ಬೆಂಗಳೂರು: ದಕ್ಷಿಣ ಭಾರತ ಚಿತ್ರರಂಗದಲ್ಲಿ ನೀಡಲಾಗುವ ಪ್ರತಿಷ್ಠಿತ ಸೈಮಾ ಪ್ರಶಸ್ತಿ (SIIMA awards 2024) ಸಮಾರಂಭವು ಶನಿವಾರ ರಾತ್ರಿ ದುಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ದಕ್ಷಿಣ ಭಾರತದ ಸಿನಿಮಾ ಕ್ಷೇತ್ರಗಳಾದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಪ್ರತ್ಯೇಕ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಅಂತೆಯೇ ಸ್ಯಾಂಡಲ್ವುಡ್ ವಿಭಾಗದಲ್ಲಿ ರಕ್ಷಿತ್ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ ಹಾಗೂ ದರ್ಶನ್ ನಟನೆಯ ಕಾಟೇರಾ ಸಿನಿಮಾಗಳು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡವು.
𝗦𝗜𝗜𝗠𝗔 𝟮𝟬𝟮𝟰: Best Actor in a Leading Role (Kannada) award Nominations & Acceptance Speech by @rakshitshetty Full video #SaptaSagaradaacheEllo 🌊 – Side A #RakshitShetty #SSESideA #SIIMA2024 #SIIMAAwards2024 pic.twitter.com/lCPjEysFlI
— Bhargavi (@IamHCB) September 15, 2024
ಸಪ್ತಸಾಗರದಾಚೆ ಎಲ್ಲೋ ಚಿತ್ರದ ತಮ್ಮ ನಟನೆಗಾಗಿ ರಕ್ಷಿತ್ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರು ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿ ಗೆದ್ದುಕೊಂಡರು. ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ ನಟಿಸಿದ್ದ ಚೈತ್ರಾ ಆಚಾರ್ ತಮ್ಮ ಸುರಭಿ ಪಾತ್ರಕ್ಕಾಗಿ ವಿಮರ್ಶಕರ ಅತ್ಯುತ್ತಮ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡರು. ಈ ಚಿತ್ರದ ನಿರ್ದೇಶಕ ಹೇಮಂತ್‌ರಾವ್ ಅತ್ಯುತ್ತಮ ನಿರ್ದೇಶಕ ಹಾಗೂ ರಮೇಶ್ ಇಂದಿರಾ ಹಾಗೂ ಅತ್ಯುತ್ತಮ ಖಳನಟ ಪ್ರಶಸ್ತಿ ಗಳಿಸಿದರು. ಗೀತೆಗಳಿಗಾಗಿ ಕಪಿಲ್ ಅತ್ಯುತ್ತಮ ಗಾಯಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಕಾಟೇರಾ ಗೂ ಮನ್ನಣೆ
ತಮ್ಮ ಮೊದಲ ಚಿತ್ರ ಕಾಟೇರಾ ಅಭಿನಯಕ್ಕಾಗಿ ಆರಾಧಾನಾ ರಾಮ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಸಂಭ್ರಮಿಸಿದರು. ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ. ಪಸಂದಾಗ್ ಅವ್ನೇ ಗೀತೆ ಆಡಿದ ಮಾಂಗ್ಲಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಹಾಗೂ ವಿ.ಹರಿಕೃಷ್ಣ ಅವರು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಈ ಸುದ್ದಿಯನ್ನೂ ಓದಿ: Tamannaah Bhatia: ಮೇಕಪ್ ಇಲ್ಲದೆ ಕಾಣಿಸಿಕೊಂಡ ಮಿಲ್ಕ್ ಬ್ಯೂಟಿ ತಮನ್ನಾ; ಹೇಗಿದ್ದಾರೆ ನೋಡಿ…
ಡಾಲಿಗೆ ಡಬಲ್ ಧಮಾಕ
ಅಂತಾರ್ಜಾತಿ ವಿವಾಹವನ್ನು ಕೇಂದ್ರಬಿಂದುವಾಗಿಸಿಕೊಂಡು ನಿರ್ಮಾಣಗೊಂಡಿದ್ದ ಗುರುದೇವ್ ಹೊಯ್ಸಳ ಸಿನಿಮಾದ ನಟನೆಗಾಗಿ ಡಾಲಿ ಧನಂಜಯ್ಗೆ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದ್ದರೆ, ತಾವೇ ನಿರ್ಮಿಸಿದ್ದ ಟಗರುಪಲ್ಯ ಚಿತ್ರದ ಗೀತೆಗಾಗಿ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ಅಲಂಕರಿಸಿದ್ದಾರೆ.
