Sunday, 24th November 2024

Israel strikes Lebanon : ಇಸ್ರೇಲ್ ದಾಳಿಯಲ್ಲಿ ಹೆಜ್ಬುಲ್ಲಾದ ಉಗ್ರರ ಕಮಾಂಡರ್‌ ಅಲಿ ಕರಿಕಿ ಬಲಿ

Israel strikes Lebanon

ಬೆಂಗಳೂರು: ಹೆಜ್ಬುಲ್ಲಾ ಉಗ್ರರ ಮೂರನೇ ಶ್ರೇಣಿಯ ಕಮಾಂಡರ್‌ ಅಲಿ ಕರಿಕಿ ತಮ್ಮ ವಾಯು ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂಬುದಾಗಿ ಇಸ್ರೇಲ್‌ ಡಿಫೆನ್ಸ್ ಫೋರ್ಸ್‌ ಹೇಳಿದೆ (Israel strikes Lebanon). ಆದರೆ ಇದನ್ನು ಹೆಜ್ಬುಲ್ಲಾ ಉಗ್ರರ ಗುಂಪು ನಿರಾಕರಿಸಿದ್ದು ಅವರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಹೇಳಿದೆ.

ಸೋಮವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಇರಾನ್ ಬೆಂಬಲಿತ ಹೆಜ್ಬುಲ್ಲಾ, ಕರ ಚೆನ್ನಾಗಿದ್ದಾರೆ ಮತ್ತು ದೇವರ ಇಚ್ಛೆಯಂತೆ, ಸಂಪೂರ್ಣ ಆರೋಗ್ಯ ಮತ್ತು ಕ್ಷೇಮವಾಗಿದ್ದಾರೆ. ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ದಕ್ಷಿಣ ಲೆಬನಾನ್‌ನಲ್ಲಿ ಗುಂಪಿನ ಮಿಲಿಟರಿ ಕಾರ್ಯಾಚರಣೆಗಳನ್ನು ನಿರ್ವಹಿಸುವ ಹಿಜ್ಬುಲ್ಲಾ “ಸದರ್ನ್ ಫ್ರಂಟ್” ನ ಉಸ್ತುವಾರಿಯನ್ನು ಕರಕಿ ವಹಿಸಿಕೊಂಡಿದ್ದ. . ಆತ ಹಿಜ್ಬುಲ್ಲಾದ ಸಶಸ್ತ್ರ ಪಡೆಗಳಲ್ಲಿ ಮೂರನೇ ಅತ್ಯುನ್ನತ ನಾಯಕ ಮತ್ತು ಪ್ರಮುಖ ಕಮಾಂಡರ್‌ ಫುವಾದ್ ಶುಕರ್ ಮತ್ತು ಇಬ್ರಾಹಿಂ ಅಕಿಲ್ ಅವರ ಹತ್ಯೆಯ ನಂತರ ಉಳಿದಿದ್ದ ಅತ್ಯಂತ ಹಿರಿಯ ಸದಸ್ಯ. ಇದೀಗ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಹಿಜ್ಬುಲ್ಲಾದ ಗಣ್ಯ ರಾದ್ವಾಬ್‌ ಪಡೆಗಳ ನೇತೃತ್ವ ವಹಿಸಿದ್ದ ಇಬ್ರಾಹಿಂ ಅಕಿಲ್ ಕಳೆದ ವಾರ ಬೈರುತ್‌ನಲ್ಲಿ ಇಸ್ರೇಲಿ ಮಿಲಿಟರಿ ದಾಳಿಯಲ್ಲಿ ಹತ್ಯೆಯಾಗಿದ್ದ. ಏತನ್ಮಧ್ಯೆ, ಈ ವರ್ಷದ ಆರಂಭದಲ್ಲಿ ಇಸ್ರೇಲ್‌ಗೆ ಮಾಡಿದ ದಾಳಿಗಳಲ್ಲಿ ಹಿರಿಯ ಕಮಾಂಡರ್ ಫುವಾದ್ ಶುಕರ್ ಮತ್ತು ಹಮಾಸ್‌ ನಾಯಕ ಸಲೇಹ್ ಅಲ್-ಅರೂರಿ ಹತ್ಯೆಯಾಗಿದ್ದ.

ಹಿಜ್ಬುಲ್ಲಾ ಕ್ಷಿಪಣಿ ಮುಖ್ಯಸ್ಥನನ್ನು ಹೊಡೆದುರುಳಿಸಲಾಗಿದೆ: ಐಡಿಎಫ್

ಲೆಬನಾನ್ ರಾಜಧಾನಿ ಬೈರುತ್‌ನ ದಹಿಹ್ ಅನ್ನು ಗುರಿಯಾಗಿಸಿಕೊಂಡು ನಡೆದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಕ್ಷಿಪಣಿಗಳು ಮತ್ತು ರಾಕೆಟ್ ಪಡೆಗಳ ಕಮಾಂಡರ್ ಇಬ್ರಾಹಿಂ ಮುಹಮ್ಮದ್ ಖಾಬಿಸಿಸಿ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಮಂಗಳವಾರ ಹೇಳಿದೆ.

ಇದನ್ನೂ ಓದಿ: Yogi Adityanath : ಬಾಣಸಿಗರಿಗೆ ಮಾಸ್ಕ್‌, ಗ್ಲವ್ಸ್‌ ಕಡ್ಡಾಯಗೊಳಿಸಿದ ಯೋಗಿ

“ಹಿಜ್ಬುಲ್ಲಾದ ಕ್ಷಿಪಣಿಗಳು ಮತ್ತು ರಾಕೆಟ್ ಪಡೆಗಳ ಹೆಚ್ಚುವರಿ ಕೇಂದ್ರ ಕಮಾಂಡರ್‌ಗಳೊಂದಿಗೆ ಖಬಿಸಿಯನ್ನು ಹತ್ಯೆ ಮಾಡಲಾಗಿದೆ ಎಂದು ಐಡಿಎಫ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.