Sunday, 29th September 2024

Kolkata trams : ಕೋಲ್ಕೊತಾದಲ್ಲಿ ಐತಿಹಾಸಿಕ 150 ವರ್ಷಗಳ ಟ್ರಾಮ್ ಸಾರಿಗೆ ಸೇವೆ ಬಂದ್‌

Kolkata trams

ಬೆಂಗಳೂರು: ಪಶ್ಚಿಮ ಬಂಗಾಳ ಸರ್ಕಾರವು (West Bengal Government) ಬ್ರಿಟಿಷರ ಕಾಲದಲ್ಲಿ ಅಂದರೆ 1873ರಲ್ಲಿ ಆರಂಭಗೊಂಡಿದ್ದ ಕೋಲ್ಕತ್ತಾದ ಟ್ರಾಮ್ ಸಾರಿಗೆ ಸೇವೆಯನ್ನು (Kolkata trams) ಕೊನೆಗೊಳಿಸಲು ನಿರ್ಧರಿಸಿದೆ. ಇದರೊಂದಿಗೆ ನಗರದ ಐತಿಹಾಸಿಕ ಪರಂಪರೆ ಕೊನೆಗೊಳ್ಳಲಿದೆ. ನಗರದ ಜನರ ಜೀವನಾಡಿ ಎಂದು ಹೇಳಲಾಗಿದ್ದ 150 ವರ್ಷ ಹಳೆಯ ಟ್ರಾಮ್ ಸೇವೆಯನ್ನು ಬ್ರಿಟಿಷರು ಪರಿಚಯಿಸಿದ್ದರು. ಪಾಟ್ನಾ, ಚೆನ್ನೈ, ನಾಸಿಕ್ ಮತ್ತು ಮುಂಬೈನಂತಹ ನಗರಗಳಲ್ಲೂ ಟ್ರಾಮ್‌ಗಳಿದ್ದವು. ಆದರೆ ಎಲ್ಲೆಡೆ ಅವುಗಳನ್ನು ನಿಲ್ಲಿಸಲಾಗಿತ್ತು. ಆದರೆ, ಕೋಲ್ಕೊತಾದಲ್ಲಿ ಮುಂದುವರಿದಿತ್ತು. ಇದೀಗ ಅಲ್ಲಿಯೂ ಸೇವೆ ನಿಂತಿದೆ.

ಕೋಲ್ಕತ್ತಾದಲ್ಲಿ ಟ್ರಾಮ್ ಪ್ರಯಾಣವು ಫೆಬ್ರವರಿ 24, 1873ರಂದು ಆರಂಭಗೊಂಡಿತ್ತು. ಈ ವೇಳೆ ಹಳಿಗಳ ಮೇಲೆ ಕುದುರೆಗಳು ಟ್ರಾಮ್ ಎಳೆಯುತ್ತಿದ್ದವು. 1882 ರಲ್ಲಿ, ಉಗಿ