ವಿಶ್ವವಾಣಿ ಸಂದರ್ಶನ: ದೇವೇಂದ್ರ ಜಾಡಿ
ಸಂಪುಟದಲ್ಲಿ ಕಲ್ಯಾಣ ಕರ್ನಾಟಕದ ವಿಷಯಗಳ ಬಗ್ಗೆ ಚರ್ಚೆ
ಹೊಸ ಕೈಗಾರಿಕಾ ನೀತಿ ಬಗ್ಗೆ ವಿಶ್ಲೇಷಣೆ, ಹೊಸ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣ
ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ, ನೀರಾವರಿ, ಮೂಲ ಸೌಕರ್ಯಗಳಿಗೆ ಆದ್ಯತೆ
ಖಾಲಿ ಹುದ್ದೆಗಳ ಭರ್ತಿಗೆ ಕ್ರಮ, ಕೆಕೆಆರ್ಡಿಬಿಗೆ ಪ್ರತ್ಯೇಕ ಸಚಿವಾಲಯ ಬಂದರೆ ಸಹಕಾರಿ: ಡಾ.ಅಜಯ್ ಸಿಂಗ್
ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramayya) ಅವರ ನೇತೃತ್ವದ ಕಾಂಗ್ರೆಸ್ ಸರಕಾರ (Congress Government) ಈಗಾಗಲೇ ಐದು ಗ್ಯಾರಂಟಿ(Five Guarantee) ಗಳನ್ನು ನೀಡುವ ಮೂಲಕ ನುಡಿದಂತೆ ನಡೆದಿದೆ. ತೀರಾ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕ(Kalyana Karnataka) ದಲ್ಲಿ ಆಡಳಿತಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಈ ಬಾರಿ ಸಚಿವ ಸಂಪುಟ ಸಭೆ ಕಲಬುರಗಿಯಲ್ಲಿಯೇ ನಡೆಸಲಾಗುತ್ತಿದೆ. ಈ ಭಾಗದ ಸಮಗ್ರ ಪ್ರಗತಿಗೆ ಕಾಂಗ್ರೆಸ್ ಸರಕಾರ ಬದ್ಧವಾಗಿದೆ.
ಈಗಾಗಲೇ, ಈ ಭಾಗದ ಏಳು ಜಿಲ್ಲೆಗಳ 41 ಕ್ಷೇತ್ರಗಳಲ್ಲಿ ಶೈಕ್ಷಣಿಕ ಹಾಗೂ ಆರೋಗ್ಯ, ಉದ್ಯೋಗ, ಕೃಷಿ, ನೀರಾವರಿ ಯ ಸುಧಾರಣೆ ಜತೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಅದಕ್ಕಾಗಿ ಕೆಕೆಆರ್ಡಿಬಿಯ ಸಂಪೂರ್ಣ ಅನುದಾನವನ್ನು ಸಮರ್ಪಕವಾಗಿ ಬಳಸಲಾಗುತ್ತಿದ್ದು, ಐದು ಸಾವಿರ ಕೋಟಿ ರು. ಗಳ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್(Dr Ajay Singh) ‘ವಿಶ್ವವಾಣಿ’ ಯೊಂದಿಗಿನ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.
ಇದನ್ನೂ ಓದಿ: ಫೆ.12ರಂದು ಬಾದಾಮಿಗೆ ಡಿಸಿಎಂ ಕಾರಜೋಳ, ಸಚಿವ ಶ್ರೀರಾಮುಲು ಭೇಟಿ
ಇದೆ ಸೆ.೧೭ರಂದು ಕಲ್ಯಾಣ ಕರ್ನಾಟಕದ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಂದೇ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ನಡೆಯುತ್ತಿದ್ದು, ಈ ಭಾಗದ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರಸ್ತಾಪ ಸಲ್ಲಿಸುತ್ತೇವೆ. ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಲಿದೆ ಎಂದು ಸಂದರ್ಶನದಲ್ಲಿ ಹಂಚಿಕೊಂಡರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಬಹುದಿನಗಳ ಬೇಡಿಕೆಯಾದ ಪ್ರತ್ಯೇಕ ಸಚಿವಾಲಯ ಸ್ಥಾಪನೆಯ ಬಗ್ಗೆ ಸಚಿವ ಸಂಪುಟದಲ್ಲಿ ಪ್ರಸ್ತಾಪಿಸುವಿರಾ?
