Monday, 25th November 2024

Tumkur News: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ಬೆಂಬಲ

ಕೊರಟಗೆರೆ: ಮೂಲಭೂತ ಸೌಲಭ್ಯ(Basic Facility) ಗಳನ್ನ ಒದಗಿಸಲು, ಸೇವಾ ಸೌಲಭ್ಯಗಳು, ಮತ್ತು ಮೊಬೈಲ್ ಆಪ್‌ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಹೇರಲಾಗುತ್ತಿರುವ ಒತ್ತಡವನ್ನ ನಿಲ್ಲಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟ ಅವಧಿಗೆ ಮುಷ್ಕರ(Strike) ವನ್ನ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ತಾಲ್ಲೂಕು ಕಛೇರಿ (Taluk Office) ಆವರಣದಲ್ಲಿ ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಕೆ ಮುಷ್ಕರ ದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕೊರಟಗೆರೆ ತಾಲ್ಲೂಕು ಅಧ್ಯಕ್ಷ ಬಸವ ರಾಜು (Koratagere Taluk president Basavaraju) ಮಾತನಾಡಿ, ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಒಂದೇ ಭಾರಿ ಹತ್ತು ಹಲವಾರು ಆಪ್‌ ಗಳನ್ನು ನೀಡಿ ಕಂದಾಯ ಇಲಾಖೆ ಕೆಲಸದ ಜೊತೆಗೆ ಬೇರೆ ಇಲಾಖೆಗಳ ಕೆಲಸಗಳನ್ನು ಮಾಡುವಂತೆ ಮಾಡಿದರೆ ಹೇಗೆ ಕೆಲಸ ಮಾಡೋದು ತಕ್ಷಣ ಈ ಆದೇಶ ವಾಪಸ್ಸು ಪಡೆಯಬೇಕು ಎಂದು ಒತ್ತಾಯ ಮಾಡಿದರು.

ಮೂಲಭೂತ ಸೌಕರ್ಯಗಳನ್ನು ನೀಡಿಲ್ಲ, ಗ್ರಾಮಾಧಿಕಾರಿಗಳು 30 ವರ್ಷಗಳ ಸೇವೆ ಸಲ್ಲಿಸಿದರೂ ಪದನೋನ್ಮತ್ತಿ(Promotion) ಇಲ್ಲ, ಸರ್ಕಾರದ ರೂಲ್ 6 ರ ಅನ್ವಯದ ಮೂರು ವರ್ಷದ ಪತಿಪತ್ನಿ ಅಂತರ ಜಿಲ್ಲಾ ವರ್ಗಾವಣೆ ನಿಲ್ಲಿಸಿದ್ದಾರೆ.

ಒಂದೇ ಬಾರಿ ಪ್ರಗತಿ ಕೇಳಿ ರಜಾ ದಿನಗಳಲ್ಲೂ ಕೆಲಸ ಮಾಡಿಸಿ ರಾತ್ರಿ ವೇಳೆಯಲ್ಲೂ ಆನ್‌ಲೈನ್ ಸಭೆ (Online Meeting) ಮಾಡಿ ಅನಗ್ಯತವಾಗಿ ಕೆಲವರನ್ನು ಅಮಾನತ್ತುಗೊಳಿಸಿದ್ದು ಇದರಿಂದ ನಮಗೆ ಆಗುತ್ತಿರುವ ಮಾನಸಿಕ ಒತ್ತಡ ಕಿನ್ನತೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.

