Wednesday, 27th November 2024

Niranjan Jain Kudyadi Column: ಇದು ದಶಲಕ್ಷಣ ಪರ್ವಕಾಲ

ಹಬ್ಬ-ಹರಿದಿನ

ನಿರಂಜನ್‌ ಜೈನ್‌ ಕುದ್ಯಾಡಿ

ಚೈತ್ರ, ಭಾದ್ರಪದ ಮತ್ತು ಮಾಘ ಮಾಸಗಳಲ್ಲಿ ಆಚರಿಸಲಾಗುವ ‘ದಶಲಕ್ಷಣ ಪರ್ವ’ಕ್ಕೆ ಜೈನ ಸಮುದಾಯದಲ್ಲಿ
ಇನ್ನಿಲ್ಲದ ಮಹತ್ವವಿದೆ. ಭಾದ್ರಪದ ಮಾಸದಲ್ಲಿನ ಆಚರಣೆಯು ಈ ಬಾರಿ ಸೆಪ್ಟೆಂಬರ್ 8ರಿಂದ ಶುರುವಾಗಿದ್ದು ನಿರಂತರ ೧೦ ದಿನಗಳ ಕಾಲ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದಶಲಕ್ಷಣ ಪರ್ವದ ಕುರಿತಾದ ಕಿರುನೋಟ ಇಲ್ಲಿದೆ:

ಯಾವ ವಿಚಾರವು ಸಕಲ ಜೀವರಾಶಿಗಳನ್ನು ದುಃಖ ಮತ್ತು ವೇದನೆಯಿಂದ ವಿಮುಕ್ತಿಗೊಳಿಸಿ ನಿಜವಾದ ಸುಖವನ್ನು
ನೀಡುವಲ್ಲಿ ನಿಮಿತ್ತವಾಗಿರುತ್ತದೆಯೋ ಅದು ಧರ್ಮವಾಗಿದೆ. ಆ ಧರ್ಮದ ಒಳತಿರುಳೇ ಧರ್ಮದ 10 ಲಕ್ಷಣ ವಾಗಿರುತ್ತದೆ. ಈ ಲಕ್ಷಣಗಳು ಆತ್ಮನನ್ನು ಆವರಿಸಿರುವಂಥ ಕರ್ಮಮಲಗಳನ್ನು ದೂರವಾಗಿಸುತ್ತವೆ. ಈ ದಶಲಕ್ಷಣ ಗಳ ಜತೆಗೆ ‘ಉತ್ತಮಾ’ ಎಂಬ ಪದವನ್ನು ಸೇರಿಸಲಾಗುತ್ತದೆ; ದಶಲಕ್ಷಣಗಳ ಆಚರಣೆಯು ಸಮ್ಯಕ್‌ ಪೂರ್ವಕವಾಗಿ ಇರಬೇಕೆಂಬುದು ಇದರ ತಾತ್ಪರ್ಯ. ಮುನಿಗಳ ಸಲುವಾಗಿಯೇ ಈ ಪರ್ವವನ್ನು ಹೇಳಲಾಗಿದ್ದು, ಶ್ರಾವಕರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಚರಣೆ ಮಾಡಿಕೊಳ್ಳಬಹುದಾಗಿದೆ. ದಶಲಕ್ಷಣ ಪರ್ವವನ್ನು ‘ಪರ್ಯೂಷಣ ಪರ್ವ’ ಎಂದೂ ಕರೆಯಲಾಗುತ್ತದೆ. ಈ ಪರ್ವವು ವರ್ಷದಲ್ಲಿ 3 ಸಲ, ಅಂದರೆ ಚೈತ್ರ, ಭಾದ್ರಪದ ಮತ್ತು ಮಾಘ ಮಾಸ ಗಳಲ್ಲಿ ಶುಕ್ಲ ಪಂಚಮಿಯಿಂದ ಚತುರ್ದಶಿಯವರೆಗೆ ಆಚರಿಸಲ್ಪಡುತ್ತದೆ.

