ಗಂಟಾಘೋಷ
ಗುರುರಾಜ್ ಗಂಟಿಹೊಳೆ
ರಾಜ್ಯದಲ್ಲಿ ಒಟ್ಟು ೧,೩೨,೧೦೯ ಎಕರೆ ಗೋಮಾಳ ಜಮೀನು ಇದೆ ಎಂದು ಹೇಳಲಾಗಿದೆ. ಇದರಲ್ಲಿ, ಗಣನೀಯ ಭಾಗದ ಒತ್ತುವರಿಯಾಗಿದ್ದು ಇದರ ದಾಖಲಾತಿಯು ಆಳುವ ಸರಕಾರದ ಬಳಿಯಿಲ್ಲವೆಂಬುದು ಶೋಚನೀಯ ಸ್ಥಿತಿ. ಅಕ್ರಮವಾಗಿ ಸಾಗುವಳಿ ಚೀಟಿ ಮಾಡಿಸಿಕೊಂಡು ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವ ಘಟನೆಗಳು ರಾಜ್ಯಾದ್ಯಂತ ನಡೆದಿವೆ. ಇದು ರೈತರ ಬಗ್ಗೆ, ಗೋಮಾಳ ಮತ್ತು ಗೋವುಗಳ ಬಗ್ಗೆ ತೋರ ಲಾಗುತ್ತಿರುವ ನಿರ್ಲಕ್ಷ್ಯಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಭಾರತದಲ್ಲಿ, ಭೂಮಿಯನ್ನು ಅದರ ಬಳಕೆ ಮತ್ತು ಮಾಲೀಕತ್ವದ ಆಧಾರದ ಮೇಲೆ ವಿವಿಧ ವರ್ಗಗಳಾಗಿ ವರ್ಗೀ ಕರಿಸಲಾಗಿದೆ, ಉದಾಹರಣೆಗೆ ಅರಣ್ಯ, ಕೃಷಿ, ವಸತಿ, ವಾಣಿಜ್ಯ ಇತ್ಯಾದಿ. ಇವುಗಳಲ್ಲಿ ಗೋಮಾಳ ಭೂಮಿ ಯೂ ಒಂದಾಗಿದ್ದು, ಇದು ಪ್ರಾಣಿಗಳ ಮೇಯಿಸುವಿಕೆಗೆ ಮೀಸಲಾಗಿಟ್ಟ ಭೂಮಿಯಾಗಿದೆ. ಈ ಭೂಮಿ ಅನೇಕ ಗ್ರಾಮೀಣ ಸಮುದಾಯಗಳ ಜೀವನೋಪಾಯಕ್ಕೂ ಆಧಾರವಾಗುವ ಮೂಲಕ ತನ್ನದೇ ಆದ ಪ್ರಾಮುಖ್ಯ ವನ್ನು ಹೊಂದಿದೆ.
‘ಗೋಮಾಳ’ ಎಂಬ ಪದವನ್ನು ಮೊದಲು ವಿಶ್ಲೇಷಿಸೋಣ. ‘ಗೋ’ ಎಂದರೆ ಹಸು ಮತ್ತು ‘ಮಾಳ’ ಎಂದರೆ ಭೂಮಿ ಅಥವಾ ಪ್ರದೇಶ. ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವಾಗ, ಜಾನುವಾರುಗಳನ್ನು ಮೇಯಿಸಲು ಸರಕಾರವು ಗ್ರಾಮೀಣ ಸಮುದಾಯಗಳಿಗೆ ಈ ಭೂಮಿಯನ್ನು ನಿಯೋಜಿಸಿತು. ಗೋಮಾಳ ಭೂಮಿ ಎಂಬುದು ಸಾಮಾನ್ಯ ಹುಲ್ಲುಗಾವಲು ಬೆಳೆಯಲು ಗೊತ್ತುಪಡಿಸಿದ ಪ್ರದೇಶವಾಗಿದೆ ಎನ್ನಬಹುದು.
