ನವದೆಹಲಿ: ಜಮ್ಮು- ಕಾಶ್ಮೀರದಿಂದ ಕರ್ನಾಟಕಕ್ಕೆ ಸೇನಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ರೈಲು ಹಳಿಯನ್ನು ಸ್ಫೋಟಿಸಿದ (Train Blast in india) ಘಟನೆ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ರೈಲು ಸಾಗುತ್ತಿದ್ದ ಹಳಿಯ ಮೇಲೆ ಕನಿಷ್ಠ 10 ಡಿಟೋನೇಟರ್‌ಗಳು ಇಟ್ಟು ಬ್ಲಾಸ್ ಆಗುವಂತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ವಿಶೇಷ ರೈಲು ಬುಧವಾರ ಜಮ್ಮು ಮತ್ತು ಕಾಶ್ಮೀರದಿಂದ ಕರ್ನಾಟಕಕ್ಕೆ ಪ್ರಯಾಣಿಸುತ್ತಿದ್ದಾಗ ಸಗ್ಫಾಟಾ ರೈಲ್ವೆ ನಿಲ್ದಾಣದ ಬಳಿ ಸಂಚು ಮಾಡಿರುವುದು ಪತ್ತೆಯಾಗಿದೆ.
ಡಿಟೋನೇಟರ್‌ಗಳ ಮೇಲೆ ರೈಲು ಹಾದುಹೋಗುತ್ತಿದ್ದಂತೆ ಉಂಟಾದ ಸ್ಫೋಟದಿಂದಾಗಿ ಲೋಕೋಪೈಲೆಟ್ ಎಚ್ಚೆತ್ತು ತಕ್ಷಣ ರೈಲನ್ನು ನಿಲ್ಲಿಸಿದದ್ದರು. ನಂತರ ಅವರು ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ರೈಲ್ವೆ ಮತ್ತು ಸ್ಥಳೀಯ ಪೊಲೀಸರ ಹಿರಿಯ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶದ ರೈಲ್ವೆ ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆ
ಉತ್ತರ ಪ್ರದೇಶದ ಕಾನ್ಪುರದ ಪ್ರೇಮಪುರ ರೈಲ್ವೆ ನಿಲ್ದಾಣದ ಬಳಿ ಹಳಿಗಳ ಮೇಲೆ ಖಾಲಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ. ಸಿಲಿಂಡರ್ ಕಂಡ ತಕ್ಷಣ ಗೂಡ್ಸ್ ರೈಲು ಲೋಕೋ ಪೈಲಟ್ ರೈಲನ್ನು ತುರ್ತು ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ.
ಇದನ್ನೂ ಓದಿ: Arvind Kejriwal: ಶೀಘ್ರವೇ ಕೇಜ್ರಿವಾಲ್‌ಗೆ ಸರ್ಕಾರಿ ಬಂಗಲೆ ನೀಡಿ- ಕೇಂದ್ರಕ್ಕೆ ಆಪ್ ಡಿಮ್ಯಾಂಡ್
ಕಾನ್ಪುರದಿಂದ ಪ್ರಯಾಗ್ರಾಜ್ಗೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ಸಂಭವಿಸಿದೆ. ಬೆಳಿಗ್ಗೆ 8: 10 ಕ್ಕೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಸಿಲಿಂಡರ್ ಐದು ಕಿಲೋಗ್ರಾಂ ಸಾಮರ್ಥ್ಯ ಹೊಂದಿತ್ತು. ಆದರೆ ಅದು ಖಾಲಿಯಾಗಿತ್ತು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಸೆಪ್ಟೆಂಬರ್ 8 ರಂದು ಪ್ರಯಾಗ್‌ರಾಜ್‌ನಿಂದ ಭಿವಾನಿ ಕಡೆಗೆ ತೆರಳುತ್ತಿದ್ದ ಕಾಳಿಂದಿ ಎಕ್‌ಪ್ರೆಸ್ ಹಳಿಗಳ ಮೇಲೆ ಎಲ್‌ಪಿಸಿ ಸಿಲಿಂಡರ್ ಇರಿಸಿ ದುರ್ಘಟನೆ ನಡೆಸಲು ಯತ್ನಿಸಲಾಗಿತ್ತು.