ಉತ್ತಮಾ ಕ್ಷಮಾ ಧರ್ಮ: ಕ್ರೋಧವನ್ನು ತೊರೆಯುವುದೇ ಕ್ಷಮಾಧರ್ಮವಾಗಿದೆ. ಕ್ರೋಧ ಉತ್ಪನ್ನವಾಗುವ ಅವಕಾ
ಶವಿದ್ದರೂ ಕ್ರೋಧ ಮಾಡದೇ, ಶಾಂತ ಪರಿಣಾಮದಿಂದ ಆತ್ಮನಲ್ಲಿ ರಮಣ ಮಾಡುವುದೇ ಉತ್ತಮ ಕ್ಷಮಾ ಧರ್ಮ ವಾಗಿದೆ. ಕ್ರೋಧದಿಂದ ಅಹಿತದ ಪರಿಣಾಮವಾಗುತ್ತದೆ. ‘ಕ್ಷಮಾ ವೀರಸ್ಯ ಭೂಷಣಮ್’ ಎಂಬ ಉಕ್ತಿಯು ಕ್ಷಮೆಯ ಮೂಲವಾಗಿದೆ. ಕ್ಷಮೆ ಇರುವವನ ಬಳಿ ಮಾರ್ದವ, ಆರ್ದವ ಮತ್ತು ಶೌಚವೂ ಅಡಕವಾಗಿರುತ್ತದೆ. ಉತ್ತಮಾ ಮಾರ್ದವ ಧರ್ಮ: ಮಧುರ ಅಥವಾ ಕೋಮಲ ಭಾವವೇ ಮಾರ್ದವ ಧರ್ಮವಾಗಿದೆ. ಈ ಮಾರ್ದವ ಧರ್ಮ ದವನು ಮಾನ/ಅಭಿಮಾನ ರಹಿತನಾಗಿರುತ್ತಾನೆ.

ತನಗೆ ಪುಣ್ಯವಿಶೇಷದಿಂದ ಒದಗಿಬಂದಿರುವ ಆಂತರಿಕ ಮತ್ತು ಬಹಿರಂಗ ಸಂಪತ್ತುಗಳಾದ ಜ್ಞಾನ, ಕುಲ, ರೂಪ, ಬಲ ಇತ್ಯಾದಿಗಳ ಬಗೆಗೆ ಗರ್ವ ಪಡದೇ ವಿನಯವಂತನಾಗಿರುವುದು ಮಾರ್ದವ ಧರ್ಮವಾಗಿದೆ.

ಉತ್ತಮಾ ಆರ್ಜವ ಧರ್ಮ: ಛಲ, ಕಪಟ ಹಾಗೂ ಇತರರಿಗಿಂತ ತಾನೇ ಶ್ರೇಷ್ಠ ಎಂಬ ಭಾವಗಳಿಂದ ಮನುಷ್ಯನಿಗೆ ಅಹಿತವಾಗುತ್ತದೆ. ಕುಟಿಲ ಭಾವನೆಗಳನ್ನು ತೊರೆದು ಸರಳ ಸಜ್ಜನಿಕೆಯಿಂದ ಕಾಯಾ-ವಾಚಾ-ಮನಸಾ ಸರಳತೆಯ ವ್ಯವಹಾರದಲ್ಲಿರುವುದು ಉತ್ತಮಾ ಆರ್ಜವ ಧರ್ಮವಾಗಿದೆ.

