Saturday, 23rd November 2024

100 Days of Modi: 100 ದಿನ ಪೂರೈಸಿದೆ ಮೋದಿ ನೇತೃತ್ವದ 3.0 ಸರ್ಕಾರ; ಮಹತ್ವದ ಕ್ರಮಗಳು ಏನೇನು?

100 Days of Modi

ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) 74ನೇ ಹುಟ್ಟುಹಬ್ಬದ (PM Modi Birthday) ಜೊತೆಗೆ ಮಂಗಳವಾರ ಎನ್‌ಡಿಎ ಸರ್ಕಾರ 100 ದಿನಗಳ ಆಡಳಿತವನ್ನೂ (100 Days of Modi) ಪೂರೈಸಿದೆ. ಹೀಗಾಗಿ ಈ ದಿನವನ್ನು ಸೇವಾ ದಿನ (sewa diwas) ಎಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಇದಕ್ಕಾಗಿ ಬಿಜೆಪಿ, ವಿವಿಧ ಸಚಿವಾಲಯ ಮತ್ತು ಇಲಾಖೆಗಳು ಹಲವು ವಿಸ್ತೃತ ಯೋಜನೆಗಳನ್ನು ಕೈಗೊಂಡಿವೆ.

3.0 ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 100 ದಿನಗಳು ಅನೇಕ ರೀತಿಯಲ್ಲಿ ಹಲವು ಪ್ರಮುಖ ನಿರ್ಣಯಗಳು, ಹೊಸ ಅಭಿವೃದ್ಧಿ ಯೋಜನೆಗಳಿಗೆ ಸಾಕ್ಷಿಯಾಗಿದೆ. ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ 100 ದಿನಗಳು ಹೇಗಿತ್ತು, ಏನೆಲ್ಲ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಈಗಾಗಲೇ ‘ಒನ್ ನೇಷನ್ ಒನ್ ಪೋಲ್’ ಜಾರಿಗೆ ತರಲು ಸರ್ಕಾರ ಮುಂದಾಗಿದ್ದು, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯ ವರದಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಒಪ್ಪಿಸಲಾಗಿದೆ. ಇನ್ನು ಕೇಂದ್ರ ಸರ್ಕಾರವು ಜನಗಣತಿ ಕಾರ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸುವ ನಿರೀಕ್ಷೆ ಇದೆ. ಇದರಲ್ಲಿ ಜಾತಿಯನ್ನು ಸೇರಿಸುವ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ. ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ಕೇಂದ್ರವು ಕ್ರಮಗಳನ್ನು ಕೈಗೊಳ್ಳುತ್ತಿದೆ ಈ ಎಲ್ಲ ಪ್ರಮುಖ ನಿರ್ಣಯಗಳು ಇನ್ನು ಅಂತಿಮ ಗೊಳ್ಳಬೇಕಿದ್ದರೂ ಚರ್ಚೆಗಳು ಆರಂಭವಾಗಿವೆ.

100 Days of Modi

ಪ್ರಮುಖ ಹೆಜ್ಜೆಗಳು ಯಾವವು?

ಮೋದಿ 3.0ರ ಮೊದಲ 100 ದಿನಗಳಲ್ಲಿ ಒಟ್ಟು 3 ಲಕ್ಷ ಕೋಟಿ ರೂ. ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಅನುಮೋದಿಸಲಾಗಿದೆ. ಪ್ರತಿಯೊಂದಕ್ಕೂ ಉದ್ಘಾಟನಾ ದಿನಾಂಕವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಮಹಾರಾಷ್ಟ್ರದ ವಾಧವನ್ ಬಂದರು 76,200 ಕೋಟಿ ರೂ., ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮುಂದಿನ ಹಂತ 49,000 ಕೋಟಿ ರೂ. ವೆಚ್ಚದಲ್ಲಿ 25,000 ಸಂಪರ್ಕವಿಲ್ಲದ ಹಳ್ಳಿಗಳನ್ನು ಸಂಪರ್ಕಿಸಲು, 50,600 ಕೋಟಿ ರೂ. ಮೌಲ್ಯದ ರಸ್ತೆಗಳು ಮತ್ತು ಹೈಸ್ಪೀಡ್ ರಸ್ತೆ ಕಾರಿಡಾರ್‌ಗಳು, ಹೊಸ ರೈಲು ಮಾರ್ಗಗಳು ಮತ್ತು ಅಭಿವೃದ್ಧಿ, ಮೂರು ಹೊಸ ವಿಮಾನ ನಿಲ್ದಾಣಗಳು ಮತ್ತು ಬೆಂಗಳೂರು, ಪುಣೆ ಮತ್ತು ಥಾಣೆಯಲ್ಲಿ ಮೂರು ಮೆಟ್ರೋ ಯೋಜನೆಗಳು ಸೇರಿವೆ.

