Sunday, 24th November 2024

Chikkaballapur News: ಸಂಸ್ಕೃತಭಾಷೆ ಭಾರತೀಯ ಭಾಷೆಗಳ ತಾಯಿಯಿದ್ದಂತೆ-ಅಶ್ವತ್ಥ್‌ ನಾರಾಯಣ ಅಭಿಮತ

ಚಿಕ್ಕಬಳ್ಳಾಪುರ: ಸಂಸ್ಕೃತ ಭಾಷೆ ಭಾರತೀಯ ಭಾಷೆಗಳ ತಾಯಿಯಿದ್ದಂತೆ ಎಂದು ಭಾರತೀ ವಿದ್ಯಾಸಂಸ್ಥೆ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಅಶ್ವತ್ಥನಾರಾಯಣ ತಿಳಿಸಿದರು.

ನಗರದ ಭಾರತಿ ವಿದ್ಯಾ ಸಂಸ್ಥೆ ಆವರಣರುವ ಇಂದು ಸಂಸ್ಕೃತ ಪಾಠಶಾಲೆಯಲ್ಲಿ “ಅಸ್ಮಾಕಂ ಸಂಸ್ಕೃತಂ” ಎಂಬ ಸಂಸ್ಕೃತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ವೇಳೆ ಮುಖ್ಯೋಪಾಧ್ಯಾಯ ಅಶ್ವಥ್ ನಾರಾಯಣ ಮಾತನಾಡಿ, ಅತ್ಯಂತ ಪ್ರಾಚೀನ ಭಾರತೀಯ ಭಾಷೆಯಾದ ಸಂಸ್ಕೃತ ಭಾಷೆ ಒಂದು ಕಾಲಕ್ಕೆ ದೇವಭಾಷೆಯಾಗಿತ್ತು. ಈಗ ಜನಸಮೂಹದ ಭಾಷೆಯಾಗಿದೆ. ಸಂಸ್ಕೃತ ಭಾಷೆ ಕಲಿಯುವುದರಿಂದ ಸ್ಮರಣ ಶಕ್ತಿ ಹೆಚ್ಚಾಗಲಿದೆ. ನಾಲಿಗೆ ಶುದ್ಧವಾಗಲಿದೆ ಎಂಬುದನ್ನು ಅರಿತು ನಮ್ಮ ಶಾಲೆಯಲ್ಲಿ ಪ್ರಾಥಮಿಕ ಹಂತದಿAದಲೇ ಸಂಸ್ಕೃತ ಭಾಷೆಯನ್ನು ಮಕ್ಕಳಿಗೆ ಬೋಧಿಸಲಾಗುತ್ತಿದೆ ಎಂದರು.

ಇದೇ ವೇಳೆ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಸಂಸ್ಕೃತ ಭಾಷೆಯ ಮಹತ್ವವನ್ನು  ತಿಳಿಸುವಂತ ರೀತಿಯಲ್ಲಿ ವಿದ್ಯಾರ್ಥಿಗಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ ಭಾಷಣ ಗೀತೆ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಸಂಸ್ಕೃತ ಭಾಷೆಯ ಮಹತ್ವವನ್ನು ಜನತೆಗೆ ತಿಳಿಸಲು ವಿದ್ಯಾರ್ಥಿಗಳು ನಗರದಲ್ಲಿ ಮೆರವಣಿಗೆ ಮೂಲಕ ಸಾಗಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಅಶ್ವತ್ ನಾರಾಯಣ್, ಮಾಧ್ಯಮಿಕ ವಿಭಾಗದ ಮುಖ್ಯೋಪಾಧ್ಯಾಯರು, ಸಂಸ್ಕೃತ ಪಾಠ ಶಾಲೆಯ ಮುಖ್ಯೋಪಾಧ್ಯಾಯರಾದ ರಂಗನಾಥ್ ಹಾಗೂ ಸಹ ಶಿಕ್ಷಕರಾದ ಪುಟ್ಟಸ್ವಾಮಿ ಇತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: POCSO Case: ಬಾಲಕಿಯರ ನಗ್ನ ಫೋಟೋ ತಂದುಕೊಡುವಂತೆ ಒತ್ತಾಯಿಸುತ್ತಿದ್ದ ಕಾಮುಕ ಶಿಕ್ಷಕ!