ತುಮಕೂರು: ಮಹಿಳೆ ಕುಟುಂಬದ ಆರೋಗ್ಯದ ಜೊತೆಗೆ ತನ್ನ ದೇಹದಲ್ಲಾಗುವ ಬದಲಾವಣೆಗಳು ಹಾಗೂ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ಅವರು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬ್ರೆಸ್ಟ್ ಹಾಗೂ ಬ್ರೆಸ್ಟ್ ಫೀಡಿಂಗ್ ಕಮಿಟಿ, ಆನ್ಕೋ ಕಮಿಟಿ, ಕೆಎಸ್‌ಒಜಿಎ, ಟಿಎಸ್‌ಒಜಿ ಹಾಗೂ ತುಮಕೂರು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ಸೊಸೈಟಿ ವತಿಯಿಂದ ನಡೆದ ಬ್ರೆಸ್ಟ್‌ಕಾನ್ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆನಾರೋಗ್ಯ ಕರ ಅಭ್ಯಾಸಗಳು ಹಾಗೂ ಜೀವನಶೈಲಿಯಿಂದ ಮಹಿಳೆಯರಲ್ಲಿ ಬ್ರೆಸ್ಟ್ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿದ್ದು ಮಹಿಳೆ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಇಡೀ ಸಮಾಜದ ಆರೋಗ್ಯ ಸುಧಾರಿಸುತ್ತದೆ ಎಂದು ಕರೆ ನೀಡಿದರು.
ಎಸ್‌ಎಫ್‌ಬಿಸಿ ಅಧ್ಯಕ್ಷೆ ಡಾ.ಚಾರುಲತಾ ಬಪಾಯಿ ಮಾತನಾಡಿ ಗಟ್ಟಿಯಾದ ಸ್ತನಗಳು, ಸ್ತನಗಳ ತೊಟ್ಟುಗಳಲ್ಲಿ ಸ್ರವಿಸುವಿಕೆ, ಅಸಮತೂಕ ಮುಂತಾದ ಲಕ್ಷಣಗಳು ಕಂಡು ಬಂದಾಗ ಮಹಿಳೆ ಕೂಡಲೇ ಹತ್ತಿರದ ಸ್ತ್ರೀರೋಗ ತಜ್ಞರನ್ನ ಭೇಟಿ ಮಾಡುವುದು ಒಳಿತು. ಸ್ತನಗಳಲ್ಲಿ ಗಂಟು ಕಂಡು ಬಂದು ತೀವ್ರ ನೋವಿದ್ದರೂ ಕೂಡ ಆತಂಕಕಾರಿಯಾಗಿದ್ದು ಕ್ಯಾನ್ಸರ್ ತರುವ ಅಪಾಯವನ್ನೂ ಹೆಚ್ಚಿಸುವ ಸಾಧ್ಯತೆಯಿದೆ ಎಂದರು.
ಡಾ.ಲಿಲಿತಾ, ಡಾ.ಸುಪ್ರಾ, ಡಾ.ರವಿಶಂಕರ್, ಡಾ.ಆನಂದ್, ಡಾ.ಭಾರತಿ ರಾಜಶೇಖರ್ ಬ್ರೆಸ್ಟ್ ಸಮಸ್ಯೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಕೆಎಸ್‌ಓಜಿಎ ಭಾವಿ ಅಧ್ಯಕ್ಷ ಡಾ.ದುರ್ಗಾದಾಸ್ ಅಸ್ರನ್ನ, ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾದ ಡಾ.ರೇಖಾ ಗುರುಮೂರ್ತಿ, ಡಾ.ರಚನಾ, ಡಾ.ಹೇಮಾ, ಸೇರಿದಂತೆ ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಜರಿದ್ದರು.
ಇದನ್ನೂ ಓದಿ: Indian Railway : ಎಕ್ಸ್‌ಪ್ರೆಸ್ ರೈಲಿನಲ್ಲಿ ಹಾವು ಪ್ರತ್ಯಕ್ಷ, ರೈಲ್ವೆ ವಿರುದ್ಧ ನೆಟ್ಟಿಗರ ಆಕ್ರೋಶ