ಮೂಲಸೌಕರ್ಯಗಳ ಹೆಚ್ಚಿನ ವೆಚ್ಚವು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುತ್ತದೆ ಎಂದು ನಂಬಲಾಗಿದೆ. ಇದರಲ್ಲಿ 2 ಲಕ್ಷ ಕೋಟಿ ರೂ.ನ ಯೋಜನೆಯಿಂದ 4.1 ಕೋಟಿ ಯುವಕರಿಗೆ ಪ್ರಯೋಜನವಾಗಲಿದೆ. ಅಲ್ಲದೇ ‘ಲಖಪತಿ ದೀದಿ’ ಗಳು ದೇಶದಲ್ಲಿ ವರ್ಷಕ್ಕೆ 1 ಲಕ್ಷ ರೂ.ಗೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಇದರಲ್ಲಿ ಕಳೆದ 100 ದಿನಗಳಲ್ಲಿ 11 ಲಕ್ಷ ಮಂದಿಗೆ ಪ್ರಮಾಣ ಪತ್ರ ವಿತರಿಸಲಾಗಿದೆ.

ಇಷ್ಟೇ ಅಲ್ಲದೇ ಪ್ರಧಾನಮಂತ್ರಿ ಆವಾಸ್ ಯೋಜನೆ, ಏಕೀಕೃತ ಪಿಂಚಣಿ ಯೋಜನೆ, ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆ ಪ್ರಯೋಜನಗಳು ಮತ್ತು ಸೌರ ವಿದ್ಯುತ್ ಅಳವಡಿಸುವ 2.5 ಲಕ್ಷ ಮನೆಗಳ ಅಡಿಯಲ್ಲಿ ಮಂಜೂರಾದ ಮೂರು ಕೋಟಿ ಮನೆಗಳು ಇತರ ಪ್ರಮುಖ ಯೋಜನೆಗಳಿಗೂ ಅನುದಾನ ಮೀಸಲಿಡಲಾಗಿದೆ.

100 Days of Modi

ರೈತ ಸ್ನೇಹಿ ಸರ್ಕಾರ

ಮೋದಿ ನೇತೃತ್ವದ ಸರ್ಕಾರವು ರೈತ ಸ್ನೇಹಿ ಯೋಜನೆಗಳನ್ನೂ ಪ್ರಕಟಿಸಿದೆ. ಪಿಎಂ ಕಿಸಾನ್ ನಿಧಿಯಡಿಯಲ್ಲಿ ಈವರೆಗೆ 3 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ. ಎಂಎಸ್‌ಪಿ ಹೆಚ್ಚಳದ ಮೂಲಕ ರೈತರಿಗೆ 2 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಪ್ರಯೋಜನ ಸಿಗುವಂತೆ ಮಾಡಲಾಗಿದೆ. ಎಂಎಸ್ ಪಿ ಅಡಿಯಲ್ಲಿ ಶೇ.120ರಷ್ಟು ಸಂಗ್ರಹಣೆಯ ಹೊಸ ದಾಖಲೆಯನ್ನು ಸ್ಥಾಪಿಸಿದೆ. ಹಿಂದಿನ ಸರ್ಕಾರ ಕೈಗೊಂಡಿದ್ದ ‘ಕೃಷಿ ಸಾಲ ಮನ್ನಾ’ದ ಜನಪ್ರಿಯ ಮಾರ್ಗಕ್ಕಿಂತ ರೈತರಿಗೆ ಅನುಕೂಲವಾಗುವಂತೆ ಮೋದಿ ಸರ್ಕಾರ ಈ ಮಾರ್ಗವನ್ನು ತೆಗೆದುಕೊಂಡಿದೆ. 2.5 ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ಭಾರತದ ಶೇ. 82ರಷ್ಟು ರೈತರ ವೆಚ್ಚವನ್ನು ಭರಿಸುವಲ್ಲಿ ಯಶಸ್ವಿಯಾಗಿದ್ದು, ಅವರನ್ನು ಸಾಲ ಮುಕ್ತರನ್ನಾಗಿಸುತ್ತಿದೆ.