ಗೋಮಾಳ ಭೂಮಿಯು ಸರಕಾರಿ ಸ್ವಾಮ್ಯದ ಮತ್ತು ಜಾನುವಾರುಗಳ ಮೇಯಿಸುವಿಕೆಗೆ ಗೊತ್ತುಪಡಿಸಿದ ಪ್ರದೇಶ ವಾಗಿದ್ದು, ಇದನ್ನು ಮಾರಾಟ ಮಾಡಲಾಗುವುದಿಲ್ಲ. ಗೋವು ಸಾಕಾಣಿಕೆ ಸಮುದಾಯದ ಅಗತ್ಯಗಳನ್ನು ಪೂರೈಸಲು ಇದನ್ನು ಮೀಸಲಿಟ್ಟಿದ್ದು, ವಿಶೇಷವಾಗಿ ಕೃಷಿ ಪ್ರಾಣಿಗಳ ಮೇಲೆ ಅವಲಂಬಿತರಾಗಿರುವವರ ಜೀವನೋಪಾಯಕ್ಕಾಗಿ, ಗೋಮಾಳ ಭೂಮಿಯನ್ನು ಮಾರಾಟ ಅಥವಾ ದುರುಪಯೋಗದಿಂದ ರಕ್ಷಿಸಲು ಸರಕಾರವು ಕಟ್ಟುನಿಟ್ಟಾದ ನಿಯಮಗಳು ಮತ್ತು ನಿಬಂಧನೆಗಳನ್ನು ಹೊಂದಿದೆ. ಗೋಮಾಳ ಭೂಮಿಯನ್ನು ಮಾರಾಟ ಮಾಡುವ, ಖಾಸಗೀಕರಣಗೊಳಿಸುವ ಯಾವುದೇ ಪ್ರಯತ್ನವು ಕಾನೂನು ಕ್ರಮಕ್ಕೊಳಗಾಗುತ್ತದೆ.
ಹೀಗಿದ್ದರೂ, ಸರಕಾರವು ನಿರ್ದಿಷ್ಟ ಸಾರ್ವಜನಿಕ ಉದ್ದೇಶಗಳಿಗಾಗಿ, ಅಭಿವೃದ್ಧಿ ಯೋಜನೆಗಳಿಗಾಗಿ ಗೋಮಾಳ ಭೂಮಿಯನ್ನು ಹಂಚಬಹುದು, ಆದರೆ ಅದಕ್ಕೆ ಸರಿಯಾದ ಕಾರಣಗಳನ್ನು ಕೊಡಬೇಕು. ಕೆಲವು ಸಂದರ್ಭಗಳಲ್ಲಿ, ಭೂರಹಿತ ರೈತರು ಅಥವಾ ಕೃಷಿ ಕಾರ್ಮಿಕರಿಗೆ ಕೃಷಿಗಾಗಿ ಗೋಮಾಳದ ಸಣ್ಣ ಭಾಗಗಳನ್ನು ನೀಡಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಗತ್ಯ ಹುಲ್ಲುಗಾವಲು ಪ್ರದೇಶಗಳನ್ನು ಒದಗಿಸುವ ಮೂಲಕ ಗ್ರಾಮೀಣ ಸಮುದಾಯಗಳ ಸುಸ್ಥಿರತೆಗೆ ಗೋಮಾಳ ಭೂಮಿ ಅತ್ಯಗತ್ಯ.