ಇತಿಹಾಸದ ಇದೇ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕ ಉತ್ಸವ ದಿನದಂದೇ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಅತಿ ಹಿಂದುಳಿದ ಪ್ರದೇಶವಾಗಿರುವ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಯ ಕುರಿತು ಮುಖ್ಯ ಮಂತ್ರಿಗಳ ಗಮನಕ್ಕೆ ತರುತ್ತೇವೆ. ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆಯುತ್ತವೆ. ಸಚಿವಾಲಯ ಇಲ್ಲದಿ ರುವುದರಿಂದ ಅನೇಕ ಕಾಮಗಾರಿಗಳಿಗೆ ಹಿನ್ನಡೆಯಾಗುತ್ತಿವೆ. ಈ ಭಾಗದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯದ ಅವಶ್ಯವಾಗಿದೆ. ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪನೆಗೊಂಡರೆ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿದೆ. ಈ ಕುರಿತು ಸಂಪುಟದಲ್ಲಿ ಚರ್ಚಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು.
ಕಲ್ಯಾಣ ಕರ್ನಾಟಕ ಬೋರ್ಡ್ನ ಅನುದಾನ ಬಳಕೆ ಯಾವ್ಯಾವ ಕ್ಷೇತ್ರದಲ್ಲಿ ಬಳಸಲಾಗುತ್ತಿದೆ?
- ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಕಲಂ ಜಾರಿಗೊಂಡು ಹತ್ತು ವರ್ಷ ಕಳೆದ ಹಿನ್ನೆಲೆಯಲ್ಲಿ ದಶಮಾ ನೋತ್ಸವ ಆಚರಿಸಲಾಗುತ್ತಿದೆ. ಕಳೆದ ಬಾರಿಯ ಅನುದಾನ ಬಳಕೆ ಮಾಡಲಾಗಿದೆ. 5000 ಕೋಟಿ ಬಿಡುಗಡೆ ಆಗಿದೆ. ಈ ವರ್ಷ 5000 ಕೋಟಿ ರು.ಗಳ ಸಂಪೂರ್ಣ ಅನುದಾನದ ಕ್ರಿಯಾಯೋಜನೆ ಸಿದ್ಧವಾಗಿದೆ. ಕಲ್ಯಾಣ ದಲ್ಲಿ ಅಭಿವೃದ್ಧಿಯ ಪರ್ವ ಆಗಲಿದೆ. 41 ಕ್ಷೇತ್ರಗಳಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಅಕ್ಷರ ಆವಿಷ್ಕಾರಕ್ಕಾಗಿ ಶೇ.25% ಅನುದಾನ ಮೀಸಲಿಡಲಾಗಿದೆ. ಆರೋಗ್ಯ ಆವಿಷ್ಕಾರ ಅನುದಾನ ಮೀಸಲಿಟ್ಟು ಈ ಭಾಗದ ಜನರ ಆರೋಗ್ಯ ಸುಧಾರಣೆಗೆ ಬದ್ಧರಾಗಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದ ಬಡಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಡಳಿಯಿಂದ 180 ಕೋಟಿ ರು.ಗಳ ವೆಚ್ಚದಲ್ಲಿ 371 ಹಾಸಿಗೆಗಳ ಜಯದೇವ ಆಸ್ಪತ್ರೆ ನಿರ್ಮಿಸಲಾಗಿದೆ.
- ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮಂಡಳಿಯಿಂದ 500 ಕೋಟಿ ಮೀಸಲಿಡಲಾಗಿದೆ. ಉದ್ಯೋಗ ನೀಡಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಜತೆಗೆ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 90 ಕೋಟಿ, ಹಿಂದುಳಿದ ವರ್ಗಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 75 ಕೋಟಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ 200 ಕೋಟಿ ರು. ಸೇರಿ ಇನ್ನೂ ಅನೇಕ ಯೋಜನೆಗಳು ಮಂಡಳಿಯಿಂದ ರೂಪಿಸಲಾಗುತ್ತಿದೆ.
- ಕಲ್ಯಾಣ ಕರ್ನಾಟಕದ ಹೊಸ ತಾಲೂಕುಗಳಲ್ಲಿ ಮೂಲ ಸೌಕರ್ಯದ ಕೊರತೆ ಇದ್ದು, ಅದನ್ನು ಹೋಗಲಾಡಿಸಲು ಕಲ್ಯಾಣ ಕರ್ನಾಟಕ ಬೋರ್ಡ್ ಕೈಗೊಂಡ ಕಾರ್ಯಗಳು ಯಾವುವು?
- ಈಗಾಗಲೇ, ಕಲ್ಯಾಣ ಕರ್ನಾಟಕದ 18 ಹೊಸ ತಾಲೂಕುಗಳಲ್ಲಿ ನೂತನ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸರಕಾರ ಅನುಮತಿಸಿದೆ. ಕಂದಾಯ ಇಲಾಖೆ ಜತೆಗೆ ಕಲ್ಯಾಣ ಕರ್ನಾಟಕ ಬೋರ್ಡ್ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುವ ಕನಸು ನಮ್ಮದಾಗಿದೆ.
