ಭಾರತದಲ್ಲಿ ತಯಾರಾದ ವಿಸ್ಕಿಗಳಿಗೆ (Costliest Whisky) ಈಗ ಜಗತ್ತಿನಾದ್ಯಂತ ಬೇಡಿಕೆ ಬರುತ್ತಿದೆ. ಅಂತೆಯೇ ಭಾರತೀಯ ಮಾರುಕಟ್ಟೆಯಲ್ಲೂ ಇಂಥ ವಿಸ್ಕಿಗಳ ಬಗ್ಗೆ ಅಪಾರ ಪ್ರೀತಿ ಇದೆ. ಭಾರತೀಯ ಆಲ್ಕೋಹಾಲಿಕ್ ಪಾನೀಯ ಕಂಪೆನಿಗಳ ಒಕ್ಕೂಟದ (Indian Alcoholic Beverage Companies) ವರದಿಯ ಪ್ರಕಾರ 2023ರಲ್ಲಿ ಆಲ್ಕೋಹಾಲ್ ಮಾರುಕಟ್ಟೆಯಲ್ಲಿ ಶೇ. 53ರಷ್ಟು ಬೇಡಿಕೆ ಭಾರತದ ಸಿಂಗಲ್ ಮಾಲ್ಟ್ ವಿಸ್ಕಿಗೆ ದೊರಕಿದೆ. ಹೆಚ್ಚಿನ ಗ್ರಾಹಕರು ಮೆಕ್ಡೊವೆಲ್ನ ನಂ. 1 ರಿಸರ್ವ್ ಮತ್ತು ರಾಯಲ್ ಸ್ಟಾಗ್ನಂತಹ ಕೈಗೆಟುಕುವ ದರ ವಿಸ್ಕಿಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಆದಾಗ್ಯೂ ದುಬಾರಿ ವಿಸ್ಕಿಯೂ ಮಾರಾಟವಾಗುತ್ತಿವೆ. ಅಂಥದ್ದೊಂದು ದುಬಾರಿ ವಿಸ್ಕಿಯ ಸ್ಟೋರಿ ಇಲ್ಲಿದೆ. (Rampur Whiskey)
ಭಾರತದಲ್ಲಿ ಮ್ಯಾಜಿಕ್ ಮೊಮೆಂಟ್ಸ್ ಮತ್ತು ಚಿವಾಸ್ ರೀಗಲ್ ತಯಾರಕರಾದ ರಾಡಿಕೊ ಖೈತಾನ್ ಒಂದು ವಿಶೇಷ ವಿಸ್ಕಿ ಬಿಡುಗಡೆ ಮಾಡಿದೆ. ಇದು ವಿಸ್ಕಿ ಭಾರತೀಯ ಮಾರುಕಟ್ಟೆಯಲ್ಲಿ ಬೆಲೆಯ ವಿಚಾರಕ್ಕೆ ಹೊಸ ದಾಖಲೆ ನಿರ್ಮಿಸಿದೆ. 2018ರಲ್ಲಿ ಇದನ್ನು ಲಿಮಿಡೆಡ್ ಎಡಿಷನ್ ರೂಪದಲ್ಲಿ ಬಿಡುಗಡೆ ಮಾಡಲಾಗಿತ್ತು. ಅಂದರೆ ಕೇವಲ 400 ಬಾಟಲಿಗಳನ್ನು ಉತ್ಪಾದಿಸಲಾಯಿತು. ಇಲ್ಲಿಯವರಗೆ ಅದರಲ್ಲಿ ಎರಡು ಮಾತ್ರ ಮಾರಾಟವಾಗದೆ ಉಳಿದಿದೆ. ಯಾಕೆ ಗೊತ್ತೇ, 750 ಎಂಎಲ್ನ ಒಂದು ಬಾಟಲಿಯ ಬೆಲೆ 5 ಲಕ್ಷ ರೂಪಾಯಿ!