ಈ ರೀತಿಯ ಭೂಮಿ ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವಲ್ಲಿ, ಜೀವನೋಪಾಯ, ಸುಸ್ಥಿರ ಬೆಳವಣಿಗೆ
ಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಭೂಮಿಯನ್ನು ಮಾರಾಟ ಮಾಡದಂತೆ ಅಥವಾ ಕಾನೂನು ಬಾಹಿರವಾಗಿ ಬಳಸದಂತೆ ರಕ್ಷಿಸಲು ಸರಕಾರವು ಕಟ್ಟುನಿಟ್ಟಾದ ನೀತಿಗಳನ್ನು ಮಾಡಿದೆ. ಇದರೊಟ್ಟಿಗೆ, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯಿದೆ, 1978ರ ಪ್ರಕಾರ, ಮಂಜೂರು ಮಾಡಿದ ಭೂಮಿ ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಇಂಥ ಒಂದು ಪ್ರಾಣಿಪ್ರೀತಿ, ಹಸು ಸಾಕುವವರ ಪರವಾಗಿರುವ ಗೋಮಾಳ ಎಂಬ ಮಾನವೀಯ ಗುಣವುಳ್ಳ ಭೂ ಹಂಚಿಕೆ ಪದ್ಧತಿಯು ಪುರಾತನ ಕಾಲದಿಂದಲೂ ಇದ್ದಿತೆಂದು ತಿಳಿದುಬರುತ್ತದೆ. ಶೇರ್ ಷಾ ಸೂರಿ (1540-1545) ಉತ್ಪನ್ನದ ವಿಷಯದಲ್ಲಿ ಭೂಮಿಯನ್ನು ಅಳೆದು ವರ್ಗೀಕರಿಸುವ ಮೂಲಕ ಕಾಬುಲಿಯಾತ್ ಮತ್ತು ಪಟ್ಟಾವನ್ನು ವಸಾಹತು ಸಾಧನಗಳಾಗಿ ಪರಿಚಯಿಸಿದನು.
ಭೂ ಕಂದಾಯ ವಸೂಲಿಗಾಗಿ ಕನುಂಗೊ, ಅಮಿಲ್ ಮತ್ತು ಅಮೀನ್ ಹುದ್ದೆಗಳನ್ನು ಸೃಷ್ಟಿಸಿದನು. ಅಕ್ಬರನ ಕಾಲದಲ್ಲಿ, ರಾಜಾ ತೋದರಮಲ್ಲ ಆ ವ್ಯವಸ್ಥೆಗೆ ಕೆಲವು ಸುಧಾರಣೆಗಳನ್ನು ಮಾಡುವ ಮೂಲಕ, ಇಡೀ ಸಾಮ್ರಾಜ್ಯ ವನ್ನು ಸುಬಾ, ಸರ್ಕಾರ್, ಪರಗಣ ಮತ್ತು ಮಹಲ್ ಎಂದು ವಿಂಗಡಿಸಿದನು.
ನಂತರದಲ್ಲಿ ಭಾರತಕ್ಕೆ ಬಂದ ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿ, ಕಂಪನಿ ಮತ್ತು ರಾಜಪ್ರಭುತ್ವದ ಅಡಿಯಲ್ಲಿ, ಈ ಕುರಿತಂತೆ ಎಚ್ಚರವಹಿಸಿ, ನಿಖರವಾದ ಆದಾಯದ ಮೂಲವಾಗಿದ್ದ ಈ ವ್ಯವಸ್ಥೆಗೆ ತಮ್ಮ ಸ್ಥಳೀಯ ಏಜೆಂಟರ ಮೂಲಕ ಒಂದು ವರ್ಷ, ಎರಡು ವರ್ಷಗಳು, ಐದು ವರ್ಷಗಳು ಮತ್ತು ಹತ್ತು ವರ್ಷಗಳ ವಸಾಹತುಗಳನ್ನಾಗಿ ವಿಂಗಡಿಸಿ ಜನರಿಗೆ ನೀಡುವ ಮೂಲಕ, ಅವರಿಂದ ಕರ-ಕಂದಾಯ ವಸೂಲಿ ಮಾಡಿದರು.
1793ರಲ್ಲಿ, ಲಾರ್ಡ್ ಕಾರ್ನ್‌ವಾಲಿಸ್ ಈ ಯೋಜನೆಯನ್ನು ಶಾಶ್ವತ ವಸಾಹತು ನಿಯಂತ್ರಣವನ್ನಾಗಿ ಪರಿಚಯಿ ಸುವ ಮುಖಾಂತರ ಭಾರತದಲ್ಲಿ ಮೊದಲ ಬಾರಿಗೆ, ಆಡಳಿತಗಾರನ ಸಹಿಯಿಂದ ಭೂಮಿಯ ಮೇಲಿನ ಮಾಲೀಕತ್ವ ಹೊಂದುವ ಪದ್ಧತಿಯು ಅಸ್ತಿತ್ವಕ್ಕೆ ಬಂದಿತು. ಈ ಮೂಲಕ, ಇಂಥ ವ್ಯತಿರಿಕ್ತ ನಿಯಂತ್ರಣವು ಗ್ರಾಮೀಣ ಬಂಗಾಳ ದಲ್ಲಿ ಹಲವು ಹೋರಾಟಗಾರರು-ಕ್ರಾಂತಿಕಾರರು ಜನ್ಮತಳೆದು ಹಲವಾರು ದಂಗೆಗಳು ಹುಟ್ಟಲು ಕಾರಣವಾಯಿತು.