ಉತ್ತಮಾ ಶೌಚ ಧರ್ಮ: ಪಾಪಕ್ಕೆ ಮೂಲಕಾರಣಗಳಲ್ಲಿ ಒಂದಾದ ಲೋಭದ ಕ್ರಿಯೆಯನ್ನು ಮಾಡದಿರುವುದೇ ಶೌಚ ಧರ್ಮವಾಗಿದೆ. ಲೋಭದ ವಶದಲ್ಲಿ ಮನುಷ್ಯ ಧರ್ಮರಹಿತ ಕಾರ್ಯಗಳಲ್ಲಿ ತಲ್ಲೀನನಾಗುತ್ತಾನೆ. ಲೋಭದ ಮಾಯೆಯ ಪರಿಧಿಯೊಳಗೆ ಸಿಲುಕದೇ ಸಂತೃಪ್ತನಾ ಗಿರುವುದೇ ಉತ್ತಮಾ ಶೌಚ ಧರ್ಮದ ಆಚರಣೆಯಾಗಿದೆ.

ಉತ್ತಮಾ ಸತ್ಯ ಧರ್ಮ: ಸುಳ್ಳಿನ ಕೋಟೆಯೊಳಗೆ ಬಂದಿಯಾಗದೇ ಸತ್ಯದ ಆಸರೆಯಲ್ಲಿ ವಿಹರಿಸುವುದು, ನಿರಪ ರಾಧಿಗಳ ರಕ್ಷಣೆಗಾಗಿ ಸತ್ಯದ ಜತೆ ಇರುವುದೇ ಉತ್ತಮಾ ಸತ್ಯ ಧರ್ಮವಾಗಿದೆ. ಸತ್ಯವು ಧರ್ಮವಾಗಿರುತ್ತದೆ ಮತ್ತು ಇದು ನಮಗೆ ಹಿತಕರವಾಗಿರುತ್ತದೆ. ಸುಳ್ಳಿನ ವಚನದೊಳಗೆ ಒಮ್ಮೆ ಸಿಲುಕಿದರೆ, ಅದರಿಂದ ರಕ್ಷಣೆ ಪಡೆಯಲು ಅನೇಕ ಸುಳ್ಳಿನ ವಿಚಾರಗಳ ಆಶ್ರಯ ಪಡೆಯಬೇಕಾಗುತ್ತದೆ.

ಉತ್ತಮಾ ಸಂಯಮ ಧರ್ಮ: ಇಂದ್ರಿಯಗಳಿಗೆ ದಾಸರಾಗದೇ ಭೋಗಾಕಾಂಕ್ಷೆಗಳನ್ನು ನಿಯಂತ್ರಿಸಿಕೊಂಡು, ತ್ರಿಕರಣಪೂರ್ವಕವಾಗಿ ಅಶುಭ ಪ್ರವೃತ್ತಿಯನ್ನು ತೊರೆಯುವುದು, ಎಲ್ಲಾ ಜೀವಿಗಳ ರಕ್ಷಣೆಯ ಭಾವವಿಟು೦ ಕೊಂಡು ಪ್ರಾಣಿ ಸಂಯಮವನ್ನು, ಇಂದ್ರಿಯ ಹಾಗೂ ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳುವ ಮೂಲಕ ಇಂದ್ರಿಯ ಸಂಯಮವನ್ನು ಪಾಲಿಸುವುದೇ ಉತ್ತಮಾ ಸಂಯಮ ಧರ್ಮವಾಗಿದೆ.

ಉತ್ತಮಾ ತಪ ಧರ್ಮ: ಧರ್ಮ ಧ್ಯಾನದಲ್ಲಿ ತಲ್ಲೀನವಾಗಿ ವ್ರತ-ನಿಯಮಗಳನ್ನು ಯಾವುದೇ ಇಚ್ಛೆಯಪೂರ್ವಕ
ಮಾಡದೇ ಆತ್ಮನಲ್ಲಿ ಅಂತರ್ಗತವಾಗುವುದು, ಇಚ್ಛೆಗಳನ್ನು ನಿರೋಧ ಮಾಡುತ್ತಾ ಆತ್ಮನಲ್ಲಿ ವಿಹರಿಸುವುದೇ ಉತ್ತಮಾತಪ ಧರ್ಮವಾಗಿದೆ. ಅಂತರಂಗ ಹಾಗೂ ಬಹಿರಂಗ ರೂಪದಲ್ಲಿ 12 ಪ್ರಕಾರದ ತಪಗಳಿವೆ.