ಸಾಧನೆಯ ಮೈಲುಗಲ್ಲು
ರಾಡಿಕೊ ಖೈತಾನ್ ರಾಂಪುರ ಸಿಗ್ನೇಚರ್ ರಿಸರ್ವ್ ಸಿಂಗಲ್ ಮಾಲ್ಟ್ ವಿಸ್ಕಿಯು ಈ ವರ್ಷದ ಆರಂಭದಲ್ಲಿ ಅಂದರೆ ಏಪ್ರಿಲ್ 29ರಂದು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ವಿಸ್ಕಿಯು ಪ್ರತಿ ಬಾಟಲ್ 5 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದೆ. ಇಷ್ಟೊಂದು ಬೆಲೆಗೆ ಮಾರಟವಾದ ಏಕೈಕ ಭಾರತೀಯ ವಿಸ್ಕಿ ಎಂಬದೇ ಇದರ ಹೆಗ್ಗಳಿಕೆ . ಸ್ಪೆಷಲ್ ಎಡಿಷನ್ ವಿಸ್ಕಿಯನ್ನು ರಾಂಪುರ್ ಡಿಸ್ಟಿಲರಿಯ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಬಿಡುಗಡೆ ಮಾಡಲಾಗಿದೆ. ಈ ಸಿಂಗಲ್ ಮಾಲ್ಟ್ ವಿಸ್ಕಿಯ ಪ್ರೀಮಿಯಂ ಆವೃತ್ತಿಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಪರಿಚಯಿಸಲಾಗಿದೆ.
ಈ ವಿಸ್ಕಿಯ ವಿಶೇಷ ಏನು?
ರಾಂಪುರ್ ಸಿಗ್ನೇಚರ್ ರಿಸರ್ವ್ ಸಿಂಗಲ್ ಮಾಲ್ಟ್ ಭಾರತದ ಒಂದು ವಿಶೇಷ ಮತ್ತು ಐಷಾರಾಮಿ ವಿಸ್ಕಿ. ಆರಂಭದಲ್ಲಿ ಇದನ್ನು ನಾಲ್ಕು ಅಮೆರಿಕನ್ ಓಕ್ ಬ್ಯಾರೆಲ್ಗಳಲ್ಲಿ ಸಂಗ್ರಹಿಸಿಟ್ಟು, ಅಂತಿಮ ಹಂತದಲ್ಲಿ ಒಂದು ಪೆಡ್ರೊ ಕ್ಸಿಮೆನೆಜ್ (PX) ಶೆರ್ರಿ ಬಟ್ಗೆ ವರ್ಗಾಯಿಸಲಾಗಿದೆ. ಇದು ಸಂಕೀರ್ಣ ಪ್ರಕ್ರಿಯೆಯಾಗಿತ್ತು.
Radico selling 400 bottles of one whiskey priced at 5lakh rupees.
— Intrinsic Compounding (@soicfinance) April 29, 2024
Veblen goods pic.twitter.com/TDSwnkun72
ಈ ವಿಸ್ಕಿಯು ಆಕರ್ಷಕ ಪರಿಮಳ ಹೊಂದಿದೆ. ಇದನ್ನು ಪಿಎಕ್ಸ್ ಶೆರ್ರಿ, ಜೇನುತುಪ್ಪ, ಟೋಫಿ, ವೆನಿಲ್ಲಾ, ದಾಲ್ಚಿನ್ನಿ, ಒಣಗಿದ ಹಣ್ಣುಗಳು ಮತ್ತು ಓಕ್ಗಳಿಂದ ತಯಾರಿಸಲಾಗಿದೆ. ಇದಕ್ಕೆ ಒಣ ದ್ರಾಕ್ಷಿ, ಮಿಠಾಯಿ, ಕ್ರಿಸ್ಮಸ್ ಪುಡಿಂಗ್ ಮತ್ತು ದಾಲ್ಚಿನ್ನಿಗಳ ಸುವಾಸನೆಯ ಸಮೃದ್ಧ ಮಿಶ್ರಣ ನೀಡಲಾಗಿದೆ. ಒಣ ಹಣ್ಣುಗಳು, ಓಕಿ ಮಸಾಲೆಯನ್ನೂ ಸೇರಿಸಲಾಗಿದೆ.
ರಾಂಪುರ ಸಿಂಗಲ್ ಮಾಲ್ಟ್ ವಿಸ್ಕಿ ಬೆಲೆ ಎಷ್ಟು?
ರಾಂಪುರದ ಇಂಡಿಯನ್ ಸಿಂಗಲ್ ಮಾಲ್ಟ್ ವಿಸ್ಕಿ ಬೇರೆಬೇರೆ ದರ ಹೊಂದಿದೆ. ಇದರಲ್ಲಿ ಸಾಮಾನ್ಯ ಮತ್ತು ಐಷಾರಾಮಿ ವಿಸ್ಕಿಗಳು ಲಭ್ಯವಿದೆ. ರಾಂಪುರ ಸೆಲೆಕ್ಟ್ ಪ್ರತಿ ಬಾಟಲಿ ಬೆಲೆ 14,000 ರೂ. ಇದು 2016 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ವರ್ಲ್ಡ್ ವೈನ್ ಮತ್ತು ಸ್ಪಿರಿಟ್ಸ್ ಪ್ರಶಸ್ತಿಗಳಲ್ಲಿ ಡಬಲ್ ಪದಕ ಪಡೆದುಕೊಂಡಿತ್ತು.
ರಾಂಪುರ್ ಪಿಎಕ್ಸ್ ಶೆರ್ರಿ ಇದರ ಪ್ರತಿ ಬಾಟಲಿ ಬೆಲೆ 12,000 ರೂ. ಇದು ಸಂಪೂರ್ಣ ಮಾರಾಟವಾಗಿದೆ. ರಾಂಪುರ್ ಡಬಲ್ ಕ್ಯಾಸ್ಕ್ 2018 ರಲ್ಲಿ ಇದರ ಪ್ರತಿ ಬಾಟಲಿ ಬೆಲೆ 8,500 ರೂ. ಇದು ಅಮೆರಿಕನ್ ಬರ್ಬನ್ ಮತ್ತು ಶೆರ್ರಿ ಪೀಪಾಯಿ ಪರಿಮಳ ಹೊಂದಿದೆ.
ರಾಂಪುರ ಅಸವ ವಿಸ್ಕಿಯ ಬೆಲೆ 10,000 ರೂಪಾಯಿ. 2019ರಲ್ಲಿ ಬಿಡುಗಡೆಯಾದ ಈ ವಿಸ್ಕಿಯನ್ನು 2023ರ ಜಾನ್ ಬಾರ್ಲಿಕಾರ್ನ್ ನೀಡುವ ಅತ್ಯುತ್ತಮ ವಿಶ್ವ ವಿಸ್ಕಿ ಎಂದು ಹೆಗ್ಗಳಿಕೆ ಪಡೆದಿದೆ. ರಾಂಪುರ್ ಟ್ರಿಗನ್ ಇದರ ಬೆಲೆ 17,000 ರೂಪಾಯಿ. ರಾಂಪುರ ಜುಗಲ್ಬಂಧಿ ಬೆಲೆ 40,000 ರೂಪಾಯಿಯಾಗಿದೆ.
Stock Market: ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ; ಷೇರು ಮಾರುಕಟ್ಟೆಯಲ್ಲಿ ಭಾರೀ ಸಂಚಲನ
ರಾಂಪುರ್ ಸಿಗ್ನೇಚರ್ ರಿಸರ್ವ್ ಇದರ ಬೆಲೆ ಪ್ರತಿ ಬಾಟಲಿಗೆ 5,00,000 ರೂ. 2018ರಲ್ಲಿ ಅತ್ಯಂತ ದುಬಾರಿ ಭಾರತೀಯ ವಿಸ್ಕಿಯಾಗಿ ಬಿಡುಗಡೆಯಾಯಿತು. ವೈವಿಧ್ಯಮಯ ಪಾಕ ವಿಧಾನದ ಮೂಲಕವೇ ಖ್ಯಾತಿ ಪಡೆದಿರುವ ರಾಂಪುರ್ ಭಾರತೀಯ ಸಿಂಗಲ್ ಮಾಲ್ಟ್ ಉತ್ಪಾದನೆಯಲ್ಲಿ ಉನ್ನತ ಗುಣಮಟ್ಟ ಕಾಯ್ದುಕೊಂಡಿದೆ.