Monday, 25th November 2024

Tumkur News: ಒಂದು ತಿಂಗಳ ಕಾಲ ಉಚಿತ ಹೃದಯ ತಪಾಸಣಾ ಮಾಸಾಚಾರಣೆ

ತುಮಕೂರು: ಹೃದಯ ರಕ್ತನಾಳದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಜಾಗತಿಕವಾಗಿ ಹೃದಯದ ಆರೋಗ್ಯ ವನ್ನು ಉತ್ತೇಜಿಸಲು ಸಪ್ಟೆಂಬರ್ 29ರಂದು ವಿಶ್ವ ಹೃದಯ ದಿನ ಆಚರಣೆ ಮಾಡುತ್ತಿದ್ದು ಹಿನ್ನೆಲೆಯಲ್ಲಿ ಶ್ರೀ ಸಿದ್ದಾರ್ಥ ಹೈಯರ್ ಆಫ್ ಎಜುಕೇಶನ್ ಶ್ರೀ ಸಿದ್ದಾರ್ಥ ಕಾರ್ಡಿಯಾಕ್ ಪ್ರಾಂಟಿಡಾ ವತಿಯಿಂದ ಸೆ.29ರಿಂದ ಒಂದು ತಿಂಗಳುಗಳ ಕಾಲ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ತಪಾಸಣೆ ಮತ್ತು ರಕ್ತ ಪರೀಕ್ಷೆಗಳನ್ನು ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಮತ್ತು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ ಪ್ರಭಾಕರ್ ತಿಳಿಸಿದ್ದಾರೆ.

 ವಿಶ್ವ ಹೃದಯ ದಿನದ ಅಂಗವಾಗಿ ಹೃದಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಾಹೇ ವಿಶ್ವವಿದ್ಯಾಲಯದ ವತಿಯಿಂದ ಕುಲಾಧಿಪತಿ ಡಾ. ಜಿ ಪರಮೇಶ್ವರ್ ಅವರ ಆಶಯದಂತೆ ಹೃದಯ ಸಾವಿನ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ವಿಶ್ವ ಹೃದಯ ದಿನದಂದು ಹೃದಯ ಸಂಬಂಧಿತ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಮತ್ತು ಸಲಹೆ ನೀಡ ಲಾಗುವುದು. ಜತೆಗೆ ಸಾರ್ವಜನಿಕರಿಗಾಗಿ ಕೇವಲ ಒಂದು ಸಾವಿರಗಳಿಗೆ 9ಕ್ಕೂ ಹೆಚ್ಚು ಪರೀಕ್ಷೆಗಳನ್ನು ಅ.1ರಂದು ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಸಿದ್ದಾರ್ಥ ಕಾರ್ಡಿಯಾಕ್ ಪ್ರಾಂಟೀಡಾ ವತಿಯಿಂದ ಹೃದ್ರೋಗ ಮಾಸಾಚರಣೆ

ವಿಶ್ವ ಹೃದಯ ದಿನದ ಅಂಗವಾಗಿ ಒಂದು ತಿಂಗಳುಗಳ ಕಾಲ ಸಿದ್ದಾರ್ಥ ಕಾಡಿಯಾಕ್ ಪ್ರಾಂಟಿಡಾ ವತಿಯಿಂದ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 30ರವರೆಗೂ ಉಚಿತ ಹೃದ್ರೋಗ ಚಿಕಿತ್ಸೆ ಮತ್ತು ತಪಾಸಣೆಯನ್ನು ಆಯೋಜನೆ ಮಾಡಲಾಗಿದ್ದು ಇದರ ಸದುಪಯೋಗವನ್ನು ಕೂಡಾ ಸಾರ್ವಜನಿಕರು ಮತ್ತು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಎಲ್ಲಾ ನೌಕರರು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.