Saturday, 23rd November 2024

Foreign Tour: ಒಂದು ಲಕ್ಷ ರೂ. ಇದ್ದರೆ ಸಾಕು, ಫಾರಿನ್ ಟೂರ್ ಮಾಡಬಹುದು!

Foreign Tour

ವಿದೇಶ ಪ್ರವಾಸ (Foreign Tour) ಮಾಡಬೇಕು ಎನ್ನುವುದು ಬಹುಜನರ ಆಸೆ. ಆದರೆ ಅದು ದುಬಾರಿ, ನಮ್ಮ ಕೈಗೆಟುಕದ ಕನಸು ಎಂದು ಕೈಚೆಲ್ಲುವವರೇ ಅಧಿಕ. ಆದರೆ ನಿಮ್ಮ ಕೈಯಲ್ಲಿ ಒಂದು ಲಕ್ಷ ರೂಪಾಯಿ ಇದ್ದರೂ ಸಾಕು ಈ ದೇಶಗಳಿಗೆ ಹೋಗಿ ಆರಾಮವಾಗಿ ಸುತ್ತಾಡಿಕೊಂಡು ಬರಬಹುದು. ಅಂತಹ ದೇಶಗಳಿಗೆ ಈ ಬಾರಿಯ ರಜೆಯಲ್ಲಿ ಪ್ರವಾಸ ಹೊರಡಲು ಈಗಲೇ ಪ್ಲಾನ್ ಮಾಡಬಹುದು. ಭಾರತೀಯರು ಕೆಲವು ದೇಶಗಳಿಗೆ 1 ಲಕ್ಷ ರೂ.ಗಿಂತ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡಬಹುದು. ಇಂತಹ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಥಾಯ್ಲೆಂಡ್ ಅಗ್ರಸ್ಥಾನದಲ್ಲಿದೆ. ಬಳಿಕ ಇಂಡೋನೇಷ್ಯಾ, ವಿಯೆಟ್ನಾಂ, ನೇಪಾಳ, ಶ್ರೀಲಂಕಾ ಮತ್ತು ಮಲೇಷ್ಯಾ ಸೇರಿದೆ.

Foreign Tour

ಬಾಲಿ

ಸುಂದರ ಕಡಲ ತೀರಗಳು, ವಿಶಿಷ್ಟ ಸಂಸ್ಕೃತಿ ಮತ್ತು ರುಚಿಕರವಾದ ಆಹಾರಕ್ಕೆ ಹೆಸರುವಾಸಿಯಾದ ಇಂಡೋನೇಶ್ಯಾದಲ್ಲಿರುವ ಬಾಲಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಪ್ರವಾಸ ಮಾಡಬಹುದು. ವಿಶ್ರಾಂತಿ ಮತ್ತು ಸಾಹಸದ ಜೊತೆಗೆ ಜಲ ಕ್ರೀಡೆಗಳನ್ನು ಇಲ್ಲಿ ನಡೆಸಬಹುದು. ಸಣ್ಣ ಹಳ್ಳಿಗಳಲ್ಲಿ ಹಾಯಾಗಿ ಕೆಲವು ದಿನಗಳನ್ನು ಕಳೆಯಬಹುದು.

Foreign Tour

ಬ್ಯಾಂಕಾಕ್

ಭಾರತದ ಪ್ರತಿಯೊಬ್ಬ ಪ್ರಯಾಣಿಕರು ಥೈಲ್ಯಾಂಡ್‌ನಲ್ಲಿರುವ ಬ್ಯಾಂಕಾಕ್ ಅನ್ನು ತಮ್ಮ ಪ್ರವಾಸ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಕೈಗೆಟುಕುವ ಬೆಲೆಯಲ್ಲಿ ಇಲ್ಲಿ ಸುತ್ತಾಡಿ ಬರಬಹುದು. ಅತ್ಯಂತ ಸುಂದರ ಮಾರುಕಟ್ಟೆಗಳು, ಪುರಾತನ ದೇವಾಲಯಗಳು ಮತ್ತು ರುಚಿಕರವಾದ ಬೀದಿ ಬದಿಯ ಆಹಾರ ಇಲ್ಲಿನ ಪ್ರಮುಖ ಆಕರ್ಷಣೆ. ನಗರದಲ್ಲೇ ಇರುವ ಗ್ರ್ಯಾಂಡ್ ಪ್ಯಾಲೇಸ್‌, ಚತುಚಕ್, ಚಾವೊ ಫ್ರಾಯ ನದಿಯ ಉದ್ದಕ್ಕೂ ದೋಣಿ ವಿಹಾರ ಇಲ್ಲಿ ತಪ್ಪಿಸಿಕೊಳ್ಳಬಾರದ ಕೆಲವು ತಾಣಗಳು.

