-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈದ್ ಮಿಲಾದ್ ಹಬ್ಬದ (Eid Milad Festival) ಸಂಭ್ರಮಕ್ಕೆ ವೈವಿಧ್ಯಮಯ ಡಿಸೈನರ್ ಗ್ರ್ಯಾಂಡ್ ಎಥ್ನಿಕ್‌ವೇರ್‌ಗಳು ಆಗಮಿಸಿವೆ. ಈ ಬಾರಿಯ ಹಬ್ಬದ ಸೀಸನ್‌ನಲ್ಲಿ (Eid Fashion 2024) ಮಾನಿನಿಯರ ಸಂಭ್ರಮಕ್ಕೆ ಸಾಥ್ ನೀಡಲು ನಾನಾ ಬಗೆಯ ಎಥ್ನಿಕ್‌ವೇರ್‌ಗಳು (Ethnic Wears) ಕಾಲಿಟ್ಟಿದ್ದು, ಅವುಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಡಿಸೈನರ್‌ವೇರ್‌ಗಳ (Designer Wears) ಡಿಟೇಲ್ಸ್ ಇಲ್ಲಿದೆ.
“ಪ್ರತಿಬಾರಿಯಂತೆ ಈ ಬಾರಿಯು ಈದ್ ಮಿಲಾದ್ ಹಬ್ಬದ ಸಂಭ್ರಮ ಹೆಚ್ಚಾಗಿದೆ. ಈ ಹಬ್ಬದ ಸೀಸನ್ ಗ್ರ್ಯಾಂಡ್ ಉಡುಪುಗಳನ್ನು ಕೊಳ್ಳಲು ಬಯಸುವ ಫ್ಯಾಷನ್ ಪ್ರಿಯರಿಗೆ ಹೇಳಿ ಮಾಡಿಸಿದ ಕಾಲ. ಹಬ್ಬ ಆಚರಿಸುವ ಸಮುದಾಯದವರಾಗಲಿ ಅಥವಾ ಇನ್ಯಾರೇ ಆಗಲಿ, ಹೊಸ ವಿನ್ಯಾಸದ ತೀರಾ ಗ್ರ್ಯಾಂಡ್ ಲುಕ್ ನೀಡುವ ಉಡುಗೆಗಳನ್ನು ಖರೀದಿಸಬೇಕೆಂದಿದ್ದಲ್ಲಿ, ಈ ಸೀಸನ್‌ನಲ್ಲಿ ಖರೀದಿಸುವುದು ಉತ್ತಮ. ಯಾಕೆಂದರೇ, ಅತಿ ಹೆಚ್ಚು ವಿನ್ಯಾಸ ಹಾಗೂ ಜಗಮಗಿಸುವ ಎಥ್ನಿಕ್‌ವೇರ್‌ಗಳು ಈ ಸೀಸನ್‌ನಲ್ಲಿ ದೊರೆಯುತ್ತವೆ”ಎನ್ನುತ್ತಾರೆ ಕಮರ್ಷಿಯಲ್ ಸ್ಟ್ರೀಟ್‌ನ ಎಥ್ನಿಕ್‌ವೇರ್ ಶಾಪ್‌ನ ಮ್ಯಾನೇಜರ್.
