ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೆಪ್ಟೆಂಬರ್ 17ರಂದು 72ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಮೂರನೇ ಬಾರಿಗೆ ಸತತವಾಗಿ ಭಾರತದ ಪ್ರಧಾನಿ ಹುದ್ದೆಯನ್ನು ವಹಿಸಿಕೊಂಡು ಸಾಧನೆ ಮಾಡಿದ್ದಾರೆ. ಅವರು ಆಧನಿಕ ಯುಗದ ಅತ್ಯಂತ ಜನಪ್ರಿಯ ರಾಷ್ಟ್ರ ನಾಯಕ ಎಂಬ ಖ್ಯಾತಿಯನ್ನೂ ಗಳಿಸಿಕೊಂಡಿದ್ದಾರೆ. ಅವರು ಕಳೆದ ಎರಡು ಅವಧಿ ಸೇರಿದಂತೆ ತಮ್ಮ ಪ್ರಧಾನಿ ಹುದ್ದೆಯ ಅವಧಿಯಲ್ಲಿ ಹಲವಾರು ಘೋಷಣೆಗಳನ್ನು (Schemes launched on PM’s Birthday) ಮಾಡಿದ್ದಾರೆ. ಅವುಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ.
#WATCH | Chennai, Tamil Nadu | A 13-years-old school student, Presley Shekinah creates a portrait of PM Narendra Modi using grains and lentils in a 12-hour-long effort, ahead of the PM's 74th birthday on September 17. (15/09) pic.twitter.com/ubQE4hxq5D
— ANI (@ANI) September 16, 2024
ವಿವಿಧ ಕ್ಷೇತ್ರಗಳಲ್ಲಿ ಭಾರತದ ಅಭಿವೃದ್ಧಿಯನ್ನು ವೇಗಗೊಳಿಸುವ ಗುರಿಯೊಂದಿಗೆ ಅವರು ಅನೇಕ ಯೋಜನೆಗಳನ್ನು ಘೋಷಿಸಿದ್ದರು. ಪ್ರಮುಖವಾಗಿ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಬೆಳವಣಿಗೆ ಅವರ ಗುರಿಯಾಗಿದೆ. ಈ ಎಲ್ಲ ಯೋಜನೆಗಳು ದೇಶದ ಪ್ರಗತಿಯಲ್ಲಿ ಒಂದು ಮೈಲಿಗಲ್ಲಾಗಿದೆ. ಹೀಗೆ ಪ್ರಧಾನಿ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿಅವರು ಪ್ರಾರಂಭಿಸಿದ 10 ಪ್ರಮುಖ ಯೋಜನೆಗಳ ಮಾಹಿತಿ ಇಲ್ಲಿ ನೀಡಲಾಗಿದೆ.
ವಸತಿ ಯೋಜನೆ : ಈ ಯೋಜನೆಯು ನಗರ ಪ್ರದೇಶಗಳಲ್ಲಿ ಕೈಗೆಟುಕುವ ದರದಲ್ಲಿ ಜನರಿಗೆ ಮನೆ ನಿರ್ಮಿಸಿಕೊಳ್ಳುವುದಕ್ಕೆ ಅನುಕೂಲಕರವಾಗಿದೆ, ಬಿಲ್ಡರ್ ಗಳಿಗೆ ಪ್ರೋತ್ಸಾಹ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಸಬ್ಸಿಡಿಗಳನ್ನು ಈ ಯೋಜನೆಯಡಿ ನೀಡಲಾಗಿದೆ.
ಸ್ವಚ್ಛ ಭಾರತ ಮಿಷನ್ 2.0: ಸ್ವಚ್ಛ ಭಾರತ ಅಭಿಯಾನದ ಯೋಜನೆಯ ವಿಸ್ತೃತ ಭಾಗವೇ ಸ್ವಚ್ಛ ಭಾರತ ಮಿಷನ್ 2.0. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಸುಧಾರಿಸಲು ಈ ಯೋಜನೆ ಜಾರಿ ಮಾಡಲಾಗಿದೆ. ಇದು ಸುಧಾರಿತ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ ಮತ್ತು ವರ್ಧಿತ ಮರುಬಳಕೆ ವ್ಯವಸ್ಥೆಯನ್ನು ಒಳಗೊಂಡಿದೆ.
ಸ್ಮಾರ್ಟ್ ಸಿಟಿಗಳ ವಿಸ್ತರಣೆ ಕಾರ್ಯಕ್ರಮ: ಈ ಯೋಜನೆಯಡಿ, ನಗರ ಜೀವನದ ಮಟ್ಟ ಮತ್ತು ಸುಸ್ಥಿರತೆ ಅಭಿವೃದ್ಧಿಯ ಗುರಿ ಹೊಂದಲಾಗಿದೆ. ಸಾರ್ವಜನಿಕ ಸಾರಿಗೆ, ಡಿಜಿಟಲ್ ಸೇವೆಗಳು ಮತ್ತು ವನಗಳ ನಿರ್ಮಾಣ ಸೇರಿದಂತೆ ಸ್ಮಾರ್ಟ್ ಮೂಲಸೌಕರ್ಯಗಳು ಈ ಯೋಜನೆಯಡಿ ದೊರೆಯುತ್ತದೆ.
ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ : ಉದ್ಯೋಗಿಗಳ ಕೌಶಲ ತುಂಬುವ ಗುರಿಯನ್ನು ಈಯೋಜನೆ ಹೊಂದಿದೆ. ಈ ಯೋಜನೆಯು ಹೊಸ ಕೈಗಾರಿಕೆಗಳು ಮತ್ತು ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿ ಲಕ್ಷಾಂತರ ಯುವಕರಿಗೆ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಅವಕಾಶಗಳನ್ನು ಒದಗಿಸುತ್ತದೆ.
ಇದನ್ನೂ ಓದಿ: Narendra Modi Birthday: ಮೋದಿ ಜನ್ಮದಿನ; ಬಿಜೆಪಿಯಿಂದ ಚಿತ್ರಕಲಾ, ರಂಗೋಲಿ ಶಿಬಿರ
ಡಿಜಿಟಲ್ ಇಂಡಿಯಾ 2.0: ಡಿಜಿಟಲ್ ಇಂಡಿಯಾ ಇಂಟರ್ನೆಟ್ ಸಂಪರ್ಕ ವಿಸ್ತರಿಸುವ ಯೋಜನೆಯಾಗಿದೆ. ಸೈಬರ್ ಸುರಕ್ಷತೆ ಸುಧಾರಿಸುವ ಮೂಲಕ ಮತ್ತು ಎಲ್ಲಾ ಪ್ರದೇಶಗಳಲ್ಲಿ ಡಿಜಿಟಲ್ ಸಾಕ್ಷರತೆ ಉತ್ತೇಜಿಸಲಾಗುತ್ತದೆ.
ಸರ್ವರಿಗೂ ಆರೋಗ್ಯ ರಕ್ಷಣೆ: ಆರೋಗ್ಯ ರಕ್ಷಣೆ ಯೋಜನೆಯುಡಿ ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತದೆ. ಉಚಿತ ತಪಾಸಣೆ. ಚಿಕಿತ್ಸೆಗಳು ಮತ್ತು ಔಷಧಿಗಳು ಸೇರಿದಂತೆ ದುರ್ಬಲ ಜನಸಂಖ್ಯೆಗೆ ಸಮಗ್ರ ವೈದ್ಯಕೀಯ ರಕ್ಷಣೆ ನೀಡುತ್ತದೆ.
ನವೀಕರಿಸಬಹುದಾದ ಇಂಧನ ಉತ್ತೇಜನ: ರಾಷ್ಟ್ರೀಯ ಗ್ರಿಡ್ನಲ್ಲಿ ಶುದ್ಧ ಇಂಧನದ ಪಾಲನ್ನು ಹೆಚ್ಚಿಸಲು ಮತ್ತು ನವೀಕರಿಸಬಹುದಾದ ಇಂಧನಕ್ಕೆ ಉತ್ತೇಜನ ಕಾರ್ಯಕ್ರಮ ಇದಾಗಿದೆ. ಪೆಟ್ರೊಲ್, ಡೀಸೆ ಮತ್ತು ಕಲ್ಲಿದ್ದಲಿನಂಥ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಸೌರ ಮತ್ತು ಪವನ ಶಕ್ತಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸರ್ಕಾರ ಈ ಯೋಜನೆ ಪ್ರಾರಂಭಿಸಿತು.
ಮೇಕ್ ಇನ್ ಇಂಡಿಯಾ: ಮೇಕ್ ಇನ್ ಇಂಡಿಯಾ ಅಭಿಯಾನವು ದೇಶೀಯ ಉತ್ಪಾದನೆ ಮತ್ತು ವಿದೇಶಿ ಹೂಡಿಕೆ ಉತ್ತೇಜಿಸುತ್ತದೆ. ಇದು ಭಾರತದ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುತ್ತಿದೆ.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಯೋಜನೆ: ಸುಧಾರಿತ ಕೃಷಿ ತಂತ್ರಜ್ಞಾನಗಳು, ಉತ್ತಮ ನೀರಾವರಿ ಸೌಲಭ್ಯಗಳು ಮತ್ತು ಮಾರುಕಟ್ಟೆಗಳಿಗೆ ಪ್ರವೇಶದೊಂದಿಗೆ ರೈತರಿಗೆ ಬೆಂಬಲ ನೀಡಲು ಈ ಯೋಜನೆ ಆರಂಭಿಸಲಾಯಿತು. ಇದು ಗ್ರಾಮೀಣ ಉದ್ಯಮಶೀಲತೆ ಮತ್ತು ಮೂಲಸೌಕರ್ಯಕ್ಕೆ ಆದ್ಯತೆ ನೀಡುತ್ತದೆ.
ಸ್ಟಾರ್ಟ್ ಅಪ್ ಇಂಡಿಯಾ 2.0: ನಾವೀನ್ಯತೆ ಮತ್ತು ಉದ್ಯಮಶೀಲತೆ ಉತ್ತೇಜಿಸಲು ಈ ಯೋಜನೆ ಜಾರಿಗೆ ಬಂದಿದೆ. ಸ್ಟಾರ್ಟ್ ಅಪ್ಗಳಿಗೆ ಆರ್ಥಿಕ ಬೆಂಬಲ ಮತ್ತು ಸಂಪನ್ಮೂಲಗಳನ್ನು ನೀಡುತ್ತದೆ. ಈ ಯೋಜನೆಯಡಿ ದೇಶಾದ್ಯಂತ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ.