ಸ್ಮರಣೆ
ವಚನಾನಂದ ಸ್ವಾಮೀಜಿ
ಕನ್ನಡನಾಡಿನಲ್ಲಿ ಅನೇಕ ಯೋಗಿ, ಶಿವಯೋಗಿಗಳು ಅವತರಿಸಿದ್ದಾರೆ. ಅದರಲ್ಲಿ ಅಪರೂಪದ ಯೋಗಿಸ್ವರೂಪರು ತಿಪ್ಪಾಯಿಕೊಪ್ಪದ ಶ್ರೀ ಮೂಕಪ್ಪ ಮಹಾಶಿವಯೋಗಿಗಳು. ನಾವು ಬಾಲ್ಯದಿಂದಲೂ ಶ್ರೇಷ್ಠಯೋಗಿ ಪುಂಗವರ ಪುರಾಣ ಪುಣ್ಯಗ್ರಂಥ ಓದುತ್ತಾ,ಪ್ರವಚನಗಳನ್ನು ಆಲಿಸುತ್ತಾ ಬೆಳೆದವರು.
ಧಾರವಾಡದ ಶ್ರೀ ಮೃತ್ಯುಂಜಯ ಅಪ್ಪಗಳವರು ಹಾಗೂ ಶ್ರೀ ಮೂಕಪ್ಪ ಶಿವಯೋಗಿಗಳು ಮುಖಾಮುಖಿಯಾಗಿ ದರ್ಶನವಿತ್ತ ಘಟನೆ ನಮ್ಮೊಳಗೆ ಕಿಂಕರತ್ವದಿಂದ ಶಂಕರತ್ವದಡೆಗೆ ಸಾಗುವ ಮಾರ್ಗತೋರಿದೆ. ನಾವು ಧಾರವಾಡ ಮುರುಘಾಮಠದಲ್ಲಿ ವಿದ್ಯಾರ್ಜನೆ ವೇಳೆಯಲ್ಲಿ ನಾಡಿನ ಹಲವು ಮಠ, ಪೀಠಗಳ ಪೂಜ್ಯರು ಮುರುಘಾಮಠಕ್ಕೆ ಭೇಟಿ ನೀಡುತ್ತಿದ್ದರು. ಹೀಗೆ ಮಠಕ್ಕೆ ಭೇಟಿ ನೀಡುವ ಪ್ರತಿ ಪರಮಪೂಜ್ಯರ ಆರೈಕೆ, ಸೇವೆ ಸದಾ ನಮ್ಮದಾಗಿರುತ್ತಿತ್ತು.
ಪೂಜ್ಯರ ಇಷ್ಟಲಿಂಗ ಮಹಾಪೂಜೆಗೆ ಪತ್ರೆ -ಪುಷ್ಪಗಳನ್ನು, ಕಾಯಕ್ಕೆ ಕಾವಿ ಮಡಿವಸವನ್ನು ಜೋಡಿಸುವ,ಮಜ್ಜನಕ್ಕೆ ಬೀಸಿ ನೀರು ತೋಡುವ, ನೈವೇದ್ಯಕ್ಕೆ ಬಸವನಾಮ ಜಪಿಸುತ್ತಾ ಕೋರಿ ಶೆಟ್ಟರು ತಯಾರಿಸಿದ ಬಿಸಿ ಪ್ರಸಾದವನ್ನು ಎಡೆಮಾಡುವುದೆಂದರೆ ಅಚ್ಚು ಮೆಚ್ಚು. ನಮ್ಮ ಹೃದಯಕ್ಕೆ ಹತ್ತಿರವಾದವರು ಶ್ರೀ ತಿಪ್ಪಾಯಿಕೊಪ್ಪ ಮೂಕಪ್ಪ ಶಿವ ಯೋಗಿ ಮಠದ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ವಿರೂಪಾಕ್ಷ ಮಹಾ ಸ್ವಾಮಿಗಳವರು. ಪೂಜ್ಯರು ಪವಡಿಸುವಾಗ
ಅವರ ಪಾದ ಒತ್ತುತ್ತಿದ್ದರೆ ಯೋಗನಿದ್ರೆಯಲ್ಲಿ ಲೀನನಾದ ಅವರ ಅಪಾದ ಮಸ್ತಕದಿಂದ ಓಂಕಾರದ ಝೆಂಕಾರ ಮಂತ್ರ ಮೊಳಗುತ್ತಿತ್ತು. ಅದನ್ನು ಆಲಿಸುವುದೆಂದರೆ ಪಂಚಪ್ರಾಣ.