ಪ್ರಶಸ್ತಿಗಳ ವಿವರ:
ಡಾ.ಶಿವರಾಜ್‌ಕುಮಾರ್- ವಿಶೇಷ ಪ್ರಶಸ್ತಿ
ವೃಷಾ ಪಾಟೀಲ್- ಅತ್ಯುತ್ತಮ ಭರವಸೆಯ ನಟಿ- ಲವ್ ಸಿನಿಮಾ
ಶ್ವೇತಪ್ರಿಯ- ಛಾಯಾಗ್ರಹಣ- ಕೈವ
ಅನಿರುದ್್ಧ ಆಚಾರ್- ಅತ್ಯುತ್ತಮ ಹಾಸ್ಯನಟ- ಆಚಾರ್ ಆ್ಯಂಡ್ ಕೋ
ಪ್ರಶಸ್ರಿ ವಿವರಗಳು
ಅತ್ಯುತ್ತಮ ನಟ- ನಾನಿ (ದಸರಾ)
ಅತ್ಯುತ್ತಮ ನಟಿ- ಕೀರ್ತಿ ಸುರೇಶ್ (ದಸರಾ)
ಅತ್ಯುತ್ತಮ ನಟ (ಕ್ರಿಟಿಕ್)- ಆನಂದ್ ದೇವರಕೊಂಡ (ಬೇಬಿ)
ಅತ್ಯುತ್ತಮ ನಟಿ (ಕ್ರಿಟಿಕ್)- ಮೃಣಾಲ್ ಠಾಕೂರ್ (ಹಾಯ್ ನಾನ್ನ)
ಅತ್ಯುತ್ತಮ ನಿರ್ದೇಶಕ- ಶ್ರೀಕಾಂತ ಒಡೆಲಾ (ದಸರಾ)
ಅತ್ಯುತ್ತಮ ನಿರ್ದೇಶಕ (ಕ್ರಿಟಿಕ್ಸ್)- ಸಾಯಿ ರಾಜೇಶ್ (ಬೇಬಿ)
ಅತ್ಯುತ್ತಮ ವಿಲನ್- ದುನಿಯಾ ವಿಜಯ್ (ಭಗವಂತ ಕೇಸರಿ)
ಅತ್ಯುತ್ತಮ ಗಾಯಕ- ರಾಮ್ ಮಿರಿಯಾಲ (ಬಲಗಂ)
ಅತ್ಯುತ್ತಮ ಪೋಷಕ ನಟ- ದೀಕ್ಷಿತ್ ಶೆಟ್ಟಿ (ದಸರಾ)
ಅತ್ಯುತ್ತಮ ಪೋಷಕ ನಟಿ- ಕಿಯಾರಾ ಖನ್ನಾ (ಹೈ ನಾನ್ನ)
ಅತ್ಯುತ್ತಮ ಹೊಸ ನಿರ್ದೇಶಕ- ಶೌರ್ಯ (ಹೈ ನಾನ್ನ)
ಅತ್ಯುತ್ತಮ ಹೊಸ ನಟ- ಸಂಗೀತ್ (ಮ್ಯಾಡ್)
ಅತ್ಯುತ್ತಮ ಭರವಸೆಯ ನಟ- ಸುಮಂತ್ ಪ್ರಭಾಸ್ (ಮೇಮು ಫೇಮಸ್)
ಇದನ್ನೂ ಓದಿ: ಸೈಮಾನಲ್ಲಿ ಪ್ರಶಸ್ತಿಗಳ ಬಾಚಿದ ‘ಸಪ್ತ ಸಾಗರದಾಚೆ ಎಲ್ಲೋ’, ಇಲ್ಲಿದೆ ಪಟ್ಟಿ
ಅತ್ಯುತ್ತಮ ಹೊಸ ನಟಿ- ವೈಷ್ಣವಿ (ಬೇಬಿ)
ಅತ್ಯುತ್ತಮ ಸಂಗೀತ ನಿರ್ದೇಶಕ- ಹೇಷಮ್ ಅದ್ಬುಲ್ ವಹಾಬ್ (ಹೈ ನಾನ್ನ)
ಅತ್ಯುತ್ತಮ ತೆಲುಗು ಸಿನಿಮಾ- ಭಗವಂತ ಕೇಸರಿ
ಅತ್ಯುತ್ತಮ ಸಾಹಿತ್ಯ- ಅನಂತ್ (ಬೇಬಿ)
ಅತ್ಯುತ್ತಮ ಸಿನಿಮಾಟೊಗ್ರಫರ್- ಭುವನ್ ಗೌಡ (ಸಲಾರ್)
ಅತ್ಯುತ್ತಮ ಹಾಸ್ಯನಟ- ವಿಷ್ಣು (ಮ್ಯಾಡ್)
ವರ್ಷದ ಅತ್ಯುತ್ತಮ ನಿರ್ಮಾಪಕ- ವಿವೈಆರ್ಎ ಎಂಟರ್ಟೈನರ್ಸ್
ಎಂಟರ್ಟೈನರ್ ಆಫ್ ದಿ ಇಯರ್- ಶ್ರುತಿ ಹಾಸನ್