ಉತ್ತಮಾ ತ್ಯಾಗ ಧರ್ಮ: ಸತ್ಪಾತ್ರರಿಗೆ ನಿರ್ವಂಚನೆಯಿಂದ ದಾನ ನೀಡುವುದು, ವಿಷಯ ಕಷಾಯಗಳನ್ನು ತೊರೆಯುವುದು, ಒಳಗಿನ ಹಾಗೂ ಹೊರಗಿನ ಪರಿಗ್ರಹಗಳನ್ನು ತ್ಯಾಗಮಾಡಿ ಪರರ ಹಿತಕ್ಕಾಗಿ ದುಡಿಯುವುದೇ
ಉತ್ತಮಾ ತ್ಯಾಗ ಧರ್ಮವಾಗಿದೆ.

ಉತ್ತಮಾ ಆಕಿಂಚನ್ಯ ಧರ್ಮ: ಸಮಸ್ತ ಪರಿಗ್ರಹ ಗಳನ್ನು ತ್ಯಾಗ ಮಾಡಿ ನಿರ್ಲೋಭ ಭಾವನೆಯಿಂ ದಿರುವುದು, ಆತ್ಮನ ವಿಚಾರಗಳನ್ನು ಮಾತ್ರ ಚಿಂತಿಸುತ್ತಾ, ಅನ್ಯ ವಿಷಯ/ಪದಾರ್ಥಗಳಲ್ಲಿ ರಾಗ-ದ್ವೇಷಗಳ ಭಾವನೆಯಿಂದ ದೂರವಾಗಿರುವುದೇ ಉತ್ತಮಾ ಆಕಿಂಚನ್ಯ ಧರ್ಮವಾಗಿದೆ.

ಉತ್ತಮಾ ಬ್ಯಹ್ಮಚರ್ಯ ಧರ್ಮ: ಬ್ರಹ್ಮ ಅಥವಾ ಆತ್ಮನಲ್ಲಿ ಲೀನವಾಗುವುದು, ಕಾಮವಾಸನೆಯನ್ನು ಆಘ್ರಾಣಿ ಸದೇ ನಮ್ಮ ಪರಿಣಾಮವನ್ನು ಮಲಿನಗೊಳಿಸದೇ ಧ್ಯಾನದಲ್ಲಿ ಚಿತ್ತವನ್ನು ತೊಡಗಿಸುವುದೇ ಉತ್ತಮಾ ಬ್ರಹ್ಮಚರ್ಯ ಧರ್ಮವಾಗಿದೆ. ಆತ್ಮನ ಸದ್ವಿಹಾರಕ್ಕೆ 10 ಲಕ್ಷಣವನ್ನು ಒಳಗೊಂಡ ಧರ್ಮವು ನಿಮಿತ್ತವಾಗಿರುತ್ತದೆ ಮತ್ತು ಬುನಾದಿಯಾಗಿರುತ್ತದೆ. ಇದು ಆತ್ಮನ ಉನ್ನತಿಗೆ ಮತ್ತು ಸದ್ಗತಿಗೆ ಪ್ರೇರಣೆ ನೀಡುತ್ತದೆ. ಧರ್ಮದ ಸಿದ್ಧಾಂತ ಗಳನ್ನು ನಮ್ಮ ಸಾಮರ್ಥ್ಯಕ್ಕೆ ಅನುಗು ಣವಾಗಿ ಅಳವಡಿಸಿಕೊಳ್ಳುತ್ತಾ, ನಮ್ಮನ್ನು ನಾವು ಶ್ರೇಷ್ಠತೆಯ ಪರಿಧಿಯೊಳಗೆ ಸೇರಿಸಿಕೊಳ್ಳಲು ಸಹಾಯಕವಾಗುವ ಧರ್ಮದ ೧೦ ಲಕ್ಷಣಗಳಲ್ಲಿ ತ್ರಿಕರಣಪೂರ್ವಕವಾಗಿ
ತೊಡಗಿಸಿಕೊಳ್ಳುತ್ತಾ ಊರ್ಧ್ವಗಾಮಿಯಾಗೋಣ.