ಮುಂದೆ ಇದು ‘ಬಂಗಾಳ ಟೆನೆನ್ಸಿ ಆಕ್ಟ್, 1885’ರ ಹುಟ್ಟಿಗೆ ಕಾರಣವಾಯಿತೆನ್ನಬಹುದು. ಮುಂದೆ ಈ ಕಾಯ್ದೆಯು ಸಮೀಕ್ಷೆಯ ಘಟಕವಾದ ಮೌಜಾವನ್ನು ರಚಿಸುವ, ಸಂಪೂರ್ಣ ಪ್ರದೇಶದ ವೈಜ್ಞಾನಿಕ ಸಮೀಕ್ಷೆ ಮತ್ತು ಮ್ಯಾಪಿಂಗ್‌ಗೆ ದಾರಿ ಮಾಡಿಕೊಟ್ಟಿತು. ಈ ಪ್ರದೇಶದ ಪ್ರತಿಯೊಂದು ತುಂಡುಭೂಮಿಗೆ ಭೂ ದಾಖಲೆಗಳನ್ನು ಈ ಕಾಯ್ದೆಯ ಅಡಿಯಲ್ಲಿ ಸಿದ್ಧಪಡಿಸಲಾಗಿದೆ, ಇದನ್ನು ‘ರೆಕಾರ್ಡ್ ಆಫ್- ರೈಟ್ಸ್’ (1888-1940) ಎಂದು ಸಹ ಕರೆಯಲಾಗುತ್ತದೆ.
ಪ್ರವಾಹ ಆಯೋಗದ (1940) ಶಿಫಾರಸುಗಳ ಆಧಾರದ ಮೇಲೆ ಭೂಮಿಯಿಂದ ಮಧ್ಯವರ್ತಿಗಳ ಹಿತಾಸಕ್ತಿಗಳನ್ನು ಅಳಿಸಿಹಾಕಲು, ಪಶ್ಚಿಮ ಬಂಗಾಳ ಸರಕಾರವು, ಸ್ವಾತಂತ್ರ್ಯದ ನಂತರ ತಕ್ಷಣವೇ ಎಲ್ಲಾ ರೀತಿಯ ಮಧ್ಯವರ್ತಿ ಹಿತಾಸಕ್ತಿಗಳನ್ನು ರದ್ದುಗೊಳಿಸಿ, 1953ರಲ್ಲಿ ಪಶ್ಚಿಮ ಬಂಗಾಳದ ಎಸ್ಟೇಟ್ ಸ್ವಾಧೀನ ಕಾಯ್ದೆಯನ್ನು ಜಾರಿ ಗೊಳಿಸಿತು.
ಮುಂದೆ ಇದು ಪಶ್ಚಿಮ ಬಂಗಾಳದ ಭೂಸುಧಾರಣಾ ಕಾಯ್ದೆ ಎಂದು ಪರಿಗಣಿತವಾಗಿ, ದೇಶದ ವಿವಿಧೆಡೆ ಜಾರಿಯಾಗಲು ಪ್ರೇರಣೆಯಾಯಿತೆನ್ನಬಹುದು. ಇಂಥ ಒಂದು ಉದಾತ್ತ ವಿಚಾರವಿಟ್ಟುಕೊಂಡು ಹಲವು
ಹೋರಾಟಗಾರರು ಶ್ರಮಿಸಿದ -ಲವಾಗಿ ಗೋಮಾಳ ಎಂಬ ಭೂ ವ್ಯವಸ್ಥೆಯು ಜನ್ಮತಳೆದು, ಕರ್ನಾಟಕದಲ್ಲೂ ಈ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಹೀಗಿದ್ದರೂ, ಅಧಿಕಾರಕ್ಕೆ ಬಂದ ಸರಕಾರಗಳು ವಿವಿಧ ಉದ್ದೇಶಗಳಿಗೆ ಬಳಸಲು ಗೋಮಾಳಗಳನ್ನು ಕೊಡುವುದನ್ನು ನಾವು ಕೇಳುತ್ತಿದ್ದೇವೆ.
