Monday, 25th November 2024

Arvind Kejriwal : ಮೋದಿಯನ್ನು ಟೀಕಿಸಿ, ಆರ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ಗೆ 5 ಪ್ರಶ್ನೆಗಳನ್ನುಕೇಳಿದ ಕೇಜ್ರಿವಾಲ್

Arvind Kejriwal

ನವದೆಹಲಿ: ನಾನಾ ಪಕ್ಷಗಳನ್ನು ಒಡೆಯಲು ಮತ್ತು ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ಸರ್ಕಾರಗಳನ್ನು ಉರುಳಿಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸುವ ಬಿಜೆಪಿಯ ರಾಜಕೀಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಒಪ್ಪುತ್ತದೆಯೇ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಪ್ರಶ್ನಸಿದ್ದಾರೆ. ಪ್ರಧಾನಿ ಮೋದಿಯನ್ನು ಟೀಕಿಸುವ ವೇಳೆ ಅವರು ಒಟ್ಟು ಐದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಡೆಲ್ಲಿಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ತಮ್ಮ ಮೊದಲ ‘ಜನತಾ ಕಿ ಅದಾಲತ್’ ಸಾರ್ವಜನಿಕ ಸಭೆಯಲ್ಲಿ ಕೇಜ್ರಿವಾಲ್ ಅವರು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಐದು ಪ್ರಶ್ನೆಗಳನ್ನು ಕೇಳಿದರು.

ಎಲ್ಲಾ ಗೌರವದೊಂದಿಗೆ, ನಾನು ಮೋಹನ್ ಭಾಗವತ್ ಜಿ ಅವರಿಗೆ ಐದು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ – ಪ್ರಧಾನಿ ಮೋದಿ ಪಕ್ಷಗಳನ್ನು ಒಡೆಯುತ್ತಿರುವ ರೀತಿ ಮತ್ತು ದೇಶಾದ್ಯಂತ ಸರ್ಕಾರಗಳನ್ನು ಉರುಳಿಸುತ್ತಿರುವ ರೀತಿ ಅಥವಾ ಇಡಿ ಮತ್ತು ಸಿಬಿಐನಿಂದ ಬೆದರಿಕೆ ಹಾಕುವುದು ಸರಿಯೇ? ಮೋದಿಜಿ ಅವರು ತಮ್ಮ ಪಕ್ಷಕ್ಕೆ ಅತ್ಯಂತ ಭ್ರಷ್ಟ ನಾಯಕರನ್ನುಸೇರಿಸಿಕೊಂಡಿದ್ದಾಋಎ. ಅವರನ್ನು ಅಂತಹ ರಾಜಕೀಯವನ್ನು ನೀವು ಒಪ್ಪುತ್ತೀರಾ? ಜಂತರ್ ಮಂತರ್ ನಲ್ಲಿ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

“ಬಿಜೆಪಿ ಆರ್‌ಎಸ್‌ನ ಗರ್ಭದಿಂದ ಹುಟ್ಟಿದೆ. ಬಿಜೆಪಿ ದಾರಿ ತಪ್ಪದಂತೆ ನೋಡಿಕೊಳ್ಳುವುದು ಆರ್‌ಎಸ್‌ಎಸ್‌ನ ಜವಾಬ್ದಾರಿಯಾಗಿದೆ. ನೀವು ಎಂದಾದರೂ ಪ್ರಧಾನಿ ಮೋದಿ ತಪ್ಪು ಕೆಲಸಗಳನ್ನು ಮಾಡುವುದನ್ನು ತಡೆದಿದ್ದೀರಾ? ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜೆ.ಪಿ.ನಡ್ಡಾ ಅವರು ನಮಗೆ ಆರ್‌ಎಸ್‌ಎಸ್‌ ಅಗತ್ಯವಿಲ್ಲ ಎಂದು ಹೇಳಿದ್ದರು. ಮಗು ತನ್ನ ತಾಯಿಗೆ ಅಸಮಾಧಾನ ತೋರಿಸುವಷ್ಟು ಬೆಳೆದಿದೆಯೇ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಸಂದರ್ಶನವೊಂದರಲ್ಲಿ ನಡ್ಡಾ ಅವರು “ಆರಂಭದಲ್ಲಿ ನಾವು ಅಮಮರ್ಥರಾಗಿದ್ದೆವು. ಆಗ ಆರ್‌ಎಸ್‌ಎಸ್‌ ಅಗತ್ಯವಿತ್ತು. ಇಂದು ನಾವು ಸಮರ್ಥರಾಗಿದ್ದೇವೆ. ಬಿಜೆಪಿ ತನ್ನನ್ನು ತಾನೇ ಮುನ್ನಡೆಸುತ್ತದೆ ಎಂದು ಹೇಳಿದ್ದರು ಎಂಬುದಾಗಿ ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: Delhi Chief Minister : ಪ್ರಮಾಣ ವಚನ ಸ್ವೀಕರಿಸಿದ ಡೆಲ್ಲಿ ನೂತನ ಸಿಎಂ ಆತಿಶಿ

