Sunday, 10th November 2024

Viral Video: ಒಂದು ರೂಪಾಯಿಯಿಂದ ಸರ್ಕಾರಿ ಕೆಲಸ ಕಳೆದುಕೊಂಡ ನೌಕರ!

Viral Video

ಲಖನೌ: ಒಂದು ರೂಪಾಯಿ ಎಂದರೆ ಬಹುತೇಕ ಜನ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಒಂದು ರೂಪಾಯಿಯಲ್ಲಿ ಏನಾಗಬಹುದು ಎಂದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಒಂದು ರೂಪಾಯಿಯಿಂದ ಕೆಲಸವನ್ನೇ ಕಳೆದುಕೊಂಡಿದ್ದಾನೆ. ಇದರ ವಿಡಿಯೋ (Viral Video) ಈಗ ಸಾಮಾಜಿಕ ಜಾಲತಾಣದಲ್ಲಿ(social media) ವೈರಲ್ ಆಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ರೋಗಿಯಿಂದ ಒಂದು ರೂಪಾಯಿ ಹೆಚ್ಚಿಗೆ ಪಡೆದ ಕಾರಣಕ್ಕೆ ಆತನನ್ನು ಕೆಲಸದಿಂದಲೇ ವಜಾಗೊಳಿಸಲಾಗಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಪೂರ್ವ ಭಾಗದ ಸಮುದಾಯ ಆರೋಗ್ಯ ಕೇಂದ್ರದ (ಸಿಎಚ್‌ಸಿ) ಗುತ್ತಿಗೆ ನೌಕರನನ್ನು ರೋಗಿಯಿಂದ ಒಂದು ರೂಪಾಯಿ ಹೆಚ್ಚಿಗೆ ಪಡೆದಿರುವುದಕ್ಕೆ ವಜಾ ಮಾಡಲಾಗಿದೆ. ಬಿಜೆಪಿ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ಆಸ್ಪತ್ರೆ ಅಧಿಕಾರಿಗಳೇ ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ದೂರು ಕೇಳಿ ಬಂದಿದ್ದರಿಂದ ಜಗದೌರ್ ಪ್ರದೇಶದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳೀಯ ಬಿಜೆಪಿ ಶಾಸಕ ಪ್ರೇಮ್ ಸಾಗರ್ ಪಟೇಲ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುತ್ತಿದ್ದ ಶಾಸಕರು ತಪಾಸಣೆ ಮಾಡುವಾಗ 1 ರೂಪಾಯಿ ನಿಗದಿ ಶುಲ್ಕದ ಬದಲಿಗೆ ರೋಗಿಗಳಿಂದ 2 ರೂಪಾಯಿ ತೆಗೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಆಕ್ರೋಶಗೊಂಡ ಶಾಸಕರು ಸಾರ್ವಜನಿಕರ ಮುಂದೆಯೇ ಆಸ್ಪತ್ರೆಯ ಗುತ್ತಿಗೆ ನೌಕರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮಾತ್ರವಲ್ಲದೆ ಆತನನ್ನು ಕೆಲಸದಿಂದ ವಜಾಗೊಳಿಸಿದ್ದಾರೆ.

ಹಲವು ದೂರುಗಳು

ಇದೇ ಸಂದರ್ಭದಲ್ಲಿ ಹೆರಿಗೆ ವೇಳೆ ವೈದ್ಯರು ಸಿಗದೇ ಇರುವುದು, ರಾತ್ರಿ ಪಾಳಿ ವೈದ್ಯರು ಗೈರು ಹಾಜರಾಗುವುದು, ತುರ್ತು ಚಿಕಿತ್ಸೆ ನೀಡದೇ ಇರುವುದು, ಖಾಸಗಿ ಮೆಡಿಕಲ್​ಗಳಿಗೆ ಔಷಧ ಬರೆದುಕೊಡುವುದು ಸೇರಿದಂತೆ ಹಲವು ದೂರುಗಳನ್ನು ಶಾಸಕರ ಮುಂದೆ ಹೇಳಿಕೊಂಡರು. ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯನ್ನು ಕರೆಸಿದ ಶಾಸಕರು ಮತ್ತೆ ಈ ದೂರುಗಳು ಬರಬಾರದು ಎಂದು ಎಚ್ಚರಿಕೆಯನ್ನು ನೀಡಿದರು.

Viral Video: ಕಿರಿಯ ವಯಸ್ಸಿನ ಯುವತಿಯೊಂದಿಗೆ ಮುದುಕನ ಮದುವೆ! ಕಾರಣ ಇನ್‌ಕಮ್‌ ಮತ್ತು ದಿನ್‌ಕಮ್‌ ಅಂತೆ!