Thursday, 12th December 2024

Star Fashion: ಅಮೆರಿಕದಲ್ಲಿ ಸ್ಯಾಂಡಲ್‌ವುಡ್‌ ನಟಿ ಸಾನ್ಯಾ ಅಯ್ಯರ್‌ ಹೈ ಸ್ಟ್ರೀಟ್‌ ಫ್ಯಾಷನ್‌!

Star Fashion

| ಶೀಲಾ ಸಿ. ಶೆಟ್ಟಿ, ಬೆಂಗಳೂರು

ವಿಂಟೇಜ್‌ ಚೆಕ್ಸ್ ಕೋ ಆರ್ಡ್ ಸೆಟ್‌ನಲ್ಲಿ ಅಮೆರಿಕದ (America) ಹೈ ಸ್ಟ್ರೀಟ್‌ ಫ್ಯಾಷನ್‌ನಲ್ಲಿ ಸ್ಯಾಂಡಲ್‌ವುಡ್‌ ನಟಿ ಸಾನ್ಯಾ ಅಯ್ಯರ್‌ (Sanya Iyer) ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಸಾನ್ಯಾ ಅಯ್ಯರ್‌ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಫ್ಯಾಷೆನಬಲ್‌ (Star Fashion) ಆಗಿ ಕಾಣಿಸಿಕೊಳ್ಳುವ ಯುವ ನಟಿಯಲ್ಲೊಬ್ಬರು. ಅದರಲ್ಲೂ ಸೀಸನ್‌ಗೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ ಸಮಯೋಚಿತವಾಗಿ ಕಾಣಿಸಿಕೊಳ್ಳುವ ಇವರು, ಇತ್ತೀಚೆಗೆ ಗೌರಿ ಸಿನಿಮಾದ ಮೂಲಕ ಡೆಬ್ಯೂ ಮಾಡಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಇನ್ನು, ಇದಕ್ಕೂ ಮೊದಲೇ ʼಪುಟ್ಟ ಗೌರಿʼ ಧಾರಾವಾಹಿ ಮೂಲಕ ಹೆಸರು ಮಾಡಿದವರು.

ಚಿತ್ರಗಳು: ಸಾನ್ಯಾ ಅಯ್ಯರ್‌, ಸ್ಯಾಂಡಲ್‌ವುಡ್‌ ನಟಿ

ನಟಿ ಸಾನ್ಯಾ ಅಯ್ಯರ್‌ ಅವರು ಇವೆಲ್ಲದರ ಮಧ್ಯೆ ಆಗಾಗ್ಗೆ ರ‍್ಯಾಂಪ್‌ನಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಜನರೇಷನ್‌ ಹುಡುಗಿಯಾದ ಇವರು ಗ್ಲಾಮರಸ್‌ ಲುಕ್‌ಗೂ ಸೈ! ಗೌರಮ್ಮನಂತಹ ಸ್ಟೈಲ್‌ಗೂ ಸೈ ಎನ್ನುವ ನಟಿ ಎಂದರೂ ಅತಿಶಯೋಕ್ತಿಯಾಗದು.

ಈ ಸುದ್ದಿಯನ್ನೂ ಓದಿ | HMD Phones : ಹೆಚ್‌ಎಂಡಿ 105 4ಜಿ, ಹೆಚ್‌ಎಂಡಿ 110 4ಜಿ ಫೋನ್ ಗಳನ್ನುಬಿಡುಗಡೆ ಮಾಡಿದ ಹೆಚ್‌ಎಂಡಿ

