Friday, 29th November 2024

2024ರ ಅಂತ್ಯದ ವೇಳೆಗೆ ಭಾರತದ ರಫ್ತು ವಹಿವಾಟು 13ಶತಕೋಟಿ ಡಾಲರ್‌ಗೆ ತಲುಪಲು ಅಮೆಜಾನ್‌ ನೆರವು

~ಅಮೆಜಾನ್ ಇ-ಕಾಮರ್ಸ್ ರಫ್ತು ವಹಿವಾಟಿನ ಪ್ರಮುಖ ಬೆಳವಣಿಗೆ ಮೇಲೆ ಬೆಳಕು ಚೆಲ್ಲುವ ʼಎಕ್ಸ್‌ಪೋರ್ಟ್ಸ್ ಡೈಜೆಸ್ಟ್ 2024ʼ (ಸುವ್ಯವಸ್ಥಿತ ಮಾಹಿತಿ) ವರದಿ ಪ್ರಕಟ

ಅಮೆಜಾನ್‌ನ ಜಾಗತಿಕ ಮಾರಾಟ ಕಾರ್ಯಕ್ರಮವು 2015 ರಿಂದ ವಿಶ್ವದಾದ್ಯಂತ ಗ್ರಾಹಕರಿಗೆ ಭಾರತದ 1.50 ಲಕ್ಷ ರಫ್ತುದಾರರಿಗೆ ʼಭಾರತದಲ್ಲಿಯೇ ತಯಾರಿಸಿದʼ 40 ಕೋಟಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಟ್ಟಿದೆ.
• ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳು ಅಮೆಜಾನ್‌ ಜಾಗತಿಕ ಮಾರಾಟ ಕಾರ್ಯಕ್ರಮದಲ್ಲಿ ಗರಿಷ್ಠ ಸಂಖ್ಯೆಯ ರಫ್ತುದಾರರನ್ನು ಹೊಂದಿರುವ ರಾಜ್ಯಗಳಾಗಿ ಹೊರಹೊಮ್ಮಿವೆ
• ವರ್ಷದಿಂದ ವರ್ಷಕ್ಕೆ ಗರಿಷ್ಠ ಬೆಳವಣಿಗೆಯು ಸೌಂದರ್ಯ (ಶೇ 40 +), ಉಡುಪು (ಶೇ 35 +), ಆರೋಗ್ಯ ಮತ್ತು ವೈಯಕ್ತಿಕ ಕಾಳಜಿ (ಶೇ 30 +), ಆಟಿಕೆಗಳು (ಶೇ 25 +) ಮತ್ತು ಮನೆ (ಶೇ20 +)