ಉತ್ತಮಾ ಸತ್ಯ ಧರ್ಮ: ಸುಳ್ಳಿನ ಕೋಟೆಯೊಳಗೆ ಬಂದಿಯಾಗದೇ ಸತ್ಯದ ಆಸರೆಯಲ್ಲಿ ವಿಹರಿಸುವುದು, ನಿರಪರಾಧಿಗಳ ರಕ್ಷಣೆಗಾಗಿ ಸತ್ಯದ ಜತೆ ಇರುವುದೇ ಉತ್ತಮಾ ಸತ್ಯ ಧರ್ಮವಾಗಿದೆ. ಸತ್ಯವು ಧರ್ಮವಾಗಿರುತ್ತದೆ ಮತ್ತು ಇದು ನಮಗೆ ಹಿತಕರವಾಗಿರುತ್ತದೆ. ಸುಳ್ಳಿನ ವಚನದೊಳಗೆ ಒಮ್ಮೆ ಸಿಲುಕಿದರೆ, ಅದರಿಂದ ರಕ್ಷಣೆ ಪಡೆಯಲು ಅನೇಕ ಸುಳ್ಳಿನ ವಿಚಾರಗಳ ಆಶ್ರಯ ಪಡೆಯಬೇಕಾಗುತ್ತದೆ.

ಉತ್ತಮಾ ಸಂಯಮ ಧರ್ಮ: ಇಂದ್ರಿಯಗಳಿಗೆ ದಾಸರಾಗದೇ ಭೋಗಾಕಾಂಕ್ಷೆಗಳನ್ನು ನಿಯಂತ್ರಿಸಿಕೊಂಡು, ತ್ರಿಕರಣಪೂರ್ವಕವಾಗಿ ಅಶುಭ ಪ್ರವೃತ್ತಿಯನ್ನು ತೊರೆಯುವುದು, ಎಲ್ಲಾ ಜೀವಿಗಳ ರಕ್ಷಣೆಯ ಭಾವವಿಟು೦ ಕೊಂಡು ಪ್ರಾಣಿ ಸಂಯಮವನ್ನು, ಇಂದ್ರಿಯ ಹಾಗೂ ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳುವ ಮೂಲಕ ಇಂದ್ರಿಯ ಸಂಯಮವನ್ನು ಪಾಲಿಸುವುದೇ ಉತ್ತಮಾ ಸಂಯಮ ಧರ್ಮವಾಗಿದೆ.

ಉತ್ತಮಾ ತಪ ಧರ್ಮ: ಧರ್ಮ ಧ್ಯಾನದಲ್ಲಿ ತಲ್ಲೀನವಾಗಿ ವ್ರತ-ನಿಯಮಗಳನ್ನು ಯಾವುದೇ ಇಚ್ಛೆಯಪೂರ್ವಕ
ಮಾಡದೇ ಆತ್ಮನಲ್ಲಿ ಅಂತರ್ಗತವಾಗುವುದು, ಇಚ್ಛೆಗಳನ್ನು ನಿರೋಧ ಮಾಡುತ್ತಾ ಆತ್ಮನಲ್ಲಿ ವಿಹರಿಸುವುದೇ ಉತ್ತಮಾತಪ ಧರ್ಮವಾಗಿದೆ. ಅಂತರಂಗ ಹಾಗೂ ಬಹಿರಂಗ ರೂಪದಲ್ಲಿ ೧೨ ಪ್ರಕಾರದ ತಪಗಳಿವೆ.

