Thursday, 19th September 2024

Ganeshotsava: ಗಣೇಶೋತ್ಸವದ ಮೂಲಕ ಬ್ರಿಟೀಷರ ಒಡೆದು ಆಳುವ ನೀತಿಗೆ ಸೆಡ್ಡು ಹೊಡೆ ದವರು ತಿಲಕರು- ನ್ಯಾ.ಎನ್.ಕುಮಾರ್ ಅಭಿಮತ

ಗೌರಿಬಿದನೂರು: ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷರು ದೇಶದ ಜನರನ್ನು ಜಾತಿಗಳ ಹೆಸರಿನಲ್ಲಿ ಒಡೆಯುವ ಮೂಲಕ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದರು. ಅಂತಹ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು, ದೇಶದ ಜನರಿಗೆ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವಂತೆ ಕರೆ ನೀಡಿದ ಪರಿಣಾಮವಾಗಿ ದೇಶದ ಜನರು ಜಾತಿ ಭೇದ ಮರೆತು ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವ ಮೂಲಕ ಬ್ರಿಟಿಷರಿಗೆ ಸೆಡ್ಡು ಹೊಡೆ ದರು ಎಂದು ಹೈಕೋರ್ಟಿನ ವಿಶ್ರಾಂತಿ ನ್ಯಾಯಾಧೀಶ ಎನ್.ಕುಮಾರ್ ತಿಳಿಸಿದರು.

ನಗರದ ಬೈಪಾಸ್ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ನಾವುಗಳು ಕೇವಲ ಹಬ್ಬ ಹರಿದಿನಗಳನ್ನು ಆಚರಿಸಿದರೆ ಮಾತ್ರ ಸಾಲದು, ಬದಲಿಗೆ ನಮ್ಮ ಮಕ್ಕಳಿಗೆ ನಮ್ಮ ಧರ್ಮದ ಆಚಾರ ವಿಚಾರ, ನಡೆ ನುಡಿ, ಉಡುಗೆ ತೊಡುಗೆ ಹಾಗೂ ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಬೇಕು ಎಂದು ಕರೆ ನೀಡಿದರು.

ವಿಶ್ವ ಹಿಂದು ಪರಿಷದ್ ರಾಷ್ಟೀಯ ಕಾರ್ಯದರ್ಶಿ ಹಾಗೂ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಉಸ್ತು ವಾರಿ ಕಾರ್ಯದರ್ಶಿ ಗೋಪಾಲ್ ಜೀ ಅವರು ಮಾತನಾಡುತ್ತಾ, ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ ಗಣೇಶೋ ತ್ಸವ ಹೇಗೆ ಹಿಂದೂಗಳನ್ನು ಒಗ್ಗೂಡಿಸಲು ಸಾಧ್ಯವಾಯಿತೋ, ಅದೇ ರೀತಿಯಲ್ಲಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಸಮಸ್ತ ಹಿಂದೂಗಳು ಜಾತಿ ಕುಲ ಭೇದಗಳನ್ನು ಬದಿಗೊತ್ತಿ ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ರೀತಿಯಲ್ಲಿ ಒಟ್ಟಾಗಿ ರಾಮನ ಕಾರ್ಯವನ್ನು ಸುಸೂತ್ರವಾಗಿ ನೆರೆವೇರಿಸಿದರು. ರಾಮ ರಾಜ್ಯ ಸ್ಥಾಪನೆ ಯಾಗಬೇಕಾದರೆ  ಎಲ್ಲರೂ ರಾಮನ ಬದುಕನ್ನು ಅನುಸರಿಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಹಿಂದೂ ಯುವಕರಿಂದ ಮಲ್ಲ ಕಂಭ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ವರಪ್ರಸಾದ್ ರೆಡ್ಡಿ, ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷ ಬಿಕೆ.ಮಂಜುನಾಥ್, ಗೌರಿಶಂಕರ್, ವೇಣು ಜೀ, ಮಂಜುನಾಥ್, ದಯಾನಂದ್, ರಾಮ ಮೋಹನ್, ಉಪೇಂದ್ರ, ಬೈಪಾಸ್ ಗಣೇಶೋತ್ಸವ ಬಳಗದ ರವಿಕುಮಾರ್, ಸ್ವಾಗತ್, ರಾಜಶೇಖರ್, ಶಿವಾರೆಡ್ಡಿ, ಗಣೇಶ್, ಹರೀಶ್, ನವೀನ್, ನಿಖಿಲ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Ganeshotsava Gauribidanur: ಗೌರಿಬಿದನೂರು ಬೈಪಾಸ್ ಗಣೇಶೋತ್ಸವಕ್ಕೆ 21ರ ಸಂಭ್ರಮ