ಭಾರತದ ರಫ್ತು ವಹಿವಾಟಿನ 2024ನೇ ಸಾಲಿನ ಸುವ್ಯವಸ್ಥಿತ ಮಾಹಿತಿಯನ್ನು (ಎಕ್ಸ್‌ಪೋರ್ಟ್ಸ್ ಡೈಜೆಸ್ಟ್ 2024) ಅಮೆಜಾನ್‌ ಇಂದು ಇಲ್ಲಿ ಬಿಡುಗಡೆಗೊಳಿಸಿದೆ. 2024ರ ಅಂತ್ಯದ ವೇಳೆಗೆ ಭಾರತದ ಇ-ಕಾಮರ್ಸ್‌ನ ಒಟ್ಟಾರೆ ರಫ್ತು ವಹಿವಾಟಿನಲ್ಲಿ ದೇಶದ ಲಕ್ಷಾಂತರ ಉದ್ಯಮಗಳ ವಹಿವಾಟು 13 ಶತಕೋಟಿ ಡಾಲರ್‌ ದಾಟುವ ಹಾದಿಯಲ್ಲಿದೆ ಎಂದು ತಿಳಿಸಿದೆ. ಅಮೆಜಾನ್‌ನ ಪ್ರಮುಖ ಇ-ವಾಣಿಜ್ಯ ರಫ್ತು ಕಾರ್ಯಕ್ರಮವಾಗಿರುವ – ʼಅಮೆಜಾನ್‌ ಜಾಗತಿಕ ಮಾರಾಟʼವನ್ನು 2015ರಲ್ಲಿ ಪ್ರಾರಂಭಿಸಲಾಗಿತ್ತು. ಕಳೆದ ಒಂಬತ್ತು ವರ್ಷಗಳಲ್ಲಿ, 1.50 ಲಕ್ಷ ರಫ್ತುದಾರರು ಈ ಕಾರ್ಯಕ್ರಮದ ಭಾಗವಾಗಿದ್ದಾರೆ, ಅವರೆಲ್ಲರ ಒಟ್ಟಾರೆ ಮಾರಾಟವು ʼಭಾರತದಲ್ಲಿಯೇ ತಯಾರಿಸಿದ ʼ 40 ಕೋಟಿ ಉತ್ಪನ್ನಗಳನ್ನು ವಿಶ್ವದಾದ್ಯಂತ ಗ್ರಾಹಕರಿಗೆ ಮಾರಾಟ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿನ ಒಟ್ಟು ಮಾರಾಟಗಾರರ ಸಂಖ್ಯೆಯು ಕಳೆದ ವರ್ಷದಲ್ಲಿ ಶೇ 20ರಷ್ಟು ಬೆಳೆದಿದೆ. ಅಮೆ ಜಾನ್‌ನ ಜಾಗತಿಕ ಮಾರಾಟ ಕಾರ್ಯಕ್ರಮವನ್ನು ದೇಶದಾದ್ಯಂತ ರಫ್ತುದಾರರು ಗಮನಾರ್ಹವಾಗಿ ಅಳವಡಿಸಿ ಕೊಳ್ಳುತ್ತಿದ್ದಾರೆ. ದೇಶದ 200ಕ್ಕೂ ಹೆಚ್ಚು ನಗರಗಳ ಮಾರಾಟಗಾರರು ಈ ಕಾರ್ಯಕ್ರಮದ ಭಾಗವಾಗಿದ್ದಾರೆ. ಅಮೆರಿಕ, ಇಂಗ್ಲೆಂಡ್‌, ಅರಬ್‌ ಅಮೀರರ ಒಕ್ಕೂಟ (ಯುಎಇ) ಸೌದಿ ಅರೇಬಿಯಾ, ಕೆನಡಾ, ಮೆಕ್ಸಿಕೊ, ಜರ್ಮನಿ, ಇಟಲಿ, ಫ್ರಾನ್ಸ್, ಸ್ಪೇನ್, ಆಸ್ಟ್ರೇಲಿಯಾ ಸೇರಿದಂತೆ 18ಕ್ಕೂ ಹೆಚ್ಚು ಅಮೆಜಾನ್‌ ಜಾಗತಿಕ ಮಾರುಕಟ್ಟೆ ತಾಣಗಳಲ್ಲೊ ಕೋಟ್ಯಂತರ ಗ್ರಾಹಕರಿಗೆ ಸರಕುಗಳನ್ನು ಮಾರಾಟ ಮಾಡುವ ಮೂಲಕ ಜಾಗತಿಕ ಬ್ರ್ಯಾಂಡ್‌ಗಳನ್ನು ನಿರ್ಮಿಸಲು ಇದು ಮಾರಾಟಗಾರರಿಗೆ ಅನುವು ಮಾಡಿಕೊಡುತ್ತಿದೆ.

ಈ ಸಂದರ್ಭದಲ್ಲಿ ಕೇಂದ್ರದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವ ಮತ್ತು ಶಿಕ್ಷಣ ರಾಜ್ಯ ಸಚಿವ ಜಯಂತ ಚೌಧರಿ ಅವರು ಮಾತನಾಡಿ, “ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳ ರಫ್ತುಗಳನ್ನು ಉತ್ತೇಜಿಸುವುದು ದೇಶದ ಆರ್ಥಿಕ ಬೆಳವಣಿಗೆಗೆ ಮಹತ್ವದ್ದಾಗಿದೆ. ಇ-ಕಾಮರ್ಸ್ ಕ್ಷೇತ್ರವು ಈ ನಿಟ್ಟಿನಲ್ಲಿ ಪ್ರಮುಖ ಕೊಡುಗೆ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾವಲಂಬನೆಯ ಭಾರತದ (ಆತ್ಮನಿರ್ಭರ ಭಾರತ್‌) ದೂರದೃಷ್ಟಿಗೆ ಅನುಗುಣವಾಗಿ, ಎಂಎಸ್‌ಎಂಇಗಳು ಜಾಗತಿಕವಾಗಿ ಅಭಿವೃದ್ಧಿ ಹೊಂದುವ ಮತ್ತು ತಮ್ಮ ವಹಿವಾಟನ್ನು ವಿಸ್ತರಿಸಲು ಪೂರಕ ವಾತಾವರಣವನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ.

