Sunday, 22nd September 2024

Yogi Adityanath : ಹಳೆ ಪಾರ್ಟಿ ಕಾಂಗ್ರೆಸ್‌ ಬಾಬರಿ ಮಸೀದಿಯಷ್ಟು ಶಿಥಿಲಗೊಂಡಿದೆ ಎಂದು ಲೇವಡಿ ಮಾಡಿದ ಯೋಗಿ

Yogi Adityanath

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಭಾನುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವು ಅಯೋಧ್ಯೆಯಲ್ಲಿ ಒಂದು ಕಾಲದಲ್ಲಿ ಬಾಬರಿ ಮಸೀದಿ ಶಿಥಿಲಗೊಂಡಷ್ಟೇ ದುರ್ಬಲವಾಗಿದೆ ಎಂದು ಹೇಳಿದ್ದಾರೆ. ಹರಿಯಾಣದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕಾಂಗ್ರೆಸ್ ಹಾಗೂ ರಾಹುಲ್ ವಿರುದ್ಧ ಟೀಕಾಪ್ರಹಾರ ಮಾಡಿದರು.

ಇಂದು ಕಾಂಗ್ರೆಸ್‌ ಸಂಪೂರ್ಣವಾಗಿ ದುರ್ಬಲಗೊಂಡಿದೆ. ಎಷ್ಟಿದೆ ಎಂದರೆ ಅಯೋಧ್ಯೆಯಲ್ಲಿ ಬಾಬರಿ (ಮಸೀದಿ) ರಚನೆಯಂತೆ ಶಿಥಿಲಗೊಂಡಿದೆ. ರಾಮ ಭಕ್ತರು ಅದನ್ನು ಒಂದೇ ಏಟಿಗೆ ಉರುಳಿಸಿ ಶಾಶ್ವತವಾಗಿ ನೆಲಸಮ ಮಾಡಿದ್ದಾರೆ. ಆ ಗುಲಾಮಗಿರಿಯ ರಚನೆಯನ್ನು ನೆಲಸಮಗೊಳಿಸಲಾಗಿದೆ. ಜತೆಗೆ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು” ಎಂದು ಆದಿತ್ಯನಾಥ್

ಸಿಖ್ಖರನ್ನು ನಿಂದಿಸಿದ ರಾಹುಲ್‌

ಜನರು ಏಕತೆಯಿಂದ ಇರಬೇಕು ಎಂದು ಕರೆಕೊಟ್ಟ ಯೋಗಿ, ಕಾಂಗ್ರೆಸ್‌ನವರು ಜಾತಿ ರಾಜಕಾರಣ ಮಾಡುವ ಮೂಲಕ ಅವರು ನಿಮ್ಮನ್ನು ವಿಭಜಿಸಲು ಬಯಸುತ್ತಾರೆ. ಅದನ್ನು ನಂಬಬಾರದು. ಅದೇ ರೀತಿ ರಾಹುಲ್ ಗಾಂಧಿ ಅಮೆರಿಕಕ್ಕೆ ತೆರೆಳಿ ಸಿಖ್ಖರ ವಿರುದ್ಧವೇ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ರಾಹುಲ್ ಗಾಂಧಿ ವಿದೇಶದಲ್ಲಿ ಸಿಖ್ಖರನ್ನು ನಿಂದಿಸುತ್ತಿದ್ದರು. ಅವರು ಭಾರತವನ್ನು ದೂಷಿಸುತ್ತಿದ್ದರು. ರಾಹುಲ್ ಗಾಂಧಿ ವಿದೇಶಕ್ಕೆ ಭೇಟಿ ನೀಡಿದಾಗ, ಅವರು ದೇಶದ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಪ್ರಶ್ನೆ ಎತ್ತುತ್ತಾರೆ. ದೇಶದ ನಂಬಿಕೆಯ ಮೇಲೆ ದಾಳಿ ಮಾಡುತ್ತಾರೆ” ಎಂದು ಯೋಗಿ ಹೇಳಿದರು.

ಇದನ್ನೂ ಓದಿ: Arvind Kejriwal: ಶೀಘ್ರವೇ ಕೇಜ್ರಿವಾಲ್‌ಗೆ ಸರ್ಕಾರಿ ಬಂಗಲೆ ನೀಡಿ- ಕೇಂದ್ರಕ್ಕೆ ಆಪ್‌ ಡಿಮ್ಯಾಂಡ್‌

ದೇಶವನ್ನು ದೂಷಿಸುವ ಯಾವುದೇ ಅವಕಾಶವನ್ನು ಕಾಂಗ್ರೆಸ್‌ನವರು ಕಳೆದುಕೊಳ್ಳುವುದಿಲ್ಲ. ದೇಶದ ಭದ್ರತೆಯೊಂದಿಗೆ ಆಟವಾಡುವ ಈ ಜನರು ಭಾರತದ ಭದ್ರತೆ ಮತ್ತು ಸಮೃದ್ಧಿಗಾಗಿ ಯಾವುದೇ ಪ್ರಯತ್ನ ಮಾಡುವುದಿಲ್ಲ. ಕಾಂಗ್ರೆಸ್ ಈ ಅಪ್ರಾಮಾಣಿಕತೆಯನ್ನು ಆಶ್ರಯಿಸಿದೆ” ಎಂದು ಆದಿತ್ಯನಾಥ್ ಹೇಳಿದರು.

ಸ್ವಾತಂತ್ರ್ಯದ ನಂತರ ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಅವರು ಸಮಾಜದ ಜನರು ತಮ್ಮೊಳಗೆ ಜಗಳವಾಡುವಂತೆ ಮಾಡಿದರು ಎಂದು ಯೋಗಿ ದೂಷಿಸಿದರು.

ಕಾಂಗ್ರೆಸ್ ದೇಶವನ್ನು ದೀರ್ಘಕಾಲ ಆಳಿದರೂ, ಅವರು ಒಂದು ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ, ಸಂತ ರವಿದಾಸ್ ಅಥವಾ ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಇಡಲಿಲ್ಲ. ಅವರು ತಮ್ಮ ಕುಟುಂಬದ ಹೆಸರನ್ನು ಇಡುತ್ತಿದ್ದರು ಎಂದು ಯೋಗಿ ಹೇಳಿದರು.