೨೦೧೮ರಲ್ಲಿ ದೇಶದ ಮಹಾಲೇಖಪಾಲರು (ಇಅಎ), ಗೋಮಾಳ ಹಂಚಿಕೆಯನ್ನು ಕಟುವಾಗಿ ವಿರೋಧಿಸಿ, ಕರ್ನಾಟಕ ಭೂಕಂದಾಯ ನಿಯಮಗಳ ಪ್ರಕಾರ ಪ್ರತಿ 100 ಜಾನುವಾರುಗಳಿಗೆ 30 ಎಕರೆ ಗೋಮಾಳ ಭೂಮಿ ಯನ್ನು ಮೀಸಲಿಡಬೇಕು ಎಂದಿದ್ದರು. ಜತೆಗೆ, ವಿವಿಧ ಹೈಕೋರ್ಟ್‌ಗಳು ಗೋಮಾಳ ಭೂಮಿಯನ್ನು ಹಂಚಿಕೆ ಮಾಡದಂತೆ ಸರಕಾರಗಳಿಗೆ ಸೂಚಿಸಿರುವುದನ್ನು ಒತ್ತಿಹೇಳಿ ಇದಕ್ಕೆ ಸಂಬಂಧಿಸಿದ ಭೂ ಸುಧಾರಣೆಗಳನ್ನು
ವಿರೋಧಿಸಿದ್ದರು.
ಇಷ್ಟೆಲ್ಲ ನೀತಿನಿಯಮಗಳು ಗೋಮಾಳಕ್ಕಿದ್ದರೂ, ಮಠಗಳು, ಟ್ರಸ್ಟ್ ಇತರೆ ಖಾಸಗಿಯವರು ನಡೆಸುವ 195ರಷ್ಟು ಖಾಸಗಿ ಗೋಶಾಲೆಗಳನ್ನು ಬಿಟ್ಟರೆ ಸರಕಾರದ ಬಳಿ ಸ್ವಂತ ಗೋಶಾಲೆಗಳೇ ಇಲ್ಲ. ಒಂದು ಹಸುವಿನ ನಿರ್ವಹಣೆಗೆ ದಿನಕ್ಕೆ 1 ರುಪಾಯಿಯನ್ನು ಸರಕಾರ ಅನುದಾನವಾಗಿ ನೀಡುತ್ತಿದೆ. ಒಂದು ಅಂದಾಜಿನ ಪ್ರಕಾರ, 2022ರ ವರ್ಷದ ವೇಳೆಗೆ 3 ಕೋಟಿಯಷ್ಟು ಜಾನುವಾರುಗಳಿದ್ದು, ಪಾಲಿ ಕ್ಲಿನಿಕ್, ಪಶು ಆಸ್ಪತ್ರೆ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಮತ್ತು ಸಂಚಾರಿ ಚಿಕಿತ್ಸಾಲಯಗಳ ವ್ಯವಸ್ಥೆ ಮತ್ತು ಸಂಖ್ಯೆಗಳು ಅತ್ಯಂತ ಕೆಟ್ಟದಾಗಿವೆ ಹಾಗೂ ಅವು ಅಂಕಿ-ಸಂಖ್ಯೆಗಳಿಗೆ ಅನುಗುಣವಾಗಿಲ್ಲ. ಹೀಗಾಗಿ ಪಶುಗಳು ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿರುವ ವರದಿಗಳೇ ಅತ್ಯಧಿಕ ವಾಗಿವೆ. ಇವುಗಳ ನಿರ್ವಹಣೆಗೆ ಪಶು ಸಂಗೋಪನೆ ಇಲಾಖೆ ಸಿಬ್ಬಂದಿಗಳು ೯ ಸಾವಿರದಷ್ಟಿದ್ದು, ಇನ್ನೂ ೧೦ ಸಾವಿರ ಹುದ್ದೆಗಳು ಖಾಲಿಯಿವೆ ಎಂಬ ಮಾಹಿತಿಯಿದೆ.