ಮಾತೃ ಸಂಸ್ಥೆಗೆ ಪ್ರತಿರೋಧ ವ್ಯಕ್ತಪಡಿಸಿದಾಗ ನಿಮಗೆ ದುಃಖವಾಗಲಿಲ್ಲವೇ?; 75 ವರ್ಷವಾದ ನಾಯಕರು ನಿವೃತ್ತರಾಗುತ್ತಾರೆ ಎಂದು ನೀವು ಕಾನೂನು ಮಾಡಿದ್ದೀರಿ. ಈ ನಿಯಮ ಮೋದಿ ಅವರಿಗೆ ಅನ್ವಯಿಸುವುದಿಲ್ಲವೇ? ಅಡ್ವಾಣಿ ಅವರಿಗೆ ಏನು ಅನ್ವಯಿಸುತ್ತದೆಯೋ ಅದು ಮೋದಿ ಅವರಿಗೂ ಏಕೆ ಅನ್ವಯಿಸುವುದಿಲ್ಲ? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ದೇಶ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ: ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ಅರವಿಂದ್ ಕೇಜ್ರಿವಾಲ್ ಕಳೆದ ವಾರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು. ಬಳಿಕ ರಾಜೀನಾಮೆ ನೀಡಿ ಆತಿಶಿ ಅವರನ್ನು ಸಿಎಂ ಆಗಿ ನೇಮಕ ಮಾಡಿದ್ದರು.

ನಾನು ರಾಜಕೀಯಕ್ಕೆ ಸೇರಿದ್ದು ದೇಶ ಸೇವೆಗಾಗಿಯೇ ಹೊರತು ಅಧಿಕಾರ ಅಥವಾ ಹುದ್ದೆಯ ದುರಾಸೆಗಾಗಿ ಅಲ್ಲ ಎಂದು ಮಾಜಿ ಸಿಎಂ ಇದೇ ವೇಳೆ ಹೇಳಿದರು. ನನ್ನ ವಿರುದ್ಧದ ಭ್ರಷ್ಟಾಚಾರದ ಆರೋಪಗಳಿಂದ ನೋವಾಗಿದ್ದು ಅದಕ್ಕಾಗಿ ರಾಜೀನಾಮೆ ನೀಡಿದ್ದೇನೆ ಎಂದು ಕೇಜ್ರಿವಾಲ್ ಹೇಳಿದರು. ಕಳೆದ 10 ವರ್ಷಗಳಲ್ಲಿ ನಾನು ಗೌರವವನ್ನು ಗಳಿಸಿದ್ದೇನೆಯೇ ಹೊರತು ಹಣವಲ್ಲ ಎಂದು ಅವರು ಹೇಳಿದ್ದಾರೆ.

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆ ನನಗೆ ಅಗ್ನಿ ಪರೀಕ್ಷೆಯಾಗಿದೆ. ನಾನು ಅಪ್ರಾಮಾಣಿಕ ಎಂದು ಭಾವಿಸಿದರೆ ನನಗೆ ಮತ ಹಾಕಬೇಡಿ ಎಂದು ಅವರು ಜನರಿಗೆ ಹೇಳಿದರು.