ಟ್ರೆಂಡಿಯಾಗಿರುವ ಗ್ರ್ಯಾಂಡ್ ಎಥ್ನಿಕ್‌ವೇರ್‌ಗಳಿವು
ರೇಷ್ಮೆಯ ಅನಾರ್ಕಲಿ, ಡಿಸೈನರ್ ಮಿರರ್ ಅನಾರ್ಕಲಿ, ಅಂಬ್ರೆಲ್ಲಾ ಫ್ಲೇರ್ ಅನಾರ್ಕಲಿ, ಕುರ್ತಾ ಸೆಟ್ ಶರಾರ, ಹ್ಯಾಂಡ್ ವರ್ಕ್ ಗ್ರ್ಯಾಂಡ್ ಶರಾರ ಸೆಟ್, ಬಾರ್ಡರ್ ಶರಾರ , ಸಿಕ್ವಿನ್ ಶರಾರ, ಶರಾರ –ಘರಾರ, ಡಿಸೈನರ್ ಘರಾರ, ಘರಾರ ಲೆಹೆಂಗಾ, ಶೈನಿಂಗ್ ಲೆಹೆಂಗಾ, ನೆಟ್ ಲೆಹೆಂಗಾ, ಶಿಮ್ಮರ್ ಡಿಸೈನರ್ ಲೆಹೆಂಗಾ, ಲೆಹೆಂಗಾ ಕಮ್ ಘರಾರ, ಎಂಬ್ರಾಯ್ಡರಿ ಲೆಹೆಂಗಾ, ಗೋಲ್ಡನ್-ಸಿಲ್ವರ್ ಡಿಸೈನರ್ ಲೆಹೆಂಗಾ, ಸಾಟಿನ್ ಶೈನಿಂಗ್ ಲೆಹೆಂಗಾ, ಬನಾರಸಿ ಲೆಹೆಂಗಾ, ಬುಟ್ಟಾ ಡಿಸೈನರ್ ಲೆಹೆಂಗಾ, ತ್ರೀ ಪೀಸ್ ಘರಾರ, ತ್ರೀ ಪೀಸ್ ಸಲ್ವಾರ್, ಚೂಡಿದಾರ್ ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಗ್ರ್ಯಾಂಡ್ ಎಥ್ನಿಕ್‌ವೇರ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ ಎನ್ನುತ್ತಾರೆ ಡಿಸೈನರ್ ರಾಶಿ ಹಾಗೂ ಮೇಘಾ.
ಈ ಸುದ್ದಿಯನ್ನೂ ಓದಿ | Star Fashion: ಅಮೆರಿಕದಲ್ಲಿ ಸ್ಯಾಂಡಲ್‌ವುಡ್ ನಟಿ ಸಾನ್ಯಾ ಅಯ್ಯರ್ ಹೈ ಸ್ಟ್ರೀಟ್ ಫ್ಯಾಷನ್!
ಗ್ರ್ಯಾಂಡ್ ರೆಡಿ ಎಥ್ನಿಕ್‌ವೇರ್ ಖರೀದಿಸಲು ಸಿಂಪಲ್ ಟಿಪ್ಸ್
ಕೆಲವೆಡೆ ಫ್ಯಾಬ್ರಿಕನ್ನು ಕೆಲವೇ ಗಂಟೆಗಳಲ್ಲಿ ಸ್ಟಿಚ್ ಮಾಡಿಕೊಡುವ ವ್ಯವಸ್ಥೆ ಇರುತ್ತದೆ. ಅಂತಹ ಕಡೆ ಕೊಂಡು, ಹೊಲೆಸಿ.
ರೆಡಿಮೇಡ್ ಗ್ರ್ಯಾಂಡ್ ಎಥ್ನಿಕ್‌ವೇರ್ ಕೊಳ್ಳುವಾಗ ಟ್ರಯಲ್ ನೋಡಲು ಮರೆಯದಿರಿ.
ಟ್ರೆಂಡಿಯಾಗಿರುವ ಡಿಸೈನ್ ಮರುಬಳಕೆ ಮಾಡಬಹುದೇ ಎಂಬುದನ್ನು ಯೋಚಿಸಿ ಕೊಳ್ಳಿ.
ಗೋಲ್ಡ್ ಹಾಗೂ ಸಿಲ್ವರ್ ಶೇಡ್ ಎಥ್ನಿಕ್‌ವೇರ್ಸ್ ಗ್ರ್ಯಾಂಡ್ ಲುಕ್ ನೀಡುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
(ಲೇಖಕಿ, ಫ್ಯಾಷನ್ ಪತ್ರಕರ್ತೆ)