Saturday, 23rd November 2024

Deepika Padukone: ದೀಪಿಕಾ ಪಡುಕೋಣೆಯಿಂದ 17.78 ಕೋಟಿ ರೂ. ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿ

Deepika Padukone

ಬಾಲಿವುಡ್ ನಟಿ (Bollywood actress) ದೀಪಿಕಾ ಪಡುಕೋಣೆ (Deepika Padukone) ಮತ್ತು ಅವರ ತಂದೆ ಪ್ರಕಾಶ್ ಪಡುಕೋಣೆ (Prakash Padukone) ಅವರ ಒಡೆತನದ ಕೆಎ ಎಂಟರ್‌ಪ್ರೈಸಸ್ ಎಲ್ ಎಲ್ ಪಿ (KA Enterprises LLP) ಇತ್ತೀಚೆಗೆ ಮುಂಬಯಿನ ಬಾಂದ್ರಾ ವೆಸ್ಟ್ (Mumbai’s Bandra West) ಪ್ರದೇಶದಲ್ಲಿ 17.78 ಕೋಟಿ ರೂ. ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ವೊಂದನ್ನು ಖರೀದಿ ಮಾಡಿದೆ.

ಕೆಎ ಎಂಟರ್‌ಪ್ರೈಸಸ್ ಈ ಮೂಲಕ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದೆ. ಐಕಾನಿಕ್ ಬ್ಯಾಂಡ್‌ಸ್ಟ್ಯಾಂಡ್ ಬಳಿಯ ಸಾಗರ್ ರೇಶಮ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿರುವ ನಾಲ್ಕು ಮತ್ತು ಐದು ಬಿಎಚ್‌ಕೆಯ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದೆ.

Deepika Padukone

ಹೊಸದಾಗಿ ಖರೀದಿಸಿದ ಅಪಾರ್ಟ್‌ಮೆಂಟ್‌ ಸುಮಾರು 1,846 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಕಾರ್ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿದೆ. ಈ ಒಪ್ಪಂದವು ಸುಮಾರು 1.07 ಕೋಟಿ ರೂ. ಮುದ್ರಾಂಕ ಶುಲ್ಕ ಮತ್ತು 30,000 ರೂ. ನೋಂದಣಿ ಶುಲ್ಕವನ್ನು ಒಳಗೊಂಡಿತ್ತು. ದೀಪಿಕಾ ಅವರ ಅತ್ತೆ ಅಂಜು ಭವ್ನಾನಿ ಅವರು ಇತ್ತೀಚೆಗಷ್ಟೇ 19.13 ಕೋಟಿ ರೂಪಾಯಿಗೆ ಪಕ್ಕದ ಅಪಾರ್ಟ್‌ಮೆಂಟ್‌ ಅನ್ನು ಖರೀದಿ ಮಾಡಿದ್ದರು. ಸುಮಾರು 169 ಚದರ ಮೀಟರ್ ವ್ಯಾಪಿಸಿರುವ ಈ ಆಸ್ತಿಯು ಒಂದು ಕಾರ್ ಪಾರ್ಕಿಂಗ್ ಸ್ಥಳವನ್ನು ಸಹ ಒಳಗೊಂಡಿದೆ. ಇದರಲ್ಲಿ 95.68 ಲಕ್ಷ ರೂ. ಮುದ್ರಾಂಕ ಶುಲ್ಕ ಮತ್ತು 30,000 ರೂ. ನೋಂದಣಿ ಶುಲ್ಕ ಸೇರಿದೆ.

ಅಂಜು ಭವ್ನಾನಿ ಅವರ ಅಪಾರ್ಟ್‌ಮೆಂಟ್‌ ಅನ್ನು ಅವರ ಮಗಳು ರಿತಿಕಾ ಭವ್ನಾನಿ ಮತ್ತು ಪತಿ ಜುಗ್ಜೀತ್ ಸಿಂಗ್ ಭವ್ನಾನಿ ಅವರಿಗೆ ಗುತ್ತಿಗೆ ನೀಡಲಾಗಿದೆ. ಇದರ ಗುತ್ತಿಗೆಯನ್ನು ಫಿಲ್ಮ್‌ಕ್ರಾಫ್ಟ್ ಪ್ರೈ ಲಿಮಿಟೆಡ್ ಮತ್ತು ಒಹ್ ಫೈವ್ ಒಹ್ ಟ್ಯಾಲೆಂಟ್ ಎಲ್ ಎಲ್ ಪಿ ಹೆಸರಲ್ಲಿ 55 ತಿಂಗಳ ಅವಧಿಗೆ ನೋಂದಣಿ ಮಾಡಲಾಗಿದೆ. ಇದರ ಮಾಸಿಕ ಬಾಡಿಗೆಯನ್ನು ಮೊದಲ 33 ತಿಂಗಳಿಗೆ 8.20 ಲಕ್ಷ ರೂ. ಎಂದು ನಿಗದಿಪಡಿಸಲಾಗಿದ್ದು, ಉಳಿದ 22 ತಿಂಗಳಿಗೆ 9.43 ಲಕ್ಷ ರೂ. ಗೆ ಅಂದರೆ ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ. ಭದ್ರತಾ ಠೇವಣಿ 73.80 ಲಕ್ಷ ರೂ. ಮತ್ತು 1.29 ಲಕ್ಷ ಮುದ್ರಾಂಕ ಶುಲ್ಕ ಸಹ ಒಪ್ಪಂದದ ಭಾಗವಾಗಿತ್ತು.

Stree 2: ಕೆಜಿಎಫ್ ದಾಖಲೆ ಮುರಿದ ಸ್ತ್ರೀ 2: 32 ನೇ ದಿನ ದಿನದ ಕಲೆಕ್ಷನ್ ಎಷ್ಟು ಗೊತ್ತೇ?

ದೀಪಿಕಾ ಪಡುಕೋಣೆ ಅವರ ಪತಿ ರಣವೀರ್ ಸಿಂಗ್ ಅವರು 2022 ರಲ್ಲಿ 119 ಕೋಟಿ ರೂ.ಗೆ ಖರೀದಿಸಿದ ಅದೇ ಕಟ್ಟಡದಲ್ಲಿ ಈಗಾಗಲೇ ಬಹು ಮಹಡಿಗಳನ್ನು ಹೊಂದಿದ್ದಾರೆ. ಬಾಂದ್ರಾ ವೆಸ್ಟ್‌ನಲ್ಲಿ ನಟ ಅಮೀರ್ ಖಾನ್ 9.76 ಕೋಟಿ ರೂ., ನಟಿ ತೃಪ್ತಿ ದಿಮ್ರಿ 14 ಕೋಟಿ ರೂ., ಭಾರತೀಯ ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಪತ್ನಿ ಅಥಿಯಾ ಶೆಟ್ಟಿ 20 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಖರೀದಿಸಿದ್ದಾರೆ.