ರಾಜ್ಯದಲ್ಲಿ ಒಟ್ಟು 132109 ಎಕರೆ ಗೋಮಾಳ ಜಮೀನು ಇದೆ ಎಂದು ಹೇಳಲಾಗಿದೆ. ಇದರಲ್ಲಿ, ಗಣನೀಯ ಭಾಗವು ಅನಧಿಕೃತವಾಗಿ ಒತ್ತುವರಿಯಾಗಿದೆ. ಇಂಥ ಒತ್ತುವರಿಯಾದ ಗೋಮಾಳ ಜಮೀನಿನ ದಾಖಲಾತಿಯು ಆಳುವ ಸರಕಾರದ ಬಳಿಯಿಲ್ಲವೆಂಬುದು ಅತ್ಯಂತ ಶೋಚನೀಯ ಸ್ಥಿತಿ. ಅಕ್ರಮವಾಗಿ ಸಾಗುವಳಿ ಚೀಟಿ ಮಾಡಿಸಿಕೊಂಡು ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವ ಘಟನೆಗಳು ರಾಜ್ಯಾದ್ಯಂತ ನಡೆದಿವೆ. ಇದು ರೈತರ ಬಗ್ಗೆ, ಗೋಮಾಳ ಮತ್ತು ಗೋವುಗಳ ಬಗ್ಗೆ ಅಧಿಕಾರಿಗಳು, ಸರಕಾರಗಳು ತೋರುತ್ತಿರುವ ನಿರ್ಲಕ್ಷ್ಯಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಮಂಡ್ಯ ಜಿಲ್ಲೆ ಸೇರಿದಂತೆ ಕೆಲವೆಡೆ ಅಕ್ರಮವಾಗಿ ಚಿಕ್ಕ ಪ್ರಮಾಣದ ಗಣಿಗಾರಿಕೆ ನಡೆದರೆ, ಕೊಡಗು ಮುಂತಾದ ಕಡೆ ಟೀ ಇತ್ಯಾದಿ ವಾಣಿಜ್ಯ ಬೆಳೆಗಳಿಗಾಗಿ ಕೆಲ ಗೋಮಾಳಗಳು ಬಳಕೆಯಾಗುತ್ತಿವೆ. ಇನ್ನೂ ಕೆಲವೆಡೆ ತೋಟಗಾರಿಕೆ ಇಲಾಖೆಯು ತನ್ನ ವಿವಿಧ ಕೃಷಿ ಪ್ರಯೋಗಾಲಯಗಳನ್ನು ಈ ಗೋಮಾಳದ ಜಮೀನುಗಳಲ್ಲಿ ನಿರ್ಮಿಸಿದೆ. ಕೆಲವೆಡೆ ಅನಽಕೃತ ಸ್ಮಶಾನಗಳು ಹುಟ್ಟಿಕೊಂಡಿವೆ. ಇಂಥ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿದ್ದರೆ, ರಾಜ್ಯದಲ್ಲಿ ಭೂ ಕಂದಾಯ 1964ಕ್ಕೆ ತಿದ್ದುಪಡಿ ತಂದು ‘192 ಎ’ ಅನ್ವಯ ಒತ್ತುವರಿ ತೆರವುಗೊಳಿಸುವ ಅವಕಾಶವಿದ್ದರೂ, ಕಂದಾಯ ಇಲಾಖೆ ಗಡzಗಿ ಹೊದ್ದು ಮಲಗಿದೆ.
