Saturday, 23rd November 2024

Narendra Modi: ಮೂರು ಕುಟುಂಬಗಳಿಂದ ಕಾಶ್ಮೀರಿ ಯುವಕರ ಭವಿಷ್ಯ ನಾಶ; ಕಣಿವೆ ರಾಜ್ಯದಲ್ಲಿ ಪ್ರಧಾನಿ ಮೋದಿ ಗುಡುಗು

Narendra Modi

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ(JK Election)ದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಎರಡನೇ ಚುನಾವಣಾ ರ್ಯಾಲಿ(Election Rally) ನಡೆಸಿದ್ದು, ಕಾಂಗ್ರೆಸ್‌, ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಪಿಡಿಪಿ ವಿರುದ್ಧ ಕಿಡಿಕಾರಿದ್ದಾರೆ. ಶ್ರೀನಗರದಲ್ಲಿ ಇಂದು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರದ ಮತ್ತೊಂದು ಪೀಳಿಗೆ ಜನರನ್ನು ನಾಶ ಮಾಡಲು ಈ ಮೂರು ಕುಟುಂಬಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಯುವಕರು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಶಾಲಾ ಕಾಲೇಜಿನಿಂದ ದೂರ ಉಳಿದಿದ್ದಾರೆ. ಈ ಕುಟುಂಬಗಳು ಅವರ ಕೈಗಳಿಗೆ ಕಲ್ಲುಗಳನ್ನು ಕೊಡುತ್ತಿದ್ದಾರೆ. ಇವರು ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಸಂಚು ರೂಪಿಸುವ ಎಲ್ಲಾ ಶಕ್ತಿಗಳನ್ನು ಸೋಲಿಸಲೇಬೇಕು. ಇಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಸುವುದು ಮೋದಿಯ ಗುರಿ ಮತ್ತು ಭರವಸೆ ಎಂದು ಹೇಳಿದರು.

“ಈ 3 ಕುಟುಂಬಗಳ ಕೈಯಲ್ಲಿ ನಮ್ಮ ಮುಂದಿನ ಪೀಳಿಗೆಯನ್ನು ನಾಶಮಾಡಲು ನಾನು ಬಿಡುವುದಿಲ್ಲ. ಅದಕ್ಕಾಗಿಯೇ ನಾನು ಇಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಇಂದು ಜಮ್ಮು ಮತ್ತು ಕಾಶ್ಮೀರದಾದ್ಯಂತ ಶಾಲಾ-ಕಾಲೇಜುಗಳು ಸುಗಮವಾಗಿ ನಡೆಯುತ್ತಿವೆ. ಮಕ್ಕಳ ಬಳಿ ಪೆನ್ನುಗಳು, ಪುಸ್ತಕಗಳು ಮತ್ತು ಲ್ಯಾಪ್‌ಟಾಪ್‌ಗಳಿವೆ. ಇಂದು ಅವರ ಕೈಯಲ್ಲಿ ಬೆಂಕಿಯ ಬಗ್ಗೆ ಯಾವುದೇ ವರದಿಗಳಿಲ್ಲ, ಬದಲಿಗೆ ಹೊಸ ಶಾಲೆಗಳು, ಹೊಸ ಕಾಲೇಜುಗಳು, AIIMS, ವೈದ್ಯಕೀಯ ಕಾಲೇಜುಗಳು ಮತ್ತು IIT ಗಳು ನಿರ್ಮಾಣವಾಗುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸುದ್ದಿಯನ್ನೂ ಓದಿ: Narendra Modi: ಇಂದು ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