ಬೆಂಗಳೂರು: ನಿವೃತ್ತರ ವೇತನದ ತಾರಮ್ಯವನ್ನು ನಿವಾರಿಸಲು ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತಿ ವೇತನದಾರರು ಮತ್ತು ನಿವೃತ್ತಿ ಸಂಸ್ಥೆಗಳ ಸಮನ್ವಯ ಸಮಿತಿಯಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿಂದು ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಿಬಿಪಿಆರ್.ಒ ಜಂಟಿ ಸಂಚಾಲಕರಾದ ಕೆ. ವೇದವ್ಯಾಸ ಆಚಾರ್ಯ ಎಐಬಿಪಿಆರ್ಸಿ ಸಲಹೆಗಾರ ಜಿ.ಡಿ ನದಾಫ್, ಸಿಬಿಪಿಆರ್ಒ ನ ಪದಾಧಿಕಾರಿಗಳಾದ ದತ್ತಾತ್ರಿ ನಾಡಿಗೇರ್, ಎಸ್.ಪಿ ರಾವ್, ಸಿ. ಶಿವಪ್ರಕಾಶ್, ಎಸ್. ನಾಗರಾಜ, ನಾಗದಡ್ಡಾಯುದಮ್, ಶಿವರಾಮ್ ಆಳ್ವ, ಜೆ.ಎಸ್ ಜಗದೀಶ್, ಹಾಗೂ ಸಿಬಿಪಿಆರ್ಒ ರಾಜ್ಯ ಘಟಕದ ಸಂಚಾಲಕರಾದ ಎ.ಎನ್. ಕೃಷ್ಣಮೂರ್ತಿ ಅವರು ಭಾಗವಹಿಸಿ ಕೇಂದ್ರ ಸರ್ಕಾರ ವೇತನ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿದ ಸಂದರ್ಭಗಳಲ್ಲಿ ಪಿಂಚಣಿದಾರರಿಗೆ ಅನ್ಯಾಯವಾಗುತ್ತಿದೆ.
ನಿವೃತ್ತರ ಪಿಂಚಣಿಯನ್ನು ಇಲ್ಲಿಯವರೆಗೆ ನವೀಕರಿಸಿಲ್ಲ. ಮೂಲ ಪಿಂಚಣಿಯನ್ನು ಆಯಾ ಬ್ಯಾಂಕ್ ನಿವೃತ್ತರು ನಿವೃತ್ತರಾದ ದಿನಾಂಕದಿAದ ಸ್ಥಗಿತಗೊಳಿಸಲಾಗಿದೆ. ಬ್ಯಾಂಕ್ ಆಡಳಿತ ಮಂಡಳಿ ಒಕ್ಕೂಟವಾದ ಭಾರತೀಯ ಬ್ಯಾಂಕುಗಳ ಸಂಘವು, ಬ್ಯಾಂಕ್ ನಿವೃತ್ತರ ನ್ಯಾಯಯುತ ಮತ್ತು ನ್ಯಾಯಯುತ ಬೇಡಿಕೆಗಳನ್ನು ಪರಿಗಣಿಸಲು ನಿರಾಕರಿಸುತ್ತಿದೆ. ಕೇಂದ್ರ ಸರ್ಕಾರ ಕೂಡ ದಿವ್ಯ ಮೌನ ವಹಿಸಿದೆ ಎಐಬಿಪಿಆರ್ಸಿ ರಾಜ್ಯ ಘಟಕ ಅಧ್ಯಕ್ಷರಾದ ಎಂ.ಆರ್. ಗೋಪಿನಾಥ್ ರಾವ್ ಅವರು ಹೇಳಿದರು.
ಉದ್ಯೋಗಗಳು ಮತ್ತು ಹಿರಿಯ ನಾಗರಿಕರಿಗೆ ಕೈಗೆಟುಕುವ ಆರೋಗ್ಯ ವಿಮೆ ನೀತಿಯನ್ನು ಜಾರಿ ಮಾಡಬೇಕು. ಆರೋಗ್ಯ ವಿಮೆ ಕಂತಿಗೆ ಜಿ.ಎಸ್.ಟಿ ಹೆಚ್ಚಿಸಿರುವುದರಿಂದ ಭಾರೀ ಅನ್ಯಾವಾಗುತ್ತಿದ್ದು, ನಿವೃತ್ತರಿಗೆ ಜಿಎಸ್ಟಿ ವಿನಾಯಿತಿ ನೀಡಬೇಕು. ವೇತನ ಮತ್ತು ಗ್ರಾಚ್ಯುಟಿ ಲೆಕ್ಕಾಚಾರಕ್ಕಾಗಿ ವಿಶೇಷ ಭತ್ಯೆಯನ್ನು ಪರಿಗಣಿಸಬೇಕು.
ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತ ಸಂಸ್ಥೆಗಳೊAದಿಗೆ ಸಮಾಲೋಚನೆ ನಡೆಸಬೇಕು ಎಂದು ಆಗ್ರಹಿಸಿದರು.