- 15 ಕೋಟಿ ವೆಚ್ಚದಲ್ಲಿ ಒಂದು ವಿಧಾನಸೌಧ ನಿರ್ಮಾಣದ ಗುರಿ ಇದ್ದು, ಅದರಲ್ಲಿ ಕಂದಾಯ ಇಲಾಖೆ ಮತ್ತು ಕೆಕೆಆರ್ಡಿಬಿ 50:50 ಅನುಪಾತದಲ್ಲಿ ಹಣ ನೀಡಲಿವೆ. ಈ ವಿಷಯ ಸಚಿವ ಸಂಪುಟದಲ್ಲಿ ಚರ್ಚಿಸ ಲಾಗುತ್ತದೆ. ಇದಲ್ಲದೇ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯದ ಆರೋಗ್ಯ ಕೇಂದ್ರ, ಎಲ್ಲಾ ತಾಲೂಕಿನಲ್ಲಿ ಆಸ್ಪತ್ರೆ ಗಳ ನಿರ್ಮಾಣ ಜತೆಗೆ 50 ಹಾರ್ಟ್ಲೈನ್ ಆಂಬ್ಯುಲೆನ್ಸ್ ಸೇವೆ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿನ ರಸ್ತೆ ಗಳಲ್ಲಿ ಸುಧಾರಣೆ ಹಾಗೂ ನಿರ್ಮಾಣಕ್ಕಾಗಿ ‘ಕಲ್ಯಾಣಪಥ’ ಯೋಜನೆಗೆ 335 ಕೋಟಿ ಅನುದಾನ ಮೀಸಲು ಇಡಲಾಗಿದೆ.
- ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ, ಕಲ್ಯಾಣಕ್ರಾಂತಿ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾ ರ್ಜುನ ಖರ್ಗೆ ಅವರು ಪಂಚ ಗ್ಯಾರಂಟಿ ಜತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಹತ್ತು ಅಂಶಗಳ ಪ್ರಣಾಳಿಕೆ ಘೋಷಿಸಿದ್ದರು. ಅದು ಪೂರ್ಣ ಪ್ರಮಾಣದಲ್ಲಿ ಇನ್ನೂ ಸಾಕಾರವಾಗಿಲ್ಲ. ಇದರ ಬಗ್ಗೆ ಸಂಪುಟದ ಗಮನಕ್ಕೆ ತರುವಿರಾ..?
- ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ ಪಂಚ ಗ್ಯಾರಂಟಿಗಳನ್ನು ನೀಡುವ ಮೂಲಕ ರಾಜ್ಯ ಸರಕಾರ ನುಡಿ ದಂತೆ ನಡೆದಿದೆ. ಅದೇ ರೀತಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಪ್ರತ್ಯೇಕ ಹತ್ತು ಅಂಶಗಳ ಪ್ರಣಾಳಿಕೆ ಯಲ್ಲಿ ಈಗಾಗಲೇ ಒಂದಾದಾಗಿ ಭರವಸೆಗಳನ್ನು ಈಡೇರಿಸುತ್ತಾ ಬಂದಿದ್ದೇವೆ. ಅದರಲ್ಲಿ ಕಲ್ಯಾಣ ಕರ್ನಾಟಕ ಬೋರ್ಡ್ಗೆ ಐದು ಸಾವಿರ ಕೋಟಿ ರು. ಅನುದಾನ, ಶಿಕ್ಷಕರ ಭರ್ತಿ, ಹುದ್ದೆಗಳ ನೇಮಕ ಹಾಗೂ ಮುಂಬಡ್ತಿ ಸೇರಿ ಕೆಲವು ಈಡೇರಿವೆ. ಇನ್ನುಳಿದ ಬೇಡಿಕೆಗಳನ್ನು ಆದಷ್ಟೂ ಬೇಗ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
- ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವುದೇ ದೊಡ್ಡ ಕೈಗಾರಿಕಾ ಯೋಜನೆಗಳು ಜಾರಿಯಾಗಿಲ್ಲ.
