Monday, 28th October 2024

Ganesh Visarjan: ಅದ್ದೂರಿ ಮೆರವಣಿಗೆ ಮೂಲಕ ಬೈಪಾಸ್ ಗಣಪತಿ ವಿಸರ್ಜನೆ

ಗೌರಿಬಿದನೂರು: ನಗರದಲ್ಲಿ ಪ್ರತಿಷ್ಠಾಪಿಸಿದ ಬೈಪಾಸ್ ಗಣೇಶ ಮೂರ್ತಿಯನ್ನು ಸಾವಿರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಅತ್ಯಂತ ಸಂಭ್ರಮದಿಂದ ವಿಸರ್ಜನೆ ಮಾಡಲಾಯಿತು.

ಗೌರಿಬಿದನೂರು ನಗರ ಹೊರವಲಯದಲ್ಲಿ ನಿರಂತರವಾಗಿ ೨೧ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಬೈಪಾಸ್ ಗಣೇಶವನ್ನು ಈ ಬಾರಿ ೧೬ ದಿನಗಳ ಪ್ರತಿಷ್ಟಾಪಿಸಿ ನಾನಾಪೂಜೆಗಳ ಮೂಲಕ ಸಂತಷ್ಟಗೊಳಿಸಲಾಯಿತು. ಈ ಬಾರಿ ಶ್ರೀ ಕಾಲ ಮಹಾರುದ್ರ ಗಣಪತಿಯನ್ನು ಪ್ರತಿಷ್ಟಾಪಿಸಲಾಗಿದ್ದು ಪ್ರತಿ ದಿನ ಮುಂಜಾನೆ ಹೋಮ ಹವನ ಹಾಗೂ ಪೂಜೆ ಪುನಸ್ಕಾರಗಳು ದೇವತಾ ಕಾರ್ಯಕ್ರಮಗಳು ನಂತರ ಸಂಜೆ ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ನಾಡಿನ ಹೆಸರಾದ ಕಲಾವಿದರಾದಂತಹ ಕರೆತಂದು ಆಯೋಜನೆ ಮಾಡಲಾಗುತ್ತಿತ್ತು.

ಜೊತೆಗೆ ನಾಡಿನ ಗಣ್ಯರಲ್ಲಿ ವೇದಿಕೆಗೆ ಕರೆತರಲಾಗುತ್ತಿತ್ತು. ಈ ಬಾರಿ ರಾಮಮಂದಿರ ಉಸ್ತುವಾರಿಗಳು ವಿಶ್ವ ಹಿಂದೂ ಪರಿಷತ್ ರಾಷ್ಟಿçÃಯ ಪರಿಷತ್‌ನ ಗೋಪಾಲ್ ಜೀ, ಹೈಕೋರ್ಟ್ನ ವಿಶ್ರಾಂತಿ ಮೂರ್ತಿಗಳಾದ ಎನ್.ಕುಮಾರ್, ಹಿರಿಯ ಕೆಎಎಸ್ ಅಧಿಕಾರಿ ವರಪ್ರಸಾದ್ ರೆಡ್ಡಿ, ಸಂಸದ ಡಾ. ಕೆ ಸುಧಾಕರ್, ಶಾಸಕರಾದ ಕೆ.ಎಚ್. ಪುಟ್ಟಸ್ವಾಮಿಗೌಡ ಎಸ್.ಆರ್.ವಿಶ್ವನಾಥ್ ಹಾಗೂ ಇನ್ನಿತರರು ಆಗಮಿಸಿ ಬೈಪಾಸ್ ಗಣೇಶನ ಆಶೀರ್ವಾದ ಪಡೆದುಕೊಂಡರು.

ಭಾನುವಾರ ಮಧ್ಯಾಹ್ನ ೧೨ ಗಂಟೆಗೆ ಪ್ರಾರಂಭವಾದ ಗಣೇಶನ ವಿಸರ್ಜನೆ ಮೆರವಣಿಗೆಯಲ್ಲಿ ಹೆಸರಾಂತ ಜಾನಪದ ಕಲಾ ತಂಡಗಳು ಭಾಗವಹಿಸಿದವು. ಬಾರಿ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಬೈಪಾಸ್ ದರ್ಗಾ ಮುಸ್ಲಿಂ ಬಾಂಧವರೊಂದಿಗೆ ನೀರು ಮತ್ತು ಜ್ಯೂಸ್ ವಿತರಿಸಿ ಭಾವೈಕ್ಯತೆ ಮೆರೆದರು.

