ಮೈಸೂರು: ಮೈಸೂರು ಅರಮನೆಯ (Mysore palace, Mysore news) ಆವರಣದಲ್ಲಿರುವ ದಸರಾ ಗಜಪಡೆಯ ಎರಡು ಆನೆಗಳು (Elephants fight) ನಿನ್ನೆ ರಾತ್ರಿ ಗುದ್ದಾಡಿಕೊಂಡು ಗೇಟ್ ಮುರಿದು ಹೊರಗೆ ಧಾವಿಸಿದವು. ಇದರಿಂದ ಬೆದರಿದ ಜನ ದಿಕ್ಕಾಪಾಲಾದರು. ಈ ವಿಡಿಯೋ ಈಗ ವೈರಲ್ (viral video) ಆಗುತ್ತಿದೆ.
ಮೈಸೂರು ಅರಮನೆಯ ಆವರಣದಲ್ಲಿರುವ ದಸರಾ ಗಜಪಡೆಯ ಕಂಜಮ್ ಹಾಗೂ ಧನಂಜಯ ಆನೆ ನಡುವೆ ನಿನ್ನೆ ರಾತ್ರಿ ಊಟ ಮಾಡುವಾಗ ಗಲಾಟೆ ನಡೆದಿದೆ. ಆಕ್ರೋಶಗೊಂಡ ಧನಂಜಯ ಆನೆ, ಕಂಜನ್ ಆನೆ ಮೇಲೆ ದಾಳಿಗೆ ಮುಂದಾಗಿದೆ. ಇದರಿಂದ ಬೆದರಿದ ಕಂಜನ್ ಆನೆ ಮಾವುತನಿಲ್ಲದೆ ಅರಮನೆಯಿಂದ ಆಚೆ ಓಡಿ ಬಂದಿದೆ.
Small chaos by Dasara elephants in Mysore.
— kaadraghu (@ragusmg2) September 20, 2024
VC : Yogesh Kumar and Sagar Suresh Insta
Need to stop using Elephants for Dasara celebrations. pic.twitter.com/K2VJ0jbpZs
ಆದರೂ ಬೆನ್ನು ಬಿಡದ ಧನಂಜಯ ಆನೆ, ಕಂಜನ್ ಆನೆಯನ್ನು ಅಟ್ಟಿಸಿಕೊಂಡು ಬಂದಿದೆ. ಇದರಿಂದ ಮತ್ತಷ್ಟು ಬೆದರಿದ ಕಂಜನ್ ಬ್ಯಾರಿಕೇಡ್ ತಳ್ಳಿಕೊಂಡು ಜನರ ಬಳಿ ಹೋಗಿದೆ. ಈ ವೇಳೆ ಧನಂಜಯ ಆನೆ ಮೇಲೆ ಇದ್ದ ಮಾವುತ ಧೈರ್ಯ ಹಾಗೂ ಸಮಯಪ್ರಜ್ಞೆ ಉಪಯೋಗಿಸಿ, ಕೋಪಗೊಂಡಿದ್ದ ಧನಂಜಯನನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಯಾವಾಗ ಧನಂಜಯ ಅಟ್ಟಾಡಿಸುವುದನ್ನು ನಿಲ್ಲಿಸಿತೋ ಬದುಕಿದೆಯಾ ಬಡ ಜೀವ ಅಂತ ಕಂಜನ್ ಆನೆ ಸಹ ನಿಂತುಕೊಂಡಿದೆ. ತಕ್ಷಣ ಕಂಜನ್ ಆನೆಯ ಬಳಿ ತೆರಳಿದ ಮಾವುತ ಕಂಜನ್ ಆನೆಯನ್ನು ಅರಮನೆ ಒಳಗೆ ಕರೆ ತಂದಿದ್ದಾನೆ. ಈ ಮೂಲಕ ಮಾವುತರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಬೆಟ್ಟದಂತೆ ಬಂದ ಸಮಸ್ಯೆ ಮಂಜಿನಂತೆ ಕರಗಿ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: IND vs BAN: ಅಜ್ಜಿಯ ಕ್ರಿಕೆಟ್ ಪ್ರೀತಿಗೆ ನೆಟ್ಟಿಗರು ಕ್ಲೀನ್ ಬೌಲ್ಡ್; ವಿಡಿಯೊ ವೈರಲ್