ಇಲ್ಲಿನ ಉದ್ಯಮಿಗಳು ಪ್ರತ್ಯೇಕ ಕಲ್ಯಾಣ ಕರ್ನಾಟಕ ಕೈಗಾರಿಕಾ ನೀತಿ ಜಾರಿಗೆ ತರಬೇತಿ ಎನ್ನುವ ಬೇಡಿಕೆ ಸರಕಾರದ ಮುಂದೆ ಇಟ್ಟಿದ್ದಾರೆ. ಈ ಬಾರಿಯಾದರೂ ಅದು ಸಾಕಾರಗೊಳ್ಳುವುದೇ? - ನಿಜ, ಅನೇಕ ಉದ್ಯಮಿಗಳು ಪ್ರತ್ಯೇಕ ಕೈಗಾರಿಕಾ ನೀತಿ ಜಾರಿಯ ಬಗ್ಗೆ ಮನವಿ ಮಾಡಿದ್ದಾರೆ. ಅದು ಸರಕಾರ ಸಾಧಕ-ಭಾದಕ ಎಲ್ಲವನ್ನು ಗಮನಿಸಿ, ಪ್ರತ್ಯೇಕ ನೀತಿಯ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ. ಕಲಬುರಗಿ
ಹಾಗೂ ಕಲ್ಯಾಣ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಬೃಹತ್ ಕೈಗಾರಿಕೆಗಳು ಇಲ್ಲ. ಆದರೆ, ಕೇಂದ್ರದ ನಿಯೋ ಜಿತ ಜವಳಿ ಪಾರ್ಕ್ ಯೋಜನೆ ಫರಥಾಬಾದ್ ಹಾಗೂ ಹೊನ್ನಕಿರಣಗಿ ಹತ್ತಿರ ರೂಪಿಸಲಾಗಿದೆ. ಇದರಿಂದಾಗಿ
ಒಂದು ಲಕ್ಷ ಜನರಿಗೆ ಉದ್ಯೋಗ ಅವಕಾಶ ಸಿಗಲಿದೆ. ಅದಕ್ಕಾಗಿ ಕಲ್ಯಾಣ ಕರ್ನಾಟಕ ಮಂಡಳಿಯೇ ಮುಂದೆ ಬಂದು ೫೦ ಸಾವಿರ ಕೋಟಿ ರು.ಗಳ ಅನುದಾನ ಮೀಸಲಿಟ್ಟು ಈ ಭಾಗದ ಜನರ ಆಶಾಕಿರಣವಾಗಿ ಕೆಲಸ ಮಾಡಲು ಶ್ರಮಿಸುತ್ತಿದೆ. - ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಮೆರಿಟ್ ವಿಚಾರದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಅನ್ಯಾಯವಾಗುತ್ತಿದೆ. ಅದಕ್ಕಾಗಿಯೇ ಇತ್ತೀಚೆಗೆ ನಡೆದ 545 ಪಿಎಸ್ಐ ಹುದ್ದೆಗಳ ನೇಮಕಾತಿ ತಡೆ ಹಿಡಿಯಲಾಗಿದೆ. ಇದಕ್ಕೆ ಸಂಪುಟದಲ್ಲಿ ಪರಿಹಾರ ಸಿಗುವುದೇ?
- ಹೌದು, ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಕಲ್ಯಾಣ ಕರ್ನಾಟಕದ ಯುವಕರು ಮೆರಿಟ್ ನಲ್ಲಿ ಪಾಸ್ ಆದರೆ, ಅವರು ನೇರವಾಗಿ ಜನರಲ್ ಮೆರಿಟ್ ಮೇಲೆ ಹುದ್ದೆ ಪಡೆಯಬೇಕು. ಇನ್ನೂ ೩೭೧(ಜೆ) ಕೋಟಾದಲ್ಲಿ ಆಯ್ಕೆಯಾದ ಅಭ್ಯರ್ಥಿ ಕೋಟಾದ ಅನುಸಾರವಾಗಿಯೇ ಹುದ್ದೆ ಪಡೆಯಬೇಕು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇದು ಸ್ಪಷ್ಟವಾಗಿದೆ.
- *
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಸರಕಾರ ಅತಿ ಹಿಂದುಳಿದ ಪ್ರದೇಶದ ಜನರ ಏಳಿಗೆಗಾಗಿ ಕಟ್ಟಿಬದ್ಧ ವಾಗಿದೆ. 5000 ಕೋಟಿ ರು. ಅನುದಾನ ಬಳಸುವ ಮೂಲಕ ಶೈಕ್ಷಣಿಕ, ಆರ್ಥಿಕ, ಆರೋಗ್ಯ, ಔದ್ಯೋಗಿಕ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಮಾಡಲಾಗುತ್ತದೆ. ಆದರಿಂದ, ಕಲ್ಯಾಣ ಕರ್ನಾಟಕದ ಒಂದು ಕೋಟಿಗೂ ಅಧಿಕ ಜನರು ಸರಕಾರದ ಮೇಲೆ ನಂಬಿಕೆ ಇಟ್ಟು ಬೆಂಬಲಿಸಬೇಕು.
ಡಾ.ಅಜಯ್ ಸಿಂಗ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ
*