ಗ್ರಾಮಾಧಿಕಾರಿ ದೀಪಿಕಾ ಮಾತನಾಡಿ ನಾವುಗಳು ಸರ್ಕಾರ ಜಾಗ ಗುರುತಿಸಲು ಮೋಬೈಲ್ ಹಿಡಿದು ಗ್ರಾಮಗಳ ಹೊರಗೆ ಬೆಟ್ಟ, ಗುಡ್ಡ, ಕೆರೆೆ ಹಳ್ಳ, ಕಾಡುಗಳು ಸೇರಿದಂತೆ ಹಲವು ಜಾಗಗಳಿಗೆ ಹೋಗಬೇಕು. ಈ ಕೆಲಸದಲ್ಲಿ ನಮಗೆ ರಕ್ಷಣೆ ಇರುವುದಿಲ್ಲ, ಪ್ರಾಣಿ ಹಾವುಗಳ ದಾಳಿಗಳ ಭಯ, ಈ ಅಪ್ ಗಳಿಂದ ರಾತ್ರಿ ವೇಳೆ ಗೂಗಲ್ ಸಭೆ, ತಾಲ್ಲೂಕು ಕಛೇರಿಯಲ್ಲಿ ಸಭೆ ನಡೆದು ನಾವು ಮನೆಗೆ ಹೋಗುವುದರಲ್ಲಿ ತಡ ರಾತ್ರಿಯಾಗುತ್ತಿದ್ದು ಇದರಿಂದ ಕುಟುಂಬದಲ್ಲಿ ಕಿರಿಕಿರಿ ನಮ್ಮ ಮಕ್ಕಳನ್ನು ನೋಡಿಕೊಳ್ಳದ ಸ್ಥಿತಿ ಉಂಟಾಗಿದ್ದು ಸರ್ಕಾರವು ಹೆಣ್ಣು ಮಕ್ಕಳನ್ನು ಈ ಸಂಕಟದಿAದ ಪಾರು ಮಾಡಬೇಕಿದೆ ಎಂದರು.

ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಸಂಘದ ಪದಾಧಿಕಾರಿಗಳು, ಶಿಕ್ಷಕರು ಬಂದು ಬೆಂಬಲ ವ್ಯಕ್ತಪಡಿಸಿದರು.

ಮುಷ್ಕರದಲ್ಲಿ ಗ್ರಾಮ ಆಡಳಿತಾಧಿಕಾರಿಗಳಾದ ಹಾರಿಕಾ ರಮೇಶ್, ಸಲ್ಮಾನ್, ಮಂಜುನಾಥ್, ಗುರುಶಂಕರ್, ಅನಂದ್ , ಪವನ್, ಸಬೀಹಾ ಭಾನು, ಕುಮಾರಿ, ಭವ್ಯ ಸೇರಿದಂತೆ ಹಲವರು ಹಾಜರಿದ್ದರು.

*

ನಾನು ಎಸ್.ಎಸ್.ಎಲ್.ಸಿ ಅರ್ಹತೆ ಮೇಲೆ ಉದ್ಯೋಗಕ್ಕೆ ಸೇರಿ ಹಲವು ವರ್ಷಗಳಿಂದ ಸೇವೆ ಮಾಡುತ್ತಿದ್ದು ಮೊಬೈಲ್ ಅಪ್ ಹೊಸದಾಗಿದ್ದು ದಿನವೆಲ್ಲಾ ಕಳೆದು ಹೋಗುತ್ತಿದೆ ಪಹಣಿ ಅಧಾರ್ ಲಿಂಕ್ ರೈತರು ಹಲವರು ಮೃತರಾಗಿದ್ದರೆ ಹಲವರು ಸರಿಯಾಗಿ ಸ್ಪಂದಿಸುತ್ತಿಲ್ಲ ಅಧಿಕಾರಿಗಳು ನಮ್ಮ ಮೇಲೆ ಒತ್ತಡ ಹಾಕಿದರೆ ಹೇಗೆ.

ಕೊರಟಗೆರೆ ಭಾಗ್ಯಮ್ಮ ಗ್ರಾಮ ಆಡಳಿತಧಿಕಾರಿ ಕೊರಟಗೆರೆ

ಇದನ್ನೂ ಓದಿ: Tumkur News: ಜಿಲ್ಲಾಮಟ್ಟದ ದಸರಾ ಕ್ರೀಡಾ ಕೂಟಕ್ಕೆ ಸಿಇಓ ಚಾಲನೆ