ಅರಣ್ಯ ಇಲಾಖೆಯಲ್ಲಿ ಕಾಡಿನಂಚಿನ ಒತ್ತುವರಿಯಾದ ಭೂಮಿಯನ್ನು ಮರಳಿ ಪಡೆಯುವ ಕಠಿಣ ಕಾನೂನು ಇರುವಂತೆ ಗೋಮಾಳ ಭೂಮಿಗೂ ಕಾನೂನು ತರಬೇಕಿದೆ. ಒತ್ತುವರಿಯಾದ ಭೂಮಿಯನ್ನು ಖಡಕ್ಕಾಗಿ ಮರಳಿ ಪಡೆಯಬೇಕು ಅಥವಾ ಅದರಷ್ಟೇ ಅಳತೆಯ ಗೋಮಾಳಕ್ಕೆ ಅದೇ ಊರಿನ ಮತ್ತೊಂದು ಭಾಗದಲ್ಲಿ ಪರ್ಯಾಯ ವಾಗಿ ರೆವಿನ್ಯೂ ಜಾಗವನ್ನು ಪಡೆಯುವಂಥ ಕಾಯ್ದೆಗಳನ್ನು ಕೂಡಲೇ ಜಾರಿಗೆ ತರುವ ಅಗತ್ಯವಿದೆ.
ಇನ್ನು, ದಕ್ಷಿಣ ಕನ್ನಡ ಜಿಯು 13214 ಎಕರೆಯಷ್ಟು ಗೋಮಾಳ ಹೊಂದಿದ್ದರೆ, ಉತ್ತರ ಕನ್ನಡ ಜಿಲ್ಲೆಯು ಸುಮಾರು 110 ಎಕರೆ ಗೋಮಾಳ ಹೊಂದಿದೆ. ಉಡುಪಿ ಜಿಲ್ಲೆಯೊಂದರ 155 ಗ್ರಾಮ ಪಂಚಾಯ್ತಿಗಳಲ್ಲಿ 3511 ಎಕರೆ ಗೋ ಮಾಳ ಜಾಗವಿದ್ದು, ಇದನ್ನು ಸರಕಾರ ಪೂರ್ಣಪ್ರಮಾಣದಲ್ಲಿ ಮೀಸಲಿಟ್ಟು ಗೋವುಗಳ ರಕ್ಷಣೆಗಾಗಿ, ಪಾಲನೆಗಾಗಿ ನೀಡಬೇಕು.
ಪ್ರಸ್ತುತ ದೇಶಿ ತಳಿಯ ಗೋವುಗಳು ತುಂಬಾ ವಿರಳ. ಕೆಲ ಗೋಶಾಲೆಯವರು ದೂರದ ಆಫ್ಘಾನ್, ಗುಜರಾತಿನ ಗಿರ್ ತಳಿ, ಜರ್ಸಿಯಂಥ ವಿದೇಶಿ ತಳಿಗಳನ್ನು ಸಾಕಲು ತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಅಳಿವಿನಂಚಿನಲ್ಲಿರುವ ದೇಶಿ ಗೋವುಗಳ ಉಳಿವಿಗಾಗಿ ಪರಭಾರೆ ಆದ ಗೋಮಾಳ ಭೂಮಿಯ ರಕ್ಷಣೆಗಾಗಿ ಸ್ಥಳೀಯರ ಹೋರಾಟದ ಪ್ರಯತ್ನ ಕರಾವಳಿಯಲ್ಲಿ ಶುರುವಾಗಿದೆ. ಇದಕ್ಕೆ ಕಾರಣ, ಇತ್ತೀಚಿನ ವರ್ಷಗಳಲ್ಲಿ ದೇಸಿ ಗೋವುಗಳ ಸಂಖ್ಯೆ ವಿರಳವಾಗಿದೆ. ದೊಡ್ಡಮಟ್ಟದಲ್ಲಿ ಉದ್ಯಮವಾಗಿ ವಿದೇಶಿ ಗೋವುಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ.
