Friday, 22nd November 2024

MLA Munirathna: ಶಾಸಕ ಮುನಿರತ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕ.ದ.ಸ.ಸ ಪೊಲೀಸ್ ಠಾಣೆಗೆ ದೂರು

ಬಾಗೇಪಲ್ಲಿ: ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನಂ ನಾಯ್ಡು ಪರಿಶಿಷ್ಟ ಜಾತಿಗೆ ಸೇರಿದ ಗುತ್ತಿಗೆದಾರ ನೊಬ್ಬನ ಬಳಿ ಅವಹೇಳನಕಾರಿಯಾಗಿ ಜಾತಿಯನ್ನು ನಿಂದಿಸಿ ಮಾತನಾಡಿದ ಪ್ರಕಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಈ ಶಾಸಕನನ್ನು ಬಂಧಿಸಬೇಕು ಹಾಗೂ ಕಾನೂನು ಕ್ರಮ ಕೈಗೊಳ್ಳಲು ಕಿರಣ್ ಕುಮಾರ್ ಆಗ್ರಹಿಸಿದರು.

ಈತನ ವಿರುದ್ಧ ಕೇವಲ ಮೊಕದ್ದಮೆ ದಾಖಲಿಸಿಕೊಂಡರೆ ಸಾಲದು ಕೂಡಲೇ ಬಂಧಿಸಿ ಈತನ ಕಾನೂನು ಬಾಹಿರ ಹಾಗೂ ಅನೈತಿಕ, ಅಕ್ರಮ, ವ್ಯವಹಾರಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿ ದರು.

ಇದನ್ನೂ ಓದಿ: MLA Munirathna: ಕೊಲೆ ಬೆದರಿಕೆ, ಜಾತಿ ನಿಂದನೆ; ಬಿಜೆಪಿ ಶಾಸಕ ಮುನಿರತ್ನ ವಶಕ್ಕೆ

ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಮತ್ತು ಮುನಿರತ್ನ ನಡುವಿನ ಮಾತುಕತೆಯ ಆಡಿಯೋ ವೈರಲ್ ಆದ ಬೆನ್ನಲ್ಲೇ ಮುನಿರತ್ನ ವಿರುದ್ದ ಜೀವ ಬೆದರಿಕೆ ಮತ್ತು ಜಾತಿನಿಂದನೆ ಆರೋದಡಿ ಕೇಸು ದಾಖಲಾಗಿದೆ. ಬೆಂಗಳೂರು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಎಫ್‌ಐಆರ್ (ಈIಖ) ದಾಖಲಿಸಿಕೊಂಡಿದ್ದಾರೆ.

ಶಾಸಕ ಮುನಿರತ್ನ ಅವರು ಎರಡು ಸಮುದಾಯಗಳ ನಿಂದನೆ ಮಾಡಿದ ಆರೋಪ ಎದುರಿಸುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ .ಆದ್ದರಿಂದ ಶಾಸಕ ಮುನಿರತ್ನ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ರಾಜರಾಜೇಶ್ವರಿ ನಗರದ ಬಿ.ಜೆ.ಪಿ ಶಾಸಕ ಮುನಿರತ್ನo ವಿರುದ್ಧ ಅಸ್ಪೃಶ್ಯತೆಯನ್ನು ಜೀವಂತವಾಗಿಟ್ಟು ಹೊಲೆಯರ ಕುರಿತು ಜಾತಿ ನಿಂಧನೆ, ಹೆಣ್ಣು ಮಕ್ಕಳ ಕುರಿತು ಅವಹೇಳನ ಮತ್ತು ಜೀವ ಬೆದರಿಕೆ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಾಗೇಪಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬಾಗೇಪಲ್ಲಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ ಅವರಿಗೆ ದೂರು ನೀಡಿದ್ದಾರೆ.

ಈ ಸಂಧರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರಾದ ಎಸ್.ಎನ್.ನರಸಿಂಹಪ್ಪ, ಗಂಗಾಧರ, ರಾಮoಜಿ, ರಾಜು, ಶ್ರೀನಿವಾಸ್, ರವಿ, ರಾಜು, ಎ.ಪಿ.ವೆಂಕಿ, ಬಾಬು, ಜಯಂತ್, ಸುರೇಶ, ಲಕ್ಷ್ಮೀ ನಾಯ್ಕ, ಲಕ್ಷ್ಮಿ ನರಸಿಂಹಪ್ಪ ಸೇರಿದಂತೆ ಇತರರು ಇದ್ದರು.