ವಿನಾಯಕ ವೃತ್ತ ಕನಕದಾಸರ ವೃತ್ತ ಸುಮಂಗಲಿ ಬಡಾವಣೆ, ಗಾಂಧಿ ವೃತ್ತ ಡಾ.ಅಂಬೇಡ್ಕರ್ ವೃತ್ತ ನಾಗರೆಡ್ಡಿ ಸರ್ಕಲ್ ನಾಗಪ್ಪ ಬ್ಲಾಕ್ ಮೂಲಕ ಸಾಗಿ ಬೈಪಾಸ್ ರಸ್ತೆ ಮೂಲಕದ ಮೂಗನಹಳ್ಳಿ ತಡದಲ್ಲಿ ನಿರ್ಮಿಸಲಾದ ನೀರಿನ ಕೊಳದಲ್ಲಿ ಗಣೇಶನ ಮೂರ್ತಿಯನ್ನು ರಾತ್ರಿ ೮:೩೦ಕ್ಕೆ ಶ್ರದ್ಧಾ ಭಕ್ತಿಯಿಂದ ವಿಸರ್ಜನೆ ಮಾಡಲಾಯಿತು.

ಇದಕ್ಕೂ ಮುನ್ನ ವಿಸರ್ಜನೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಯುವಕ ಯುವತಿಯರು ಭಾಗವಹಿಸಿ ಡಿಜೆ ಹಾಡುಗಳು ಲಯಬದ್ಧವಾಗಿ ಹೆಜ್ಜೆ ಹಾಕುತ್ತಾ ಘೋಷಣೆಗಳನ್ನು ಕೂಗುತ್ತಿದ್ದರು.

ಇದೇ ವೇಳೆ ನಗರ ಕೇಸರಿ ಬಾವುಟಗಳಿಂದ ಕಂಗೊಳಿಸುತ್ತಿತ್ತು. ವಿಸರ್ಜನೆ ವೇಳೆಯಲ್ಲಿ ಶಾಸಕ ಕೆ.ಎಚ್.ಪುಟ್ಟ ಸ್ವಾಮಿಗೌಡ. ತಹಶೀಲ್ದಾರ್ ಮಹೇಶ್ ಎಸ್ ಪತ್ರಿ, ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ್ ಹಾಗೂ ಉಪಾಧ್ಯಕ್ಷ ಫರೀದ್, ನಗರಸಭೆ ಆಯುಕ್ತ ಗೀತಾ, ಶಾಸಕ ಆಪ್ತರಾದ ಶ್ರೀನಿವಾಸ ಗೌಡ, ಬೈಪಾಸ್ ರವಿ, ಶಿವಾರೆಡ್ಡಿ, ನವೀನ್, ಸ್ವಾಗತ್, ಗಣೇಶ್, ನಿಖಿಲ್, ಮಾರ್ಕೆಟ್ ಮೋಹನ್, ಛತ್ರಂ ಶ್ರೀಧರ್, ಹರೀಶ್, ಲಕ್ಷ್ಮೀನಾರಾಯಣ, ಪಟೇಲ್, ಮುರಳಿ, ಹೋಟೆಲ್ ರಮೇಶ್, ಅನಿಲ್, ನದಿ ಗಡ್ಡೆ ಪರಮೇಶ್, ಆದಿತ್ಯ, ಮಂಜುನಾಥ್, ಪ್ರಭಾಕರ್, ಎಬಿವಿಪಿ ಚಂದ್ರಶೇಖರ್ ಹಾಗೂ ಇನ್ನೂ ಮುಂತಾದ ಉಪಸ್ಥಿತರಿದ್ದರು.

ಇದನ್ನೂ ಓದಿ: Chikkaballapur News: ಮಕ್ಕಳಿಗೆ ಮೂಲ ಸಂಸ್ಕೃತಿ ಕಲಿಸಿ ಸ್ವಾಭಿಮಾನದ ಬದುಕು ಕಟ್ಟಲು ಪ್ರೆರೇಪಿಸಿ-ಪ್ರಾದೇಶಿಕ ನಿರ್ದೇಶಕ ಸೀನಪ್ಪ