ಸಿಂಹವನ್ನು (Lion) ಕಂಡರೆ ಭಯ ಪಡುವವರು ಸಾಕಷ್ಟು ಮಂದಿ ಇದ್ದಾರೆ. ಇದಕ್ಕೆ ಕಾರಣ ಅದು ಮನುಷ್ಯನ ಮೇಲೆ ಯಾವಾಗ ಬೇಕಾದರೂ ದಾಳಿ ನಡೆಸಬಹುದು. ಆದರೆ ಇಲ್ಲೊಬ್ಬ ಪಂಜರದಲ್ಲಿ ಬಂದಿಯಾಗಿದ್ದ ಸಿಂಹವನ್ನು ಚುಡಾಯಿಸಲು ಹೋಗಿ ಅಪಾಯಕ್ಕೆ ಸಿಕ್ಕಿಹಾಕಿಕೊಂಡಿದ್ದಾನೆ. ಇದರ ವಿಡಿಯೋ (Viral Video) ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸಿಂಹವನ್ನು ಚುಡಾಯಿಸಲು ವ್ಯಕ್ತಿಯೊಬ್ಬ ಪ್ರಯತ್ನಿಸಿ ಕೊನೆಗೆ ತಾನೇ ಸಿಕ್ಕಿಬಿದ್ದಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ.
ಕಾಡು ಪ್ರಾಣಿಯನ್ನು ಚುಡಾಯಿಸುವುದು ಅಪಾಯಕಾರಿಯಾಗಿರುತ್ತದೆ ಎಂದು ಗೊತ್ತಿದ್ದರೂ ಕೆಲವರು ದುಸ್ಸಾಹಸಕ್ಕೆ ಕೈಹಾಕಲು ಹೋಗುತ್ತಾರೆ. ಇಲ್ಲಿ ಸಿಂಹ ಪಂಜರದೊಳಗೆ ಇದ್ದುದರಿಂದ ವ್ಯಕ್ತಿ ಪಾರಾಗಿದ್ದಾನೆ. ಇಲ್ಲವಾದರೆ ಅದು ಎಷ್ಟು ಅಪಾಯಕಾರಿಯಾಗಿತ್ತೆಂದು ಊಹಿಸಲೂ ಸಾಧ್ಯವಿಲ್ಲ.
ಸಿಂಹದ ಆವರಣದ ಹೊರಗೆ ನಿಂತಿದ್ದ ವ್ಯಕ್ತಿ ಸಿಂಹವನ್ನು ಮೊದಲು ಸ್ಪರ್ಶಿಸುತ್ತಾನೆ. ಆರಂಭದಲ್ಲಿ ಸುಮ್ಮನಿದ್ದ ಸಿಂಹಕ್ಕೆ ಬಳಿಕ ಆತ ಕೀಟಲೆ ನೀಡಲು ಪ್ರಾರಂಭಿಸಿದ್ದಾನೆ. ಇದರಿಂದ ಸಿಂಹ ಏಕಾಏಕಿ ಅವನ ಕೈ ಬೆರಳುಗಳನ್ನು ಬಾಯಲ್ಲಿ ಕಚ್ಚಿ ಹಿಡಿದಿದೆ. ಈ ದೃಶ್ಯ ಭಯಾನಕವಾಗಿ ಕಂಡು ಬರುತ್ತದೆ. ವ್ಯಕ್ತಿ ತನ್ನ ಕೈಯನ್ನು ಬಿಡಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಾನೆ. ಆದರೆ ಉದ್ರಿಕ್ತ ಸಿಂಹ ಬಿಡುವುದೇ ಇಲ್ಲ. ತೀವ್ರವಾದ ಹೋರಾಟದ ಅನಂತರ ಆತ ಸಿಂಹದ ಹಿಡಿತದಿಂದ ತಪ್ಪಿಸಿಕೊಳ್ಳುತ್ತಾನೆ.
— Second before disaster (@NeverteIImeodd) September 17, 2024
ಕಾಡು ಪ್ರಾಣಿಗಳು ಯಾವಾಗ ಬೇಕಾದರೂ ದಾಳಿ ನಡೆಸಬಹುದು. ಅವುಗಳು ಸುಮ್ಮನಿವೆ ಎಂದುಕೊಂಡು ಅವುಗಳಿಗೆ ಕೀಟಲೆ ಮಾಡಲು ಹೋದರೆ ಅವುಗಳು ಅನಿರೀಕ್ಷಿತ ದಾಳಿ ಮಾಡಬಹುದು. ಇದು ಪ್ರಾಣಕ್ಕೆ ಸಂಚಕಾರವಾಗಬಹುದು ಎಂದು ಕಾಮೆಂಟ್ ವಿಭಾಗದಲ್ಲಿ ಅನೇಕರು ಹೇಳಿದ್ದಾರೆ.
Mandya violence: ನಾಗಮಂಗಲ ಗಲಭೆಯ ನಷ್ಟದ ಪ್ರಮಾಣ 2.66 ಕೋಟಿ ರೂ.; ವ್ಯಾಪಾರಿಗಳು ಅತಂತ್ರ
ಬಂಧನದಲ್ಲಿರುವ ಪ್ರಾಣಿಗಳ ಮಿತಿಗಳು ಮತ್ತು ನಡವಳಿಕೆಗಳನ್ನು ಗೌರವಿಸುವಂತೆ ಅನೇಕರು ತಿಳಿಸಿದ್ದಾರೆ. ಕೆಲವರು ವ್ಯಕ್ತಿಯ ಅಜಾಗರೂಕತೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.