ಪ್ರಧಾನಮಂತ್ರಿ ಕಿಸಾನ್ ನಿಧಿಯು ರೈತರನ್ನು ಸಬಲೀಕರಣಗೊಳಿಸುವ ಯೋಜನೆಯಾಗಿದೆಯೇ ಹೊರತು ಬಿಟ್ಟಿ ಯೋಜನೆಯಲ್ಲ ಎಂದು ಬಿಜೆಪಿ ಹೇಳುತ್ತಿದೆ. ಕೇಂದ್ರ ಸರ್ಕಾರದ ಮತ್ತೊಂದು ಪ್ರಮುಖ ನಿರ್ಧಾರವೆಂದರೆ ಆಯುಷ್ಮಾನ್ ಭಾರತ್ ಪ್ರಯೋಜನವನ್ನು 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ವಿಸ್ತರಿಸಿರುವುದು ಸೇರಿದೆ.

ವಿದೇಶಾಂಗ ನೀತಿ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರ್ಕಾರದ ಮೊದಲ 100 ದಿನಗಳಲ್ಲಿ ರಷ್ಯಾ ಮತ್ತು ಉಕ್ರೇನ್‌ಗೆ ಭೇಟಿ ನೀಡಿರುವುದರಿಂದ ವಿಶ್ವವು ಈಗ ಭಾರತದತ್ತ ಭರವಸೆಯಿಂದ ನೋಡುತ್ತಿದೆ. ಮೋದಿ ಅವರು 41 ವರ್ಷಗಳ ಅನಂತರ ಆಸ್ಟ್ರಿಯಾ ಮತ್ತು 45 ವರ್ಷಗಳ ಅನಂತರ ಪೋಲೆಂಡ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ. ಅಲ್ಲದೇ ಬ್ರೂನೈಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ. ‘ವಾಯ್ಸ್ ಆಫ್ ಗ್ಲೋಬಲ್ ಸೌತ್’ ಶೃಂಗಸಭೆಯಲ್ಲಿ ಭಾರತವು 120ಕ್ಕೂ ಹೆಚ್ಚು ದೇಶಗಳಿಗೆ ಆತಿಥ್ಯ ವಹಿಸಿದೆ.

100 Days of Modi

ಮೂರು ಹೊಸ ಕ್ರಿಮಿನಲ್ ಕಾನೂನು

ಕೇಂದ್ರ ಎನ್‌ಡಿಎ ಸರ್ಕಾರ ಮೊದಲ 100 ದಿನಗಳಲ್ಲಿ ಜಾರಿಗೊಳಿಸಿರುವ ಒಂದು ದೊಡ್ಡ ನಿರ್ಧಾರವೆಂದರೆ ಕೇಂದ್ರ ಗೃಹ ಸಚಿವಾಲಯವು ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೊಳಿಸಿರುವುದು. ತನಿಖೆ ಮತ್ತು ನ್ಯಾಯಾಂಗ ವಿಳಂಬವನ್ನು ಕಡಿತಗೊಳಿಸಲು ಭಾರತ ಶೀಘ್ರದಲ್ಲೇ ಅತ್ಯಂತ ಆಧುನಿಕ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಜಾರಿಗೊಳಿಸುವ ಸಾಧ್ಯತೆ ಇದೆ.

ಇಂದಿರಾಗಾಂಧಿ ಸರ್ಕಾರ ಹೇರಿದ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಯುವಜನತೆಗೆ ತಿಳಿಸಲು ಸರ್ಕಾರ ಜೂನ್ 25 ಅನ್ನು ‘ಸಂವಿಧಾನ ಹತ್ಯೆ ದಿವಸ್’ ಎಂದು ಘೋಷಿಸಿತು. ‘ಸಂವಿಧಾನ್ ಹತ್ಯಾ ದಿವಸ್’ ರಾಜಕೀಯ ಕಾರ್ಯಕ್ರಮವಲ್ಲ. ಪ್ರಜಾಪ್ರಭುತ್ವದ ನೀತಿಯನ್ನು ಕಾಪಾಡಲು ಪ್ರತಿ ವರ್ಷ ಸಂಕಲ್ಪ ಮಾಡುವ ಆಲೋಚನೆ ಇದು ಎನ್ನಲಾಗುತ್ತಿದೆ.

PM Modi Birthday: ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ; ರಾಷ್ಟ್ರಪತಿ ಸೇರಿ ಗಣ್ಯರಿಂದ ಶುಭಾಶಯಗಳ ಮಹಾಪೂರ

ದೇಶದಲ್ಲಿ ಉತ್ತಮ ಆಡಳಿತ ಮತ್ತು ವಕ್ಫ್ ಆಸ್ತಿಗಳ ರಕ್ಷಣೆಗಾಗಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.