ಅಮೆರಿಕದಲ್ಲಿ ಹೈ ಸ್ಟ್ರೀಟ್‌ ಫ್ಯಾಷನ್‌

ಅಮೆರಿಕದಲ್ಲಿ ನಡೆದ ಅಕ್ಕ ಸಮ್ಮೆಳನದ ನಂತರ ಸುತ್ತಮುತ್ತಲ ಟೂರಿಸ್ಟ್ ಸ್ಪಾಟ್‌ಗಳನ್ನು ತಾಯಿಯೊಂದಿಗೆ ನೋಡುವುದರಲ್ಲಿ ಬ್ಯುಸಿಯಾಗಿರುವ ಸಾನ್ಯಾ ಅಯ್ಯರ್‌, ಅಮೆರಿಕಾದ ಹೈ ಸ್ಟ್ರೀಟ್‌ಗಳಿಗೆ ತಕ್ಕಂತೆ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಕ್ರಿಯೇಷನ್‌ನ ವೆಸ್ಟರ್ನ್‌ ಲುಕ್‌ ನೀಡುವ ವಿಂಟೇಜ್‌ ಚೆಕ್ಸ್ ಕೋ ಆರ್ಡ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಾಮರಸ್‌ ಆಗಿ ಕಾಣಿಸಿಕೊಂಡಿರುವ ಅವರು ಅಭಿಮಾನಿಗಳನ್ನು ಸೆಳೆದಿದ್ದಾರೆ.

ಸಾನ್ಯಾ ಡಿಸೈನರ್‌ ಲಕ್ಷ್ಮಿ ಕೃಷ್ಣ ಹೇಳುವುದೇನು?

ಅಮೆರಿಕದ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳು ಇಲ್ಲಿಗಿಂತ ಕೊಂಚ ವಿಭಿನ್ನ ಹಾಗೂ ಕಂಪ್ಲೀಟ್‌ ವೆಸ್ಟರ್ನ್‌ ಕಾನ್ಸೆಪ್ಟ್ ಹೊಂದಿರುತ್ತವೆ. ಅದಕ್ಕೆ ತಕ್ಕಂತೆ ಈ ಡಿಸೈನರ್‌ವೇರ್‌ ರೂಪಿಸಿದ್ದೇವೆ. ಇದು ಸಾನ್ಯಾ ಅವರಿಗೆ ಕಂಪ್ಲೀಟ್‌ ವೆಸ್ಟರ್ನ್‌ ಲುಕ್‌ ನೀಡುವುದರೊಂದಿಗೆ ಹಾಲಿವುಡ್‌ ಲೆವೆಲ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ ಕಲ್ಪಿಸಿದೆ ಎನ್ನುತ್ತಾರೆ ಈ ಡಿಸೈನರ್‌ವೇರ್‌ ವಿನ್ಯಾಸಗೊಳಿಸಿರುವ ಲಕ್ಷ್ಮಿ ಕೃಷ್ಣ ಅವರು.

ಈ ಸುದ್ದಿಯನ್ನೂ ಓದಿ | IPL 2025: ತಿಂಗಳಾಂತ್ಯದಲ್ಲಿ ಐಪಿಎಲ್​ ರಿಟೇನ್​ ನಿಯಮಾವಳಿ ಪ್ರಕಟ

ಹೈ ಸ್ಟ್ರೀಟ್‌ ಫ್ಯಾಷನ್‌ ಲವ್‌

ಅಮೆರಿಕದ ಹೈ ಸ್ಟ್ರೀಟ್‌ ಫ್ಯಾಷನ್‌ನಲ್ಲಿ ಈ ವಿಂಟೇಜ್‌ ಚೆಕ್ಸ್ ಕೋ ಆರ್ಡ್ಸ್ ಧರಿಸಿರುವುದು ಕಂಪ್ಲೀಟ್‌ ವೆಸ್ಟರ್ನ್‌ ಔಟ್‌ಫಿಟ್‌ ಕಾನ್ಸೆಪ್ಟ್‌ಗೆ ಮ್ಯಾಚ್‌ ಆಗಿದೆ ಎಂಬುದರ ಬಗ್ಗೆ ಒಲವು ವ್ಯಕ್ತಪಡಿಸಿರುವ ಸಾನ್ಯಾ ಅವರಿಗೆ ಈ ಸ್ಟೈಲ್‌ ಸ್ಟೇಟ್‌ಮೆಂಟ್‌ ಪ್ರಯೋಗ ಮಾಡಲು ಅವಕಾಶ ದೊರೆತಿರುವುದು ಖುಷಿ ತಂದಿದೆಯಂತೆ.

(ಲೇಖಕಿ, ಫ್ಯಾಷನ್‌ ಪತ್ರಕರ್ತೆ)