ಅವರ ಪದತಲದ ಸೇವೆ ಸಲ್ಲಿಸುವಾಗಲೆಲ್ಲ ಹಲವು ಮಾತೇನು, ನೀನೊಲಿದು ಪಾದವನಿಟ್ಟ ನೆಲವೇ ಕ್ಷೇತ್ರ,ಜಲವೇ ಪಾವನ ತೀರ್ಥ, ಸುಲಭ ಶ್ರೀಗುರುವೇ ಕೃಪೆಯಾಗು ಎಂಬ ಮೈಲಾರ ಬಸವಲಿಂಗ ಶರಣರ ವಚನ ಶ್ವಾಸ ಶಾಸ ವಾಗುತಿತ್ತು. ಒಂದು ಮಧ್ಯಾಹ್ನದ ಇಷ್ಟಲಿಂಗ ಪೂಜೆಯ ನಂತರ ದಲ್ಲಿ ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳು
ನಮ್ಮನ್ನು ಉದ್ದೇಶಿಸಿ ಅಥಣಿ ಮಠದ ಮರಿದೇವರೇ, ನಿಮ್ಮ ಸೇವಾಗುಣ ನಮ್ಮೊಳಗಿನ ಶಿವಯೋಗಿಗೆ ಸಂತೃಪ್ತಿ ಯಾಗಿದೆ. ನೀವೊಬ್ಬ ಶ್ರೇಷ್ಠ ಸೇವಾಯೋಗಿ- ಶಿವ ಯೋಗಿಯಾಗುವಿರಿ ಎಂದು ಹರಿಸಿದರು. ಆ ಮಾತು ಮಂತ್ರಮುಗ್ಧ ಗೊಳಿಸಿತು. ಆ ಗಳಿಗೆ ಅಂತರಂಗದ ಅರಿವಿಗೆ ಮುನ್ನುಡಿ ಬರೆಯಿತು.ಅಲ್ಲಿಂದ ಶ್ವಾಸಶಾಶ್ವತ ಸಾಧನೆ ಶುರುವಾಯಿತು.
ಅವರ ಪದತಲದ ಸೇವೆ ಸಲ್ಲಿಸುವಾಗಲೆಲ್ಲ ಹಲವು ಮಾತೇನು, ನೀನೊಲಿದು ಪಾದವನಿಟ್ಟ ನೆಲವೇ ಸುಕ್ಷೇತ್ರ, ಜಲವೇ ಪಾವನ ತೀರ್ಥ, ಸುಲಭ ಶ್ರೀಗುರುವೇ ಕೃಪೆಯಾಗು ಎಂಬ ಮೈಲಾರ ಬಸವಲಿಂಗ ಶರಣರ ವಚನ ಶ್ವಾಸ ಶಾಸವಾಗುತಿತ್ತು. ಒಂದು ಮಧ್ಯಾಹ್ನದ ಇಷ್ಟಲಿಂಗ ಪೂಜೆಯ ನಂತರ ದಲ್ಲಿ ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳು
ನಮ್ಮನ್ನು ಉದ್ದೇಶಿಸಿ ಅಥಣಿ ಮಠದ ಮರಿದೇವರೇ, ನಿಮ್ಮ ಸೇವಾಗುಣ ನಮ್ಮೊಳಗಿನ ಶಿವಯೋಗಿಗೆ ಸಂತೃಪ್ತಿ ಯಾಗಿದೆ. ನೀವೊಬ್ಬ ಶ್ರೇಷ್ಠ ಸೇವಾಯೋಗಿ- ಶಿವ ಯೋಗಿಯಾಗುವಿರಿ ಎಂದು ಹರಿಸಿದರು. ಆ ಮಾತು ಮಂತ್ರಮುಗ್ಧ ಗೊಳಿಸಿತು. ಆ ಗಳಿಗೆ ಅಂತರಂಗದ ಅರಿವಿಗೆ ಮುನ್ನುಡಿ ಬರೆಯಿತು.ಅಲ್ಲಿಂದ ಶ್ವಾಸಶಾಶ್ವತ ಸಾಧನೆ ಶುರುವಾಯಿತು.
ನಾವು ಹಲವು ಬಾರಿ ತಿಪ್ಪಾಯಿಕೊಪ್ಪದ ಶ್ರೀ ಮೂಕಪ್ಪ ಶಿವಯೋಗಿಗಳವರ ಮಠಕ್ಕೆ ಭೇಟಿ ನೀಡಿ ಶ್ರೀಮೂಕಪ್ಪ ಶಿವಯೋಗಿಗಳವರ ಕರ್ತೃ ಗದ್ದುಗೆಯ ಹಾಗೂ ಪರಮಪೂಜ್ಯ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳವರ ದರ್ಶನಾ ಶೀರ್ವಾದ ಪಡೆದು ಭಾರತೀಯ ವಿವಿಧ ದರ್ಶನ ಶಾಸ್ತ್ರಗಳ ಚರ್ಚೆ ಸಂವಾದಗೈದ ಯೋಗ ಸುಯೋಗ ನಮ್ಮ
ದಾಗಿದೆ. ಇಂದು ಪರಮಪೂಜ್ಯರು ಗುರುವಾರ ಗುರುವಿನ ಅಣತಿಯಂತೆ ಪ್ರಾತಃಕಾಲ ಲಿಂಗವ ಪೂಜಿಸುತ್ತಾ ಲಿಂಗ ವೇಯಾಗಿ ಲಿಂಗಯ್ಯನಲ್ಲಿ ಲೀನರಾಗಿದ್ದಾರೆ.