ಅಮೆಜಾನ್ ಜಾಗತಿಕ ಮಾರಾಟದಂತಹ ಕಾರ್ಯಕ್ರಮಗಳಿಂದ ಉತ್ತೇಜಿತವಾಗಿರುವ ಇ-ಕಾಮರ್ಸ್ ರಫ್ತುಗಳು, ʼಎಂಎಸ್‌ಎಂಇʼಗಳಿಗೆ ತಮ್ಮ ಉತ್ಪನ್ನಗಳನ್ನು ಜಾಗತಿಕ ಗ್ರಾಹಕರಿಗೆ ಪರಿಚಯಿಸಲು ಸರಿಸಾಟಿಯಿಲ್ಲದ ಅವಕಾಶ ಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಭಾರತದಾದ್ಯಂತ ಜಿಲ್ಲೆ, ನಗರ ಮತ್ತು ಸಣ್ಣ ಪಟ್ಟಣಗಳ ಉದ್ಯಮಿಗಳು ಇ-ಕಾಮರ್ಸ್ ರಫ್ತು ಅವಕಾಶಗಳನ್ನು ಪಡೆದುಕೊಳ್ಳಲು ಸಮರ್ಥರಾಗಿದ್ದಾರೆ. ಸಮರ್ಪಕ ನೀತಿಗಳು ಮತ್ತು ಬೆಂಬಲ ನೀಡುವ ವ್ಯವಸ್ಥೆಯ ನೆರವಿನಿಂದ ನಾವು ಈ ಉದ್ಯಮಿಗಳನ್ನು ಸಶಕ್ತಗೊಳಿಸಿ ಭಾರತವನ್ನು ಪ್ರಮುಖ ರಫ್ತು ದೇಶವನ್ನಾಗಿ ನಿರ್ಮಿಸಬಹುದುʼ ಎಂದು ಹೇಳಿದರು

ಅಮೆಜಾನ್ ಇಂಡಿಯಾದ ಜಾಗತಿಕ ವಹಿವಾಟಿನ ನಿರ್ದೇಶಕ ಭೂಪೇನ್ ವಾಕಂಕರ್ ಅವರ ಪ್ರಕಾರ, “ಅಮೆಜಾನ್ ಜಾಗತಿಕ ಮಾರಾಟ ಕಾರ್ಯಕ್ರಮವು ಭಾರತದ ರಫ್ತುದಾರರನ್ನು ಜಾಗತಿಕ ಗ್ರಾಹಕರನ್ನು ತಲುಪಲು ವಿಪುಲ ಅವಕಾಶಗಳನ್ನು ಒದಗಿಸುತ್ತಿದೆ. ಭಾರತದ ʼಎಂಎಸ್‌ಎಂಇʼಗಳಿಗೆ ಇ-ಕಾಮರ್ಸ್ ರಫ್ತು ವಹಿವಾಟನ್ನು ಸುಗಮಗೊಳಿಸಲು ತಂತ್ರಜ್ಞಾನವು ಸಮರ್ಥ ರೀತಿಯಲ್ಲಿ ನೆರವಾಗುತ್ತಿದೆ. ಉತ್ಪನ್ನಗಳ ಮಾರಾಟಗಾರರು ಜಾಗತಿಕ ಗ್ರಾಹಕರನ್ನು ಗರಿಷ್ಠ ಪ್ರಮಾಣದಲ್ಲಿ ತಲುಪಲು, ಉತ್ಪನ್ನಗಳ ವಿತರಣೆ ತ್ವರಿತಗೊಳಿಸಲು ಮತ್ತು ಮಾರಾಟ ಹೆಚ್ಚಳಕ್ಕೆ ನೆರವಾಗುವ ಸಾಧನಗಳು ಹಾಗೂ ತಂತ್ರಜ್ಞಾನಕ್ಕೆ ನಾವು ಗಮನಾರ್ಹ ಪ್ರಮಾಣದಲ್ಲಿ ಬಂಡವಾಳ ತೊಡಗಿಸಿದ್ದೇವೆ.