Foreign Tour

ವಿಯೆಟ್ನಾಂನ ಹೋ ಚಿ ಮಿನ್ಹ್

ವಿಯೆಟ್ನಾಂನ ಹೋ ಚಿ ಮಿನ್ಹ್ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ನಗರಗಳಲ್ಲಿ ಒಂದು. ಯುದ್ಧದ ಅವಶೇಷಗಳನ್ನು ಹೊಂದಿರುವ ವಸ್ತುಸಂಗ್ರಹಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಕುಚಿ ಸುರಂಗ ಅಥವಾ ಬೆನ್ ಥಾನ್‌ನ ಮಾರುಕಟ್ಟೆಗಳಲ್ಲಿ ಶಾಪಿಂಗ್ ಸಮಯ ಕಳೆಯಬಹುದು. ಸಮುದ್ರಾಹಾರವನ್ನು ಪ್ರೀತಿಸುವವರಾಗಿದ್ದರೆ ಇಲ್ಲಿರುವ ನೂರಾರು ಸಣ್ಣ ಕಿಯೋಸ್ಕ್‌ಗಳು ಮತ್ತು ಸ್ಟಾಲ್‌ಗಳಿಗೆ ಭೇಟಿ ನೀಡಬಹುದು.

Foreign Tour

ಕಠ್ಮಂಡು

ಆಧ್ಯಾತ್ಮಿಕತೆಯ ಸೌಂದರ್ಯವನ್ನು ಅನುಭವಿಸಬೇಕಾದರೆ ನೇಪಾಳದ ಕಠ್ಮಂಡುವಿಗೆ ಭೇಟಿ ನೀಡಬಹುದು. ಇಲ್ಲಿನ ಪುರಾತನ ದೇವಾಲಯಗಳು, ಮಾರುಕಟ್ಟೆಗಳು, ಪರ್ವತಗಳು ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿರುವ ಪಶುಪತಿನಾಥ ದೇವಾಲಯ, ಬೌಧನಾಥ ಸ್ತೂಪ, ಕಠ್ಮಂಡು ಕಣಿವೆಗೆ ಭೇಟಿ ನೀಡುವುದನ್ನು ಮರೆಯದಿರಿ. ಪರ್ವತಾರೋಹಣ ಇಷ್ಟಪಡುವವರಾದರೆ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಭೇಟಿ ನೀಡಬಹುದು.

Foreign Tour

ಕೊಲಂಬೊ

ಶ್ರೀಲಂಕಾದಲ್ಲಿರುವ ಕೊಲಂಬೊ ನ್ಯಾಷನಲ್ ಮ್ಯೂಸಿಯಂನಲ್ಲಿ ಶ್ರೀಲಂಕಾದ ವಸಾಹತುಶಾಹಿ ಇತಿಹಾಸ ಮತ್ತು ವಾಸ್ತುಶಿಲ್ಪದ ಬಗ್ಗೆ ಪರಿಚಯಿಸಿಕೊಳ್ಳಬಹುದು. ಗಂಗಾರಾಮಯಂತಹ ಪುರಾತನ ದೇವಾಲಯ, ಗಾಲ್ ಫೇಸ್ ಗ್ರೀನ್‌ನಂತಹ ಸುಂದರವಾದ ಕಡಲತೀರಗಳಲ್ಲಿ ಸಮಯ ಕಳೆಯಬಹುದು. ಕೊಲಂಬೊಗೆ ಭೇಟಿ ನೀಡಿದ ಬಳಿಕ ಸಮುದ್ರಾಹಾರದ ರುಚಿ ನೋಡಲು ಮರೆಯದಿರಿ. ಇಲ್ಲಿನ ಪುರಾತನ ನಗರವಾದ ಅನುರಾಧಪುರದಲ್ಲಿ ಸುತ್ತಾಡಲು ಒಂದು ದಿನ ಮೀಸಲಿಡಿ.

Foreign Tour

Fed Rate Cut: ಯುಎಸ್‌ ಫೆಡರಲ್‌ ರಿಸರ್ವ್‌ ಬಡ್ಡಿ ದರ ಕಡಿತಗೊಳಿಸಿದ ಬೆನ್ನಲ್ಲೇ ಗಗನಮುಖಿಯಾದ ಚಿನ್ನದ ದರ

ಕೌಲಾಲಂಪುರ

ಮಲೇಷ್ಯಾ ಪ್ರವಾಸ ಮಾಡುವಾಗ ಖರ್ಚುಗಳ ಮೇಲೆ ಬಿಗಿ ಹಿಡಿತವಿರಲಿ. ಇದು ಕೊಂಚ ದುಬಾರಿಯಾದರೂ ಸರಿಯಾಗಿ ಪ್ಲಾನ್ ಮಾಡಿದರೆ 1 ಲಕ್ಷ ರೂ.ಗಿಂತ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡಿ ಬರಬಹುದು. ಮಲೇಷ್ಯಾದ ಕೌಲಾಲಂಪುರ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿನ ಸಾಂಪ್ರದಾಯಿಕ ಪೆಟ್ರೋನಾಸ್ ಟವರ್‌, ಮಾರುಕಟ್ಟೆಗಳು ಮತ್ತು ರುಚಿಕರವಾದ ಆಹಾರ ಇಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿಗೆ ಭೇಟಿ ನೀಡಿದಾಗ ಬಟು ಗುಹೆ, ಸ್ಕೈಬ್ರಿಡ್ಜ್, ಚೈನಾಟೌನ್‌ಗೆ ಭೇಟಿ ನೀಡುವುದನ್ನು ಮರೆಯದಿರಿ.