Friday, 20th September 2024

Sanju Samson: ಫುಟ್ಬಾಲ್‌ ಕ್ಲಬ್‌ಗೆ ಕ್ರಿಕೆಟಿಗ ಸಂಜು ಮಾಲಕ!

Sanju Samson

ತಿರುವನಂತಪುರಂ: ಭಾರತ ಕ್ರಿಕೆಟ್‌ ತಂಡದ ಬ್ಯಾಟರ್‌, ಕೇರಳ ಮೂಲದ ಸಂಜು ಸ್ಯಾಮ್ಸನ್‌(Sanju Samson) ಫುಟ್ಬಾಲ್‌ ಕ್ಲಬ್‌ ಒಂದರ ಒಡೆತನ ಪಡೆದಿದ್ದಾರೆ. ತಮ್ಮದೇ ರಾಜ್ಯದ ʼಮಲಪ್ಪುರಂ ಫುಟ್ಬಾಲ್‌ ಕ್ಲಬ್‌’ನ(Malappuram FC) ಸಹ ಮಾಲಕರಾಗಿದ್ದಾರೆ. ಈ ತಂಡ “ಸೂಪರ್‌ ಲೀಗ್‌ ಕೇರಳ’ ಪಂದ್ಯಾವಳಿಯಲ್ಲಿ ಆಡುತ್ತಿದೆ.

ಇತ್ತೀಚೆಗೆ ಸಂಜು ಸ್ಯಾಮ್ಸನ್‌ ಟೀಮ್​ ಇಂಡಿಯಾದ ಅಭ್ಯಾಸದ ಜೆರ್ಸಿಯನ್ನು ತೊಟ್ಟು ತನ್ನ ಸ್ನೇಹಿತರೊಂದಿಗೆ ಬಾಸ್ಕೆಟ್​​​ ಬಾಲ್​ ಕೋರ್ಟ್​ನಲ್ಲಿ ಫುಟ್​ಬಾಲ್​ ಆಡುತ್ತಿರುವ ದೃಶ್ಯ ವೈರಲ್‌ ಆಗಿತ್ತು. ಇದೀಗ ತಮ್ಮ ನೆಚ್ಚಿನ ಫುಟ್ಬಾಲ್‌ ಕ್ಲಬ್‌ನ ಒಡೆತನ ಪಡೆದಿದ್ದಾರೆ.

ಬಡ ಮಕ್ಕಳಿಗೆ ನೆರವು

ವಿಶ್ವದ ಕ್ಯಾಶ್​ ರಿಚ್​ ಲೀಗ್​ಗಳಲ್ಲಿ ಒಂದಾದ ಐಪಿಎಲ್​ನಲ್ಲಿ ರಾಜಸ್ಥಾನ್​ ರಾಯಲ್ಸ್​(rajasthan royals) ಪರ ಆಡುತ್ತಿರುವ ಸಂಜು ಸ್ಯಾಮ್ಸನ್​ ಅವರು ಸದ್ಯ ಗಳಿಸುತ್ತಿರುವ 15 ಕೋಟಿ ವೇತನದಲ್ಲಿ ಯುವ ಮತ್ತು ಪ್ರತಿಭಾವಂತ ಕ್ರಿಕೆಟಿಗರಿಗೆ 2 ಕೋಟಿ ನೆರವಿನ ಹಸ್ತ ಚಾಚುತ್ತಿದ್ದಾರೆ. ಈ ಮೂಲಕ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವಂತ ಕೆಲಸವನ್ನು ಮಾಡುತ್ತಿದ್ದಾರೆ. ಟೀಮ್​ ಇಂಡಿಯಾದಲ್ಲಿ ತಮಗೆ ಸರಿಯಾದ ಅವಕಾಶ ಸಿಗದಿದ್ದರೂ ಯುವ ಆಟಗಾರರು ಬೆಳಕಿಗೆ ಬರುವಲ್ಲಿ ಶ್ರಮಿಸುತ್ತಿರುವ ಅವರ ಗುಣವನ್ನು ನಿಜಕ್ಕೂ ಮೆಚ್ಚಲೇ ಬೇಕು.

ಸಂಜು ಇದುವರೆಗೆ ಭಾರತ ಪರ 16 ಏಕದಿನ ಕ್ರಿಕೆಟ್​ ಪಂದ್ಯಗಳನ್ನಾಡಿ 510 ರನ್​ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 3 ಅರ್ಧಶತಕ ಬಾರಿಸಿದ್ದಾರೆ. 30 ಟಿ20 ಪಂದ್ಯ ಆಡಿ 444 ರನ್​ ಗಳಿಸಿದ್ದಾರೆ. 2 ಅರ್ಧಶತಕ ಒಳಗೊಂಡಿದೆ. ಟೆಸ್ಟ್​ ಇದುವರೆಗೂ ಆಡಿಲ್ಲ. ಹೆಚ್ಚಾಗಿ ಐಪಿಎಲ್​ನಲ್ಲಿಯೇ ಆಡಿದ್ದಾರೆ. 167 ಪಂದ್ಯಗಳಿಂದ 3 ಶತಕ, 25 ಅರ್ಧಶತಕ ಒಳಗೊಂಡಂತೆ 4419 ರನ್​ ಬಾರಿಸಿದ್ದಾರೆ. ಸಂಜು ಟಿ20 ವಿಶ್ವಕಪ್ ವಿಜೇತ ಭಾರತ​ ತಂಡದ ಸದ್ಯರಾಗಿದ್ದರೂ ಕೂಡ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ.

ಇದನ್ನೂ ಓದಿ Bajrang Punia: ನಿಷೇಧ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋದ ಬಜರಂಗ್‌

ದುಲೀಪ್‌ ಟ್ರೋಫಿಯ (Duleep Trophy 2024) ಮೊದಲೆರಡು ಪಂದ್ಯಗಳು ಮುಕ್ತಾಯವಾಗಿದ್ದು, ಮುಂದಿನ ಪಂದ್ಯಗಳಿಗೆ ಸಿದ್ದತೆ ನಡೆಸಲಾಗುತ್ತಿದೆ. ಸಂಜು ಸ್ಯಾಮ್ಸನ್‌ ಭಾರತ ʼಡಿʼ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಆಡುವ ಅವಕಾಶ ಸಿಗದಿದ್ದರೂ ದ್ವಿತೀಯ ಸುತ್ತಿನಲ್ಲಿ ಅವಕಾಶ ಸಿಗುವ ಸಾಧ್ಯತೆ ಅಧಿಕವಾಗಿದೆ.

ಭಾರತ ʼಡಿʼ ತಂಡ

ಶ್ರೇಯಸ್ ಐಯರ್ (ಸಿ), ಅಥರ್ವ ತಾಯ್ಡೆ, ಯಶ್ ದುಬೆ, ದೇವದತ್ ಪಡಿಕ್ಕಲ್, ರಿಕಿ ಭುಯಿ, ಸರನ್ಶ್ ಜೈನ್, ಅರ್ಷದೀಪ್ ಸಿಂಗ್, ಆದಿತ್ಯ ಠಾಕರೆ, ಹರ್ಷಿತ್ ರಾಣಾ, ಆಕಾಶ್ ಸೇನ್‌ಗುಪ್ತ, ಕೆಎಸ್ ಭರತ್ (ವಿ.ಕೀ), ಸೌರಭ್ ಕುಮಾರ್, ಸಂಜು ಸ್ಯಾಮ್ಸನ್ (ವಿ.ಕೀ), ನಿಶಾಂತ್ ಸಿಂಧು, ವಿದ್ವತ್ ಕಾವೇರಪ್ಪ.