ಅಮೆಜಾನ್‌ನ ಜಾಗತಿಕ ಮಾರುಕಟ್ಟೆ ತಾಣಗಳಲ್ಲಿ ಲಾಭದಾಯಕ ವಹಿವಾಟು ನಡೆಸುವ ರಫ್ತುದಾರರ ಸಂಖ್ಯೆ ಯಲ್ಲಿನ ಹೆಚ್ಚಳವು ಈ ಕಾರ್ಯಕ್ರಮದ ಯಶಸ್ಸಿಗೆ ಕನ್ನಡಿ ಹಿಡಿಯುತ್ತದೆ. ತಂತ್ರಜ್ಞಾನದ ಸಮರ್ಥ ಬಳಕೆ ಮತ್ತು ವಿಭಿನ್ನ ಪಾಲುದಾರರ ಜೊತೆಗೆ ಸದೃಢ ಸಂಪರ್ಕ ಸಾಧಿಸಲು ನೆರವಾಗುವ ಮೂಲಕ ಸಣ್ಣ ಉದ್ದಿಮೆಗಳು ಮತ್ತು ನವೋದ್ಯಮಗಳಿಗೆ ನಾವು ನಿರಂತರವಾಗಿ ಅಗತ್ಯ ಬೆಂಬಲ ಮುಂದುವರೆಸುತ್ತೇವೆ. 2025ರ ವೇಳೆಗೆ ಭಾರತದಿಂದ 20 ಶತಕೋಟಿ ಡಾಲರ್‌ ಮೊತ್ತದ ಇ-ಕಾಮರ್ಸ್‌ನ ಒಟ್ಟಾರೆ ರಫ್ತು ವಹಿವಾಟು ನಡೆಸುವುದಕ್ಕೆ ನೆರವಾಗಲು ಅಮೆಜಾನ್‌ ಬದ್ಧವಾಗಿದೆ.

ರಫ್ತು ಡೈಜೆಸ್ಟ್ 2024ರ ಮುಖ್ಯಾಂಶಗಳು
ರಫ್ತು ಡೈಜೆಸ್ಟ್‌ 2024- ಇ-ಕಾಮರ್ಸ್ ರಫ್ತು ವಹಿವಾಟಿಗೆ ಸಂಬಂಧಿಸಿದ ಅಮೆಜಾನ್‌ನ ವಾರ್ಷಿಕ ಕಾಫಿ ಟೇಬಲ್ ಬುಕ್ ಆಗಿದೆ. (ಹೊಸ ವರದಿ ಜೊತೆಗೆ ಹೈಪರ್‌ಲಿಂಕ್ ಮಾಡಲಾಗಿದೆ) ಅಮೆಜಾನ್ ಜಾಗತಿಕ ಮಾರಾಟ ಕಾರ್ಯಕ್ರಮದ ಮೂಲಕ ಭಾರತದಿಂದ ಇ-ಕಾಮರ್ಸ್ ರಫ್ತು ವಹಿವಾಟಿನ ಯಶಸ್ಸು ಮತ್ತು ಪ್ರಮಾಣದ ಒಳನೋಟಗಳನ್ನು ಒದಗಿಸುತ್ತದೆ. ʼಭಾರತದಲ್ಲಿಯೇ ತಯಾರಿಸಿʼ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಗಳಾದ್ಯಂತ ಹೆಚ್ಚುತ್ತಿರುವ ಬೇಡಿಕೆಯನ್ನು ಇದು ಪ್ರತಿಬಿಂಬಿಸುತ್ತದೆ. ಅಮೆಜಾನ್ ಜಾಗತಿಕ ಮಾರಾಟ ಕಾರ್ಯಕ್ರಮವು ಭಾರತದಾದ್ಯಂತ ʼಎಂಎಸ್‌ಎಂಇʼಗಳು ಮತ್ತು ಉದ್ಯಮಿಗಳಿಗೆ ರಫ್ತು ವಹಿವಾಟನ್ನು ಸುಲಭಗೊಳಿಸಲು ಮತ್ತು ಹೆಚ್ಚು ಅವಕಾಶಗಳನ್ನು ಒದಗಿಸಲು ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಈ ಕಾರ್ಯಕ್ರಮವು ಈಗ 28 ರಾಜ್ಯಗಳು, 7 ಕೇಂದ್ರಾಡಳಿತ ಪ್ರದೇಶಗಳು ಮತ್ತು 200ಕ್ಕೂ ಹೆಚ್ಚು ನಗರಗಳ ರಫ್ತುದಾರರನ್ನು ಹೊಂದಿದೆ.