ಪೂಜ್ಯರ ಅಂಗವೆಲ್ಲ ಲಿಂಗವಾಗಿದೆ, ಪೂಜಿಸಿದ ಲಿಂಗ ಆತ್ಮಲಿಂಗವಾಗಿದೆ. ಆದ್ದರಿಂದ ನಾವೆಲ್ಲ ಶಿಷ್ಯ ಸದ್ಭಕ್ತರು ಪೂಜ್ಯವಂದ್ಯರ ನಡೆದ ದಾರಿಯಲ್ಲಿ ನಾವು ನಡೆಯೋಣ! ಅದುವೇ ಅವರಿಗೆ ನಾವು ಸಲ್ಲಿಸುವ ಗೌರವ. ಇಲ್ಲಿಂದ ತಿಪ್ಪಾಯಿಕೊಪ್ಪ ಶ್ರೀ ಮೂಕಪ್ಪ ಶಿವಯೋಗಿಮಠದ ಪರಂಪರೆಯ ಕರ್ಣಧಾರತ್ವ ಹಿಡಿದು ಸದ್ಭಕ್ತರನ್ನು ಸತ್ಪಥ ದಲ್ಲಿ ಅರಿವಿನ ಕುರುಹಾಗಿ ಗುರುವಾಗಿ ಮುನ್ನಡೆಸುವವರು ಶ್ರೀಮನ್ನಿರಂಜನ ಮಹಾಂತ ಮಹಾ ಸ್ವಾಮಿಗಳವರು.
ಪೂಜ್ಯ ಶ್ರೀ ಮಹಾಂತ ಮಹಾ ಸ್ವಾಮಿಗಳವರು ಪರಮಪೂಜ್ಯ ಲಿಂಗೈಕ್ಯ ಶ್ರೀಮನ್ನಿರಂ ಜನ ಪ್ರಣವ ಸ್ವರೂಪಿ ವಿರೂಪಾಕ್ಷ ಮಹಾಸ್ವಾಮಿಗಳವರ ಕರಕಮಲ ಸಂಜಾತರು. ಗುರುಮುಟ್ಟಿ ಗುರುವಾದ ಅಪರೂಪದ ಸದ್ಗುರು. ನಾವು ೨೦೦೮ ನೇ ಇಸ್ವಿಯಲ್ಲಿ ಋಷಿ ಕೇಶದ ಶ್ರೀ ಸ್ವಾಮಿ ರಾಮ ಧ್ಯಾನ ಗುರುಕುಲದಲ್ಲಿ ವ್ಯಾಸಂಗ ಮಾಡುವಾಗ ನಮ್ಮೊಂದಿಗೆ ಶಿವಯೋಗಾನುಷ್ಠಾನಕ್ಕೆ ಒಳಪಟ್ಟು ಮಹಾಂತ ಮಂದಾರವಾದವರು. ಹಿಮಾಲಯದ ಗುಹೆಯೊಳಗೆ ಧ್ಯಾನ ಮೌನದಲ್ಲಿ ಲೀನರಾ ದವರು.ಅವರೊಳಗೆ ನಾವು ಶ್ರೀ ಮೂಕಪ್ಪ ಶಿವಯೋಗಿಗಳವರ ದೈವಿಗುಣ ಸಾಕ್ಷೀ ಕರಿಸಿದ್ದೇವೆ.
ಅವರ ಪ್ರತಿ ನೋಟವೆಲ್ಲ ನಮಗೆ ಬಸವಣ್ಣನವರ ಈ ಕೆಳಗಿನ ವಚನ ನೆನಪಿಸುತ್ತದೆ. ನಿಮ್ಮ ನೋಟ ಅನಂತ ಸುಖ, ನಿಮ್ಮ ಕೂಟ ಪರಮಸುಖ ! ಅವುಟುಕೋಟಿ ರೋಮಂಗಳೆಲ್ಲ ಕಂಗಳಾಗಿ ನೋಡುತ್ತಿದ್ದೆನು! ಕೂಡಲಸಂಗಮ ದೇವಾ ನಿಮ್ಮ ನೋಡಿ ನೋಡಿ ಮನದಲ್ಲಿ ರತಿಹುಟ್ಟಿ ನಿರ್ಮಿದುವೆನ್ನ ಕಂಗಳು. ಪರಮಪೂಜ್ಯ ಲಿಂಗೈಕ್ಯ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳವರ ಆತ್ಮಚೈತನ್ಯ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಲೆಂದು ಪ್ರಾರ್ಥಿಸುತ್ತೇವೆ.
(ಲೇಖಕರು: ಜಗದ್ಗುರುಗಳು, ವೀರಶೈವ ಲಿಂಗಾಯತ ಪಂಚಮಸಾಲಿ
ಜಗದ್ಗುರು ಪೀಠ, ಹರಕ್ಷೇತ್ರ ಹರಿಹರ)
ಇದನ್ನೂ ಓದಿ: ಜ.8ರಂದು ರಾಜ್ಯಮಟ್ಟದ ಬೃಹತ್ ಸಮಾವೇಶ