Friday, 22nd November 2024

Donald Trump: ಇರಾನ್‌ನಿಂದ ನನ್ನ ಹತ್ಯೆಗೆ ಸಂಚು- ಡೆಡ್ಲಿ ಅಟ್ಯಾಕ್‌ ಬಗ್ಗೆ ಮೌನ ಮುರಿದ ಟ್ರಂಪ್‌

Donald Trump

ವಾಷಿಂಗ್ಟನ್‌: ತಮ್ಮ ಮೇಲೆ ಪ್ರಚಾರ ರ್ಯಾಲಿ ವೇಳೆ ನಡೆದಿರುವ ಹತ್ಯೆ ಯತ್ನ(Attempt to assassination)ದ ಬಗ್ಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ(US Presidential election) ಡೊನಾಲ್ಡ್‌ ಟ್ರಂಪ್‌(Donald Trump) ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ಸಂದೇಶ ನೀಡಿದ್ದು,. ಮಧ್ಯಪ್ರಾಚ್ಯದಲ್ಲಿ ದೇಶದಿಂದ ತಮಗೆ ಪದೇ ಪದೆ ಎದುರಾಗುತ್ತಿರುವ ಬೆದರಿಕೆ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ತಮ್ಮ ಮೇಲಿನ ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಇರಾನ್‌ನಿಂದ ನನ್ನ ಜೀವಕ್ಕೆ ದೊಡ್ಡ ಬೆದರಿಕೆಗಳು. ಇಡೀ ಯುಎಸ್ ಮಿಲಿಟರಿ ನೋಡುತ್ತಿದೆ ಮತ್ತು ಕಾಯುತ್ತಿದೆ. ಎರಡು ಹತ್ಯೆ ಯತ್ನಗಳ ನಂತರ ವಿದೇಶಿ ಶಕ್ತಿಗಳು ಮತ್ತೊಮ್ಮೆ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತವೆ ಎಂದು ಅವರು ಆರೋಪಿಸಿದರು. “ಈಗಾಗಲೇ ಇರಾನ್‌ನಿಂದ ಮೂರನೇ ಪ್ರಯತ್ನಕ್ಕೆ ಮುಂದಾಗಿತ್ತು. ಆದರೆ ಅದು ಫಲಪ್ರದವಾಗಲಿಲ್ಲ. ಅವರು ಮತ್ತೆ ಮತ್ತೆ ಯತ್ನವನ್ನು ಮಾಡಿಯೇ ಮಾಡುತ್ತಾರೆ ಎಂದು ಹೇಳಿದ್ದಾರೆ.

ಇದು ಯಾರಿಗೂ ಒಳ್ಳೆಯದಲ್ಲ. ನಾನು ಹಿಂದೆಂದೂ ನೋಡಿರುವುದಕ್ಕಿಂತ ಹೆಚ್ಚು ಭದ್ರತಾ ಸಿಬ್ಬಂದಿ, ಬಂದೂಕುಗಳು ಮತ್ತು ಶಸ್ತ್ರಾಸ್ತ್ರಗಳಿಂದ ಭದ್ರತೆಯಲ್ಲಿ ನಾನು ಓಡಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಸೆ.18ರಂದು ಟ್ರಂಪ್‌ ಮೇಲೆ ಅನಾಮಧೇಯ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದರು. ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಅವರಿಗೆ ಎದುರಾದ ಎರಡನೇ ಅಪಾಯ ಅದಾಗಿತ್ತು. ಅಧ್ಯಕ್ಷೀಯ ಚುನಾವಣಾ ಪ್ರಚಾರ ಮುಗಿಯಲು ಒಂದು ದಿನ ಬಾಕಿ ಇರುವಾಗ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ತಮ್ಮ ಗಾಲ್ಫ್ ಕೋರ್ಸ್‌ನಲ್ಲಿ ಟ್ರಂಪ್ ಗಾಲ್ಫ್ ಆಡುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಇನ್ನು ಟ್ರಂಪ್‌ ಮೇಲೆ ಎರಡನೇ ಬಾರಿ ಗುಂಡಿನ ದಾಳಿ ನಡೆದಿರುವ ಬೆನ್ನಲ್ಲೇ ಮತ್ತೊಂದು ಅಟ್ಯಾಕ್‌ಗೆ ರೂಪಿಸಲಾಗಿದ್ದ ಸಂಚು ಬಯಲಾಗಿತ್ತು. ಕಳೆದ ಬುಧವಾರ ಸಂಜೆ ಲಾಂಗ್ ಐಲ್ಯಾಂಡ್‌ನಲ್ಲಿನಿಗದಿಯಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ರ್ಯಾಲಿಯ ಸ್ಥಳದ ಸಮೀಪ ವಾಹನವೊಂದರಲ್ಲಿ ಭಾರೀ ಸ್ಫೋಟಕಗಳು ಪತ್ತೆಯಾಗಿವೆ.

ಡೈಲಿ ಮೇಲ್‌ ಪತ್ರಿಕೆ ಈ ಬಗ್ಗೆ ವರದಿ ಮಾಡಿದ್ದು, ಯುಎಸ್ ಪೊಲೀಸರು ಭದ್ರತಾ ತಪಾಸಣೆ ವೇಳೆ ಸ್ಫೋಟಕ ತುಂಬಿದ್ದ ಕಾರೊಂದನ್ನು ಪತ್ತೆ ಮಾಡಿದ್ದಾರೆ. ಕಾರಿನ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆಯೇ ಎಂಬ ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲ ಎಂದು ಹೇಳಿದೆ.

ಈ ಸುದ್ದಿಯನ್ನೂ ಓದಿ: Donald Trump: ಗುಂಡಿನ ದಾಳಿ ಬೆನ್ನಲ್ಲೇ ಟ್ರಂಪ್‌ ಹತ್ಯೆಗೆ ಭಾರೀ ಸಂಚು; ರ‍್ಯಾಲಿ ಸ್ಥಳದಲ್ಲಿ ಸ್ಫೋಟಕಗಳು ಪತ್ತೆ