ಮಿನಿಮಲಿಸ್ಟ್‌ನ ಸಂಸ್ಥಾಪಕರಾದ ಮೋಹಿತ್ ಮತ್ತು ರಾಹುಲ್ ಯಾದವ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ಅಮೆರಿಕ, ಇಂಗ್ಲೆಂಡ್‌ ಮಧ್ಯಪ್ರಾಚ್ಯ, ಸಿಂಗಪುರ ಮತ್ತು ಆಸ್ಟ್ರೇಲಿಯಾದಂತಹ ಮಾರುಕಟ್ಟೆ ಒಳಗೊಂಡಂತೆ ವಿಶ್ವದಾದ್ಯಂತ ನಮ್ಮ ಗ್ರಾಹಕರ ನೆಲೆಯನ್ನು ವೇಗವಾಗಿ ವಿಸ್ತರಿಸುವಲ್ಲಿ ಅಮೆಜಾನ್ ಜಾಗತಿಕ ಮಾರಾಟ ಕಾರ್ಯಕ್ರಮವು ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಸರಕುಗಳ ಸಂಗ್ರಹ, ಪ್ಯಾಕಿಂಗ್‌, ಸಾಗಾಣಿಕೆ, ವಿತರಣೆ ಮತ್ತು ಗ್ರಾಹಕರ ಬೆಂಬಲಕ್ಕೆ ಏಕೈಕ ಪರಿಹಾರವಾಗಿರುವ ಅಮೆಜಾನ್‌ನ ಫುಲ್‌ಫಿಲ್‌ಮೆಂಟ್‌ ಬೈ ಅಮೆಜಾನ್‌ (ಎಫ್‌ಬಿಎ) ಕಾರ್ಯಕ್ರಮವು ಹೊಸ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಪರಿಪೂರ್ಣ ರೀತಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ಪ್ರವೇಶಿಸಲು ನೆರವಾಗಿದೆ. ಉದ್ಯಮದಲ್ಲಿಯೇ ಮುಂಚೂಣಿಯಲ್ಲಿ ಇರುವ ವಿತರಣಾ ಸಮಯದ ನೆರವಿನಿಂದ ಮೂರು ವರ್ಷಗಳಲ್ಲಿ ನಾವು ಅಮೆಜಾನ್‌ ಯುಎಸ್‌ಎ-ನಲ್ಲಿ ಶೇ 135ರಷ್ಟು ಮತ್ತು ಅಮೆಜಾನ್‌ ಯುಕೆನಲ್ಲಿ ಶೇ 75ಕ್ಕಿಂತ ಹೆಚ್ಚು ಬೆಳೆದಿದ್ದೇವೆ. ಪ್ರೈಮ್ ಡೇ ಮಾರಾಟದ ಹೆಚ್ಚಳ ಮತ್ತು ಅಮೆಜಾನ್‌ನ ದತ್ತಾಂಶ ಆಧಾರಿತ ಒಳನೋಟಗಳ ಫಲವಾಗಿ ನಮ್ಮ ವಹಿವಾಟು ಗಮನಾರ್ಹವಾಗಿ ಹೆಚ್ಚಳಗೊಂಡಿರುವುದಲ್ಲದೆ, ಹೊಸ ಮಾರುಕಟ್ಟೆ ಅವಕಾಶಗಳನ್ನೂ ಗುರುತಿಸಿದೆʼ ಎಂದು ಹೇಳಿದ್ದಾರೆ.