ಹಿಂದೆ ಗ್ರಾಮಗಳಲ್ಲಿ ಗೋವುಗಳಿಗೆ ಗೋಮಾಳದ ಜಾಗದಲ್ಲಿ ಹುಲ್ಲು ಯಥೇಚ್ಛ ಸಿಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಗೋಮಾಳ ಜಾಗಗಳು ಪರಭಾರೆ ಆಗುತ್ತಿವೆ. ಕೆಲ ಗ್ರಾಮಗಳಲ್ಲಿ ಗೋಮಾಳದ ಜಾಗ ಬೇರೆಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಹೀಗಾಗಿ, ಗೋಮಾಳ ಜಾಗವನ್ನು ಊರಿನಲ್ಲಿ ಗೋ ಸಾಕಣೆ ಮಾಡುವವರಿಗೆ,
ಗೋಶಾಲೆಗಳಿಗೆ ನೀಡಬೇಕು ಎಂಬುದು ಸ್ಥಳೀಯರ, ಹೋರಾಟಗಾರರ ಆಗ್ರಹವಾಗಿದೆ. ಇದಕ್ಕೆ ದನಿಗೂಡಿಸಿರುವ ಪೇಜಾವರ ಶ್ರೀಗಳು, ‘ಗೋಭಕ್ಷಕರಾಗಿದ್ದ ಕ್ರೂರ ಬ್ರಿಟಿಷರ ಕಾಲದಲ್ಲೂ ಗೋಮಾಳ ಜಾಗ ಗೋಮಾಳವಾಗಿಯೇ ಉಳಿದಿತ್ತು.
ಆದ್ರೆ, ಸ್ವಾತಂತ್ರ್ಯಾ ನಂತರದಲ್ಲಿ ನಮ್ಮವರಿಂದಲೇ ಗೋಮಾಳ ಜಮೀನುಗಳು ಬೇರೆ ಬೇರೆ ಉದ್ದೇಶಕ್ಕೆ ಬಳಕೆಯಾಗು
ತ್ತಿರುವುದೇಕೆ?‘ ಎಂದು ಸರಕಾರವನ್ನು ಪ್ರಶ್ನಿಸಿದ್ದಾರೆ. ಕೊರೋನಾ ಸಂಕಷ್ಟದ ಕಾಲದಲ್ಲಿ, ಉದ್ಯೋಗ ಕಳೆದು ಕೊಂಡು ಕಂಗಾಲಾಗಿದ್ದ ಅದೆಷ್ಟೋ ಯುವಕರು ಲಾಕ್‌ಡೌನ್ ಬಳಿಕ ಉದ್ಯೋಗ ಹುಡುಕದೇ ಸ್ವಯಂ ಗಳಿಕೆಯ ಮಾರ್ಗಕ್ಕಾಗಿ ತಮ್ಮ ತಮ್ಮ ಊರು ಸೇರಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಥವರಿಗೂ ಈಗ ಮೇವಿನ ಸಮಸ್ಯೆ ದೊಡ್ಡದಾಗಿ ಕಾಡುತ್ತಿದೆ.
ಇದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಅಕ್ರಮ ಬಳಕೆಯನ್ನು ತೆರವುಗೊಳಿಸಿ, ಕನಿಷ್ಠಪಕ್ಷ ಗೋಮಾಳವನ್ನಾದರೂ ನಮ್ಮ ಯುವಕರಿಗೆ, ಗೋಪಾಲನೆ ಮಾಡಬಯಸುವವರಿಗೆ ನೀಡಿದರೆ ಅಥವಾ
ಇಲಾಖಾ ವತಿಯಿಂದ ಮೇವು ಬೆಳೆಯಲು ಸೂಕ್ತ ಸೌಲಭ್ಯ, ಅನುದಾನದ ವ್ಯವಸ್ಥೆ ಮಾಡಿದರೆ ಅವರ ಜೀವನಕ್ಕೂ ಆಧಾರವಾದೀತು. ಉದ್ಯೋಗದ ಸಮಸ್ಯೆ ಕೆಲ ಮಟ್ಟಿಗಾದರೂ ನೀಗಿ, ಇತರರಿಗೆ ಉದ್ಯೋಗ ನೀಡಲು ಸಹಕಾರವೂ ಆದೀತು. ಆತ್ಮಸಾಕ್ಷಿ ಅರಿತು, ಸರಕಾರದ ಯೋಜನೆಗಳನ್ನು ನಿಯತ್ತಾಗಿ ಜಾರಿಗೊಳಿಸುವ ಛಾತಿ ಸಂಬಂಽಸಿದ ಆಽಕಾರಿಗಳಲ್ಲಿರಬೇ ಕಾದುದು ಅತ್ಯಗತ್ಯವೆಂಬುದನ್ನು ಇವರೆಲ್ಲ ಅರಿತರೆ ಸಾಕು.