Monday, 25th November 2024

Pralhad Joshi: ಭಾರತ ಜಗತ್ತಿಗೇ ಆಹಾರ ಪೂರೈಸಬಹುದು; ಪ್ರಲ್ಹಾದ್‌ ಜೋಶಿ

Pralhad joshi

ನವದೆಹಲಿ: ಆಹಾರ ಉತ್ಪಾದನೆಗೆ ಭಾರತದಲ್ಲಿ ವಿಶಾಲ ಅವಕಾಶವಿದ್ದು, ಜಗತ್ತಿಗೇ ಆಹಾರೋತ್ಪನ್ನ ಪೂರೈಸಬಹುದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದರು. ದೆಹಲಿಯಲ್ಲಿ ಇಂದು ಆಯೋಜಿಸಿದ್ದ ‘ವರ್ಲ್ಡ್ ಫುಡ್ ಇಂಡಿಯಾ 2024’ (World Food India 2024) ಮೇಳದ ಉದ್ಘಾಟನೆ ವೇಳೆ ಮಾತನಾಡಿ, ಗುಣಮಟ್ಟದ ಆಹಾರ ಉತ್ಪಾದನೆಯಲ್ಲಿ ಭಾರತ ವಿಶ್ವಪ್ರಸಿದ್ಧವಾಗಿದೆ ಎಂದು ಹೇಳಿದರು.

ಆಹಾರ ಧಾನ್ಯಗಳ ಉತ್ಪಾದನೆ ಮತ್ತು ಸಂಸ್ಕರಣೆ ಜತೆಗೆ ಅತ್ಯುತ್ತಮ ಮಾರುಕಟ್ಟೆಯನ್ನೂ ಭಾರತ ಕಂಡುಕೊಳ್ಳುತ್ತಿದೆ ಎಂದ ಸಚಿವರು, ಹಾಲು, ಅಕ್ಕಿ, ಸಕ್ಕರೆ ಮುಂತಾದ ಆಹಾರೋತ್ಪಾದನೆಗಳಿಗೆ ಭಾರತವೇ ದೊಡ್ಡ ಮಾರುಕಟ್ಟೆಯಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | R Ashok: ಪಾಕಿಸ್ತಾನ್ ಜಿಂದಾಬಾಂದ್‌ ಎಂದಿಲ್ಲವೆಂದು ವಾದಿಸಿದ್ದ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಿ; ಆರ್‌. ಅಶೋಕ್‌ ಸವಾಲು

ಜಾಗತಿಕ ಬೇಡಿಕೆ ಹೆಚ್ಚಿದೆ

ಭಾರತದ ಆಹಾರ, ಧಾನ್ಯ ಮತ್ತು ಉತ್ಪನ್ನಗಳಿಗೆ ಜಾಗತಿಕವಾಗಿ ಹೆಚ್ಚು ಬೇಡಿಕೆಯಿದೆ. ಹಾಗಾಗಿ ಕೃಷಿ ಉತ್ಪನ್ನಗಳ ಗುಣಮಟ್ಟದ ಸಂಸ್ಕರಣೆ, ಆಹಾರೋತ್ಪನ್ನಗಳ ಅಧಿಕ ಉತ್ಪಾದನೆಗೆ ಮುಂದಾದರೆ ಭಾರತ ಅತಿದೊಡ್ಡ ಮಾರುಕಟ್ಟೆಯಾಗಲಿದೆ ಎಂದು ತಿಳಿಸಿದರು.

ಆಹಾರ ಉತ್ಪನ್ನಗಳ ಸಂಸ್ಕರಣೆ, ಗುಣಮಟ್ಟ ಕಾಯ್ದುಕೊಳ್ಳುವುದು ಹಾಗೂ ಮಾರುಕಟ್ಟೆ ಕಂಡುಕೊಳ್ಳುವುದು ಅತಿ ಮುಖ್ಯವಾಗುತ್ತದೆ. ಭಾರತ ಇದರಲ್ಲಿ ಮುಂಚೂಣಿ ಪಾತ್ರ ವಹಿಸಿದೆ ಎಂದರು. ನಾವು ಸಾಕಷ್ಟು ಆಹಾರೋತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆ ಮಾಡಬಹುದು. ಅಂಥ ಅವಕಾಶ ನಮ್ಮ ರೈತರು ಮತ್ತು ಉತ್ಪಾದಕರಿಗೆ ಇದೆ. ಭವಿಷ್ಯದಲ್ಲಿ ನಾವು ಭಾರತೀಯ ಮಾರುಕಟ್ಟೆ ಹೊರತಾಗಿ ಜಗತ್ತಿಗೇ ಆಹಾರ ಪೂರೈಸಬಹುದು ಎಂದು ಹೇಳಿದರು.

ಆಹಾರ ಸುರಕ್ಷತೆಗೆ ಮೋದಿ ಸರ್ಕಾರದ ಬಲ

ಆಹಾರ ಭದ್ರತೆ, ಸುರಕ್ಷತೆ ಮತ್ತು ಪೌಷ್ಠಿಕಾಂಶಯುಕ್ತ ಆಹಾರೋತ್ಪಾದನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಒತ್ತು ನೀಡಿದ್ದಾರೆ ಎಂದು ಅವರು ತಿಳಿಸಿದರು. ನವೀಕರಿಸಬಹುದಾದ ಇಂಧನ ಮೂಲಗಳನ್ನು ಅಳವಡಿಸಿಕೊಳ್ಳುವ ಜತೆಗೆ, ತಂತ್ರಜ್ಞಾನ, ಹೊಸ ಆವಿಷ್ಕಾರಗಳ ಮೂಲಕ ಮೂಲಕ ನಮ್ಮ ಆಹಾರ ಸಂಸ್ಕರಣಾ ವಲಯವನ್ನು ವಿಸ್ತರಿಸಿಕೊಳ್ಳಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಈ ಸುದ್ದಿಯನ್ನೂ ಓದಿ | PF Withdrawal Limit: ಪಿಎಫ್‌ ಖಾತೆದಾರರಿಗೆ ಗುಡ್‌ನ್ಯೂಸ್‌; ವಿತ್‌ಡ್ರಾ ಮಿತಿ 1 ಲಕ್ಷ ರೂ.ಗೆ ಏರಿಕೆ

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್ ಪಾಸ್ವಾನ್ ಮತ್ತು ರಾಜ್ಯ ಸಚಿವ ರವ್ನೀತ್ ಸಿಂಗ್ ಬಿಟ್ಟು ಅವರೊಂದಿಗೆ “ವರ್ಲ್ಡ್ ಫುಡ್ ಇಂಡಿಯಾ 2024″ರ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಭಾಗವಹಿಸಿ, ವಿವಿಧ ಅಗತೋತ್ಪನ್ನಗಳ ಪ್ರದರ್ಶನ ವೀಕ್ಷಿಸಿದರು.