ಬಾಂಗ್ಲಾದೇಶ (Bangaldesh) ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ. 90 ವರ್ಷಗಳ ತನ್ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಸೋಲಿಗಿಂತ ಹೆಚ್ಚಿನ ಗೆಲುವುಗಳನ್ನು ದಾಖಲಿಸಿದೆ.
ಟೆಸ್ಟ್ ಜಗತ್ತಿಗೆ ಕಾಲಿಟ್ಟ ಆರಂಭದಲ್ಲಿ ಭಾರತ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಅಂದಿನ ಬಲಾಢ್ಯ ತಂಡಗಳಾದ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್‌ಗಳ ವಿರುದ್ಧ ಗೆಲ್ಲುವುದೇ ದೊಡ್ಡ ಕನಸಾಗಿತ್ತು. ವಿಶೇಷ ಎಂದರೆ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ 25 ಪಂದ್ಯಗಳ ಬಳಿಕ ಚೆನ್ನೈನ ಇದೇ ಚೆಪಾಕ್ ಸ್ಟೇಡಿಯಂನಲ್ಲಿ 1952ರಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಅಂತರದಲ್ಲಿ ಮೊದಲ ಗೆಲುವು ದಾಖಲಿಸಿತ್ತು.
ಅದೇ ವರ್ಷದ ನವೆಂಬರ್‌ನಲ್ಲಿ ಪಾಕಿಸ್ತಾನದ ವಿರುದ್ಧ 2-1 ಅಂತರದಲ್ಲಿ ಗೆದ್ದು ಭಾರತ ಮೊದಲ ಸರಣಿ ಜಯ ಕಂಡಿತ್ತು. ಆದರೆ ವಿದೇಶಿ ನೆಲದಲ್ಲಿ ಭಾರತ ಮೊದಲ ಗೆಲುವು ಮತ್ತು ಸರಣಿ ಜಯ ದಾಖಲಿಸಲು ಇನ್ನೂ 16 ವರ್ಷ ಕಾಯಬೇಕಾಯಿತು. ನಂತರ, 1983ರಲ್ಲಿ ಕಪಿಲ್‌ದೇವ್ ನೇತೃತ್ವದಲ್ಲಿ ಏಕದಿನ ವಿಶ್ವಕಪ್ 100ನೇ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು. ಆಗ ಭಾರತ 432 ಪಂದ್ಯಗಳನ್ನು ಆಡಿದ್ದು, ಗೆಲುವಿನ ಸರಾಸರಿ ಶೇ.23.14ರಷ್ಟಿತ್ತು.
ಮುಂದಿನ 15 ವರ್ಷಗಳಲ್ಲಿ, ಭಾರತವು 147 ಪಂದ್ಯಗಳನ್ನು ಆಡಿದ್ದು, ಇವುಗಳಲ್ಲಿ 78ನ್ನು ಗೆದ್ದಿದೆ. 2000ನೇ ಇಸವಿ ಯ ಬಳಿಕ ಗಂಗೂಲಿ, ತೆಂಡೂಲ್ಕರ್, ದ್ರಾವಿಡ್, ಕುಂಬ್ಳೆ ಮುಂತಾದ ದಿಗ್ಗಜರ ನೆರವಿನಿಂದ ಭಾರತ ವಿದೇಶಿ ನೆಲ ದಲ್ಲೂ ಗೆಲುವು ದಾಖಲಿಸಲಾರಂಭಿಸಿತು. ಧೋನಿ, ಕೊಹ್ಲಿ ಮುಂತಾದ ಪ್ರತಿಭಾನ್ವಿತರ ತಂಡ ಗೆಲುವಿನ ಪರಂಪರೆ ಯನ್ನು ಮುಂದುವರಿಸಿಕೊಂಡು ಬಂದ ಕಾರಣ ನಮ್ಮ ಗೆಲುವಿನ ಸರಪಳಿ ಈಗ ಉದ್ದವಾಗಿದೆ. ಈ ಗೆಲುವಿನ ಓಟ ಮುಂದುವರಿಯಲಿ ಎನ್ನುವುದು ಕೋಟ್ಯಂತರ ಭಾರತೀಯರ ಹಾರೈಕೆ.
ಇದನ್ನೂ ಓದಿ: Bangladesh Cricket Team : ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡವನ್ನು ಕ್ಲೀನ್ ಸ್ವೀಪ್ ಮಾಡಿ ಚರಿತ್ರೆ ಬರೆದ ಬಾಂಗ್ಲಾದೇಶ