Friday, 22nd November 2024

US election 2024: ʻಪುಟಿನ್‌ ನಿಮ್ಮನ್ನು ಊಟಕ್ಕೆ ತಿಂದು ಹಾಕುತ್ತಾರೆ..ʼ- ಟ್ರಂಪ್‌ ವಿರುದ್ಧ ಕಮಲಾ ಗುಡುಗು

US Election 2024

ವಾಷಿಂಗ್ಟನ್‌: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ(US election 2024) ಗರಿಗೆದರಿದ್ದು, ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಗಳಾದ ಡೆಮಾಕ್ರಟಿಕ್‌ ಪಕ್ಷ(Democratic Party)ದ ಕಮಲಾ ಹ್ಯಾರಿಸ್‌(Kamala Harris) ಮತ್ತು ರಿಪಬ್ಲಿಕ್‌ ಪಕ್ಷ(Republic Party) ಡೊನಾಲ್ಡ್‌ ಟ್ರಂಪ್‌(Donald Trump) ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದಾರೆ. ಉಭಯ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಫಿಲಿಡೆಲ್ಫಿಯಾದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾದ ಕಮಲಾ ಮತ್ತು ಟ್ರಂಪ್‌ ರಷ್ಯಾ-ಉಕ್ರೇನ್‌ ಯುದ್ಧಕ್ಕೆ ಸಂಬಂಧಿಸಿದಂತೆ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಝೆಲೆನ್ಸ್ಕಿ ಮತ್ತು ಪುಟಿನ್ ಅವರೊಂದಿಗೆ ಕಮಲಾ ಮತ್ತು ಬಿಡೆನ್ ಶಾಂತಿ ಒಪ್ಪಂದದ ಮಾತುಕತೆ ನಡೆಸಿದ ಮೂರು ದಿನಗಳ ನಂತರ ರಷ್ಯಾ – ಉಕ್ರೇನ್ ಯುದ್ಧ ಪ್ರಾರಂಭವಾಯಿತು ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿದ ಕಮಲಾ ಹ್ಯಾರಿಸ್‌, ಟ್ರಂಪ್‌ ನೈಜಾಂಶವನ್ನು ಮರೆಮಾಚಿ ಸರ್ವಾಧಿಕಾರಿಗಳ ಪರ ಬ್ಯಾಟಿಂಗ್‌ ನಡೆಸುತ್ತಿದ್ದಾರೆ. ಇಲ್ಲದಿದ್ದರೆ ಅವರನ್ನು ರಷ್ಯಾ ಅಧ್ಯಕ್ಷ ಪುಟಿನ್‌ ಮಧ್ಯಾಹ್ನದ ಊಟಕ್ಕ ತಿಂದು ಬಿಡುತ್ತಾರೆ ಎಂಬ ಭಯ ಇದೆ.

ಟ್ರಂಪ್‌ ಅವರು ಸರ್ವಾಧಿಕಾರಿಗಳ ಬಗ್ಗೆ ಅತ್ಯಂತ ಹೆಚ್ಚು ಒಲವು ಮತ್ತು ಸ್ನೇಹವನ್ನಿಟ್ಟುಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರೊಂದಿಗೆ ಪ್ರೇಮ ಪತ್ರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ಸರ್ವಾಧಿಕಾರಿಗಳು ಮತ್ತು ನಿರಂಕುಶಾಧಿಕಾರಿಗಳು ನೀವು ಮತ್ತೊಮ್ಮೆ ಅಧ್ಯಕ್ಷರಾಗಬೇಕೆಂದು ಬಯಸುತ್ತಾರೆ ಏಕೆಂದರೆ ಅವರು ನಿಮ್ಮ ಸಹಾಯದಿಂದ ತಮಗೆ ಬೇಕಾದ ರೀತಿಯಲ್ಲಿ ನಿರಾಳವಾಗಿ ಆಡಳಿತ ನಡೆಸಬಹುದಾಗಿದೆ.

ಒಂದು ವೇಳೆ ಟ್ರಂಪ್ ಪುಟಿನ್ ಆಗಿದ್ದರೆ, ಅವರು ಉಕ್ರೇನ್ ಒಳಗೆ ಕುಳಿತುಕೊಳ್ಳುತ್ತಿದ್ದರು. ಯುರೋಪಿಯನ್ ಮಿತ್ರರಾಷ್ಟ್ರಗಳು ಮತ್ತು ನಮ್ಮ ಸ್ಥಳೀಯ ಮಿತ್ರರಾಷ್ಟ್ರಗಳು ನೀವು ಎರಡನೇ ಬಾರಿ ಅಧ್ಯಕ್ಷರಾಗದೇ ಇದ್ದ ಕಾರಣಕ್ಕೆ ಬಹಳ ಸಂತಸ ಪಟ್ಟಿವೆ. ಶ್ರೇಷ್ಠ ಮಿಲಿಟರಿ ಮೈತ್ರಿ ನ್ಯಾಟೋದ ಮಹತ್ವದ ಬಗ್ಗೆ ನಮಗರಿವಿದೆ. ಅದೂ ಅಲ್ಲದೇ ಸ್ವತಂತ್ರಕ್ಕಾಗಿ ಉಕ್ರೇನ್‌ ಅ‍ಧ್ಯಕ್ಷ ವೋಲ್ಡಿಮಿರ್‌ ಝೆಲೆನ್‌ಸ್ಕಿ ಮತ್ತು ಅಲ್ಲಿ ಪ್ರಜೆಗಳ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿರುವ ಮಹತ್ವದ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಇಲ್ಲದಿದ್ದರೆ, ಕೈವ್‌ನಲ್ಲಿ ಕುಳಿತು ಪುಟಿನ್ ಯುರೋಪಿನ ಉಳಿದ ಭಾಗಗಳನ್ನು ಆಕ್ರಮಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದ್ದರು ಎಂದು ಕಮಲಾ ಟಾಂಗ್‌ ಕೊಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್‌ ಕೇವಲ ಯುದ್ಧವನ್ನು ನಿಲ್ಲಿವುದೇ ನನ್ನ ಮೂಲ ಉದ್ದೇಶ. ನನ್ನಂತೆ ನ್ಯಾಟೋಗೆ ಕರೆ ನೀಡುವ ಧೈರ್ಯ ನಿಮಗಾಗಲೀ ಅಥವಾ ಜೋ ಬೈಡೆನ್‌ಗಾಗಲೀ ಇಲ್ಲ. ಜೋ ಬೈಡೆನ್‌ ಇದುವರೆಗೆ ಪುಟಿನ್‌ಗೆ ಕರೆ ಮಾಡಿ ಯುದ್ಧ ನಿಲ್ಲಿವ ಬಗ್ಗೆ ಚರ್ಚೆ ಮಾಡಿಲ್ಲ. ಅವರಿಗೆ ಪುಟಿನ್‌ ಜತೆ ಹೇಗೆ ಮಾತನಾಡಬೇಕೆಂದೇ ತಿಳಿದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನನೂ ಓದಿ: Russia-Ukraine War: ಉಕ್ರೇನ್‌ ಜತೆ ಮಾತುಕತೆಗೆ ಸಿದ್ಧ ಎಂದ ಪುಟಿನ್‌- ಮಧ್ಯಸ್ಥಿಕೆ ವಹಿಸುತ್ತಾ ಭಾರತ?