ಉತ್ತಮಾ ತ್ಯಾಗ ಧರ್ಮ: ಸತ್ಪಾತ್ರರಿಗೆ ನಿರ್ವಂಚನೆಯಿಂದ ದಾನ ನೀಡುವುದು, ವಿಷಯ ಕಷಾಯಗಳನ್ನು
ತೊರೆಯುವುದು, ಒಳಗಿನ ಹಾಗೂ ಹೊರಗಿನ ಪರಿಗ್ರಹಗಳನ್ನು ತ್ಯಾಗಮಾಡಿ ಪರರ ಹಿತಕ್ಕಾಗಿ ದುಡಿಯುವುದೇ
ಉತ್ತಮಾ ತ್ಯಾಗ ಧರ್ಮವಾಗಿದೆ.

ಉತ್ತಮಾ ಆಕಿಂಚನ್ಯ ಧರ್ಮ: ಸಮಸ್ತ ಪರಿಗ್ರಹ ಗಳನ್ನು ತ್ಯಾಗ ಮಾಡಿ ನಿರ್ಲೋಭ ಭಾವನೆಯಿಂದಿರುವುದು, ಆತ್ಮನ ವಿಚಾರಗಳನ್ನು ಮಾತ್ರ ಚಿಂತಿಸುತ್ತಾ, ಅನ್ಯ ವಿಷಯ/ಪದಾರ್ಥಗಳಲ್ಲಿ ರಾಗ-ದ್ವೇಷಗಳ ಭಾವನೆಯಿಂದ ದೂರವಾಗಿರುವುದೇ ಉತ್ತಮಾ ಆಕಿಂಚನ್ಯ ಧರ್ಮವಾಗಿದೆ.

ಉತ್ತಮಾ ಬ್ಯಹ್ಮಚರ್ಯ ಧರ್ಮ: ಬ್ರಹ್ಮ ಅಥವಾ ಆತ್ಮನಲ್ಲಿ ಲೀನವಾಗುವುದು, ಕಾಮವಾಸನೆಯನ್ನು ಆಘ್ರಾಣಿ ಸದೇ ನಮ್ಮ ಪರಿಣಾಮವನ್ನು ಮಲಿನಗೊಳಿಸದೇ ಧ್ಯಾನದಲ್ಲಿ ಚಿತ್ತವನ್ನು ತೊಡಗಿಸುವುದೇ ಉತ್ತಮಾ ಬ್ರಹ್ಮಚರ್ಯ ಧರ್ಮ ವಾಗಿದೆ. ಆತ್ಮನ ಸದ್ವಿಹಾರಕ್ಕೆ 10 ಲಕ್ಷಣವನ್ನು ಒಳಗೊಂಡ ಧರ್ಮವು ನಿಮಿತ್ತವಾಗಿರುತ್ತದೆ ಮತ್ತು ಬುನಾದಿಯಾಗಿರುತ್ತದೆ. ಇದು ಆತ್ಮನ ಉನ್ನತಿಗೆ ಮತ್ತು ಸದ್ಗತಿಗೆ ಪ್ರೇರಣೆ ನೀಡುತ್ತದೆ. ಧರ್ಮದ ಸಿದ್ಧಾಂತ ಗಳನ್ನು ನಮ್ಮ ಸಾಮರ್ಥ್ಯಕ್ಕೆ ಅನುಗು ಣವಾಗಿ ಅಳವಡಿಸಿಕೊಳ್ಳುತ್ತಾ, ನಮ್ಮನ್ನು ನಾವು ಶ್ರೇಷ್ಠತೆಯ ಪರಿಧಿ ಯೊಳಗೆ ಸೇರಿಸಿಕೊಳ್ಳಲು ಸಹಾಯಕವಾಗುವ ಧರ್ಮದ 10 ಲಕ್ಷಣಗಳಲ್ಲಿ ತ್ರಿಕರಣಪೂರ್ವಕವಾಗಿ ತೊಡಗಿಸಿ ಕೊಳ್ಳುತ್ತಾ ಊರ್ಧ್ವಗಾಮಿಯಾಗೋಣ.