2023ರಲ್ಲಿ ಅಮೆಜಾನ್ ಜಾಗತಿಕ ಮಾರಾಟದಲ್ಲಿ ಉನ್ನತ ಬೆಳವಣಿಗೆಯ ವಿಭಾಗಗಳು

  • ಸೌಂದರ್ಯ: ವರ್ಷದಿಂದ ವರ್ಷಕ್ಕೆ ಶೇ 40ಕ್ಕಿಂತ ಹೆಚ್ಚು ಬೆಳವಣಿಗೆ
  • ಉಡುಪು: ವರ್ಷದಿಂದ ವರ್ಷಕ್ಕೆ ಶೇ 35ಕ್ಕಿಂತ ಹೆಚ್ಚು ಬೆಳವಣಿಗೆ • ಆರೋಗ್ಯ ಮತ್ತು ವೈಯಕ್ತಿಕ ಕಾಳಜಿ: ವರ್ಷದಿಂದ ವರ್ಷಕ್ಕೆ ಶೇ 30ಕ್ಕಿಂತ ಹೆಚ್ಚು ಬೆಳವಣಿಗೆ
    • ಆಟಿಕೆಗಳು: ವರ್ಷದಿಂದ ವರ್ಷಕ್ಕೆ ಶೇ 25 ಕ್ಕಿಂತ ಹೆಚ್ಚು ಬೆಳವಣಿಗೆ
    • ಮನೆ: ವರ್ಷದಿಂದ ವರ್ಷಕ್ಕೆ ಶೇ 20 ಕ್ಕಿಂತ ಹೆಚ್ಚು ಬೆಳವಣಿಗೆ ಅಮೆಜಾನ್ ಜಾಗತಿಕ ಮಾರಾಟದಲ್ಲಿ ಭಾರತದ ಮಾರಾಟಗಾರರಿಗೆ ಪ್ರಮುಖ ಅಂತರಾಷ್ಟ್ರೀಯ ಮಾರುಕಟ್ಟೆ ತಾಣಗಳು
  • ಅಮೆರಿಕ
  • ಇಂಗ್ಲೆಂಡ್‌
    • ಕೆನಡಾ
  • ಜರ್ಮನಿ
  • ಫ್ರಾನ್ಸ್
    • ಇಟಲಿ
  • ಸ್ಪೇನ್
  • ಮೆಕ್ಸಿಕೊ

ಗಮನಾರ್ಹ ಬೆಳವಣಿಗೆಗೆ ಸಾಕ್ಷಿಯಾಗಿರುವ ಸಣ್ಣ ಪಟ್ಟಣಗಳು
• 2023ರಲ್ಲಿ ಸರಕುಗಳ ಮಾರಾಟದಲ್ಲಿ 89 ದಶಲಕ್ಷ ಡಾಲರ್‌ ಮೊತ್ತದ ವಹಿವಾಟು ದಾಟಿದ ಗುಜರಾತ್‌ನ ಆನಂದ್‌ ನಗರದ ರಫ್ತುದಾರರು.
• ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಿಂದ ರಫ್ತುದಾರರು 2023 ರಲ್ಲಿ 47 ದಶಲಕ್ಷ ಡಾಲರ್‌ನಷ್ಟು ಮಾರಾಟ ಮೊತ್ತ ದಾಟಿದ್ದಾರೆ.
• ತಮಿಳುನಾಡಿನ ಕರೂರ್‌ನಿಂದ ರಫ್ತುದಾರರು 2023 ರಲ್ಲಿ 37 ದಶಲಕ್ಷ ಡಾಲರ್‌ನಷ್ಟು ಮಾರಾಟ ಮೊತ್ತ ದಾಟಿದ್ದಾರೆ.
• ಉತ್ತರಾಖಂಡದ ಹರಿದ್ವಾರದಿಂದ ರಫ್ತುದಾರರು 2023 ರಲ್ಲಿ 27 ದಶಲಕ್ಷ ಮಾರಾಟ ದಾಟಿದ್ದಾರೆ.
• 2023 ರಲ್ಲಿ 23 ದಶಲಕ್ಷ ಡಾಲರ್‌ನಷ್ಟು ಮಾರಾಟ ದಾಟಿದ ಹರಿಯಾಣದ ಪಾಣಿಪತ್‌ನಿಂದ ರಫ್ತುದಾರರು
• ತಮಿಳುನಾಡಿನ ಈರೋಡ್‌ನ ರಫ್ತುದಾರರು 2023ರಲ್ಲಿ 24 ದಶಲಕ್ಷ ಡಾಲರ್‌ದಷ್ಟು ಮಾರಾಟ ದಾಟಿದ್ದಾರೆ.
• ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ರಫ್ತುದಾರರು 2023 15 ದಶಲಕ್ಷ ಡಾಲರ್‌ನಷ್ಟು ಮಾರಾಟ ದಾಟಿದ ದಾಖಲೆ ಬರೆದಿದ್ದಾರೆ.