ಜರುಸಲೇಂ: ವೆಸ್ಟ್ ಬ್ಯಾಂಕ್ ರಾಮಲ್ಲಾ ಪ್ರದೇಶದಲ್ಲಿರುವ ಖತಾರ್ ಮೂಲದ ಸುದ್ದಿವಾಹಿನಿ ಅಲ್ ಜಜೀರಾ(Al Jazeera) ಕಚೇರಿಗೆ ಮೇಲೆ ರೇಡ್ ನಡೆಸಿದ ಇಸ್ರೇಲ್ ಸೇನೆ(Israeli Forces) 45 ದಿನಗಳೊಳಗಾಗಿ ವಾಹಿನಿ ಮುಚ್ಚುವಂತೆ ಆದೇಶ ಹೊರಡಿಸಿದೆ.
ಈ ಬಗ್ಗೆ ಅಲ್ ಜಜೀರಾ ಮಾಹಿತಿ ನೀಡಿದ್ದು, ಭಾರೀ ಶಸ್ತ್ರಸಜ್ಜಿತ ಮತ್ತು ಮುಖವಾಡ ಧರಿಸಿದ ಇಸ್ರೇಲಿ ಸೈನಿಕರು ಕಚೇರಿಯೊಳಗೆ ಪ್ರವೇಶಿಸಿದರು ಮತ್ತು ಭಾನುವಾರ ಮುಂಜಾನೆ ನೆಟ್‌ವರ್ಕ್‌ನ ವೆಸ್ಟ್ ಬ್ಯಾಂಕ್ ಬ್ಯೂರೋ ಮುಖ್ಯಸ್ಥ ವಾಲಿದ್ ಅಲ್-ಒಮರಿ ಅವರಿಗೆ ಸಂಸ್ಥೆಯನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ. ಈ ಆದೇಶ ಪತ್ರವನ್ನು ಅವರಿಗೆ ಇಸ್ರೇಲ್ ಯೋಧರು ಹಸ್ತಾಂತರಿಸಲಾಗಿದೆ.
45 ದಿನಗಳೊಳಗಾಗಿ ಅಲ್ ಜಜೀರಾ ಸಂಸ್ಥೆಯನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ. ಸಂಸ್ಥೆಯೊಳಗೆ ನುಗ್ಗಿದ ಯೋಧರು ಕ್ಯಾಮೆರಾಗಳನ್ನು ಎತ್ತಿಕೊಂಡು ಹೊರಡ್ತಾ ಇರಿ ಎಂದು ಯೋಧರು ಅಬ್ಬರಿಸಿದ್ದಾರೆ. ಈ ಕ್ಷಣವೇ ಕಚೇರಿಯಿಂದ ತೆರಳುವಂತೆ ಯೋಧರು ಒತ್ತಾಯಿಸಿದ್ದಾರೆ ಎಂದು ವಾಲಿದ್ ಅಲ್ ಒಮರಿ ತಿಳಿಸಿದ್ದಾರೆ. ಇನ್ನು ಕಳೆದ ತಿಂಗಳಷ್ಟೇ ಇಸ್ರೇಲ್ ಅಲ್ ಜಜೀರಾ ವಾಹಿನಿಯು ದೇಶದೊಳಗೆ ಕಾರ್ಯ ನಿರ್ವಹಿಸುವುದನ್ನು ನಿಷೇಧಿಸಿತ್ತು.
ಕಳೆದ ಮೇಯಲ್ಲಿ ಜೆಲುಸಲೇಂನಲ್ಲಿ ಹೊಟೇಲ್ ರೂಂವೊಂದನ್ನು ತನ್ನ ಕಚೇರಿಯನ್ನಾಗಿ ಬಳಸಿಕೊಳ್ಳುತ್ತಿದ್ದ ಅಲ್ ಜಜೀರಾ ಕಚೇರಿ ಮೇಲೆ ಸೇನೆ ರೇಡ್ ಮಾಡಿತ್ತು. ಅಲ್ ಜಜೀರಾ ಈ ನಿಷೇಧವನ್ನು ಖಂಡಿಸಿದ್ದು, ಇದು “ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕನ್ನು ಉಲ್ಲಂಘನೆಯಾಗಿದ್ದು, ಇದು ಅಪರಾಧ ಎಂದು ಹೇಳಿತ್ತು.
ಇಸ್ರೇಲ್ ಪತ್ರಕರ್ತನ ಹತ್ಯೆ:
ಇಸ್ರೇಲ್ ಕಳೆದ ತಿಂಗಳು ಗಾಜಾದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲ್ ಜಜೀರಾ ಪತ್ರಕರ್ತ ಇಸ್ಮಾಯಿಲ್ ಅಲ್-ಘೌಲ್ ಅವರನ್ನು ಕೊಂದಿರುವುದಾಗಿ ಹೇಳಿತ್ತು. ಅವರು ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ದಾಳಿಯಲ್ಲಿ ಭಾಗವಹಿಸಿದ್ದ ಹಮಾಸ್ ಕಾರ್ಯಕರ್ತ ಎಂದು ಹೇಳಿದರು. ಅಲ್-ಘೌಲ್ ಅವರು ಅಕ್ಟೋಬರ್ 7 ರ ದಾಳಿಯಲ್ಲಿ ಭಾಗವಹಿಸಿದ ಗಣ್ಯ ನುಖ್ಬಾ ಘಟಕದ ಸದಸ್ಯರಾಗಿದ್ದರು ಮತ್ತು ಕಾರ್ಯಾಚರಣೆಗಳನ್ನು ಹೇಗೆ ರೆಕಾರ್ಡ್ ಮಾಡಬೇಕೆಂದು ಹಮಾಸ್ ಕಾರ್ಯಕರ್ತರಿಗೆ ಸೂಚನೆ ನೀಡಿದರು ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಇಸ್ರೇಲಿ ಪಡೆಗಳ ಮೇಲಿನ ದಾಳಿಗಳನ್ನು ರೆಕಾರ್ಡಿಂಗ್ ಮತ್ತು ಪ್ರಚಾರ ಮಾಡುವಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂದು ಅದು ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿದ ಇಸ್ರೇಲ್ ಇದು ಆಧಾರವಿಲ್ಲದ ಆರೋಪ ಎಂದಿದೆ
ಈ ಸುದ್ದಿಯನ್ನೂ ಓದಿ: Israel Strikes Lebanon: ಲೆಬನಾನ್ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್- ಹೆಜ್ಬುಲ್ಲಾಗಳ 100 ರಾಕೆಟ್ ಲಾಂಚರ್‌ಗಳು ಧ್ವಂಸ