಾನಿಲಯಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಭಾರತೀಯ ವಿಶ್ವವಿದ್ಯಾನಿಲಯಗಳ ಅಂತಾರಾಷ್ಟ್ರೀಕರಣದ ಪ್ರಯತ್ನಗಳನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಈ ಕಾರ್ಯಾಗಾರಕ್ಕಾಗಿ 56 ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.

ಫ್ರೀಮಿಯಮ್ ಡಿಜಿಟಲ್ ಲೈಬ್ರರಿ ವಾಲ್

ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯದಲ್ಲಿ ಫ್ರೀಮಿಯಮ್ ಡಿಜಿಟಲ್ ಲೈಬ್ರರಿ ವಾಲ್‌ ಪ್ರಾರಂಭಿಸಲಾಗಿದೆ. ಇದು ಕಲಿಕೆಗೆ ಇನ್ನಷ್ಟು ಸಾಧ್ಯತೆಯನ್ನು ಹೆಚ್ಚಿಸಲಿದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅಮೂಲ್ಯವಾದ ಸಂಪನ್ಮೂಲಗಳನ್ನು ನೀಡುತ್ತದೆ.

KSHEC ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್, ಬ್ರಿಟನ್‌ನ ಸಂಸ್ಥೆಗಳ ಸಹಯೋಗವು ಭಾರತದ ಶಿಕ್ಷಣ ಹಾಗೂ ಉದ್ಯೋಗ ವಲಯದಲ್ಲಿ ಹೊಸತನ, ಚಲನಶೀಲತೆ ಮತ್ತು ಭವಿಷ್ಯದ ಯಶಸ್ಸನ್ನು ಉತ್ತೇಜಿಸುತ್ತದೆ ಎಂದು ನುಡಿದರು.

ಈ ಸುದ್ದಿ ಓದಿ: Job News: Railway Recruitment 2024: ರೈಲ್ವೆಯಲ್ಲಿ 11558 ಹುದ್ದೆಗಳಿಗೆ ಆಹ್ವಾನ, ಈಗಲೇ ಅರ್ಜಿ ಸಲ್ಲಿಸಿ

Leave a Reply

Your email address will not be published. Required fields are marked *