Monday, 6th January 2025

93ನೇ ವಸಂತಕ್ಕೆ ಕಾಲಿಟ್ಟ ಬಿಜೆಪಿ ’ಭೀಷ್ಮ’ ಎಲ್‌ಕೆ ಅಡ್ಡಾಣಿ

ನವದೆಹಲಿ : ಬಿಜೆಪಿ ಭೀಷ್ಮ ಹಿರಿಯ ನಾಯಕ ಎಲ್‌ಕೆ ಅಡ್ಡಾಣಿ ಭಾನುವಾರ 93ನೇ ವಸಂತಕ್ಕೆ ಕಾಲಿಟ್ಟಿದ್ದು, ಬಿಜೆಪಿಯ ಸಂಸ್ಥಾಪಕ ನಾಯಕನ ಜನ್ಮದಿನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಬಿಜೆಪಿಯನ್ನು ಜನಮಾನಸದ ಪಕ್ಷವನ್ನಾಗಿ ಬೆಳೆಸಿದ ಹಿರಿಯ ಎಲ್‌ಕೆ ಅಡ್ವಾಣಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯ. ಪಕ್ಷದ ಕೋಟ್ಯಂತರ ಕಾರ್ಯಕರ್ತರು ಹಾಗೂ ಸಮಸ್ತ ಭಾರತೀಯರಿಗೆ ಪ್ರೇರಣಾ ಶಕ್ತಿಯಾಗಿರುವ ಎಲ್‌ಕೆ ಅಡ್ವಾಣಿ, ಅವಿರತವಾಗಿ ದೇಶ ಸೇವೆ ಸಲ್ಲಿಸುತ್ತಿರುವ ನಾಯಕ, ಅವರು ಹಾಕಿಕೊಟ್ಟ ದಾರಿ ಯಲ್ಲಿ ನಾವೆಲ್ಲಾ ಸಾಗಿ ದೇಶಸೇವೆ ಮಾಡುವುದಾಗಿ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ.

ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ಎಲ್‌ಕೆ ಅಡ್ವಾಣಿ ಅವರ 93ನೇ ಜನ್ಮದಿನಕ್ಕೆ ಶುಭ ಕೋರಿ, ಪಕ್ಷದ ಅಧ್ಯಕ್ಷರಾಗಿ ಹಾಗೂ ಉಪ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಾಗಿ ಎಲ್‌ಕೆ ಅಡ್ವಾಣಿ ದೇಶಕ್ಕೆ ನೀಡಿದ ಕೊಡುವೆ ಅಪಾರ ಎಂದಿದ್ದಾರೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶುಭ ಕೋರಿ , ‘ಪಕ್ಷದ ಹಿರಿಯ ನೇತಾರ, ಮಾಜಿ ಉಪಪ್ರಧಾನಮಂತ್ರಿ, ಪದ್ಮವಿಭೂಷಣ ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಜನ್ಮದಿನದ ಆದರಪೂರ್ವಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ’.

Leave a Reply

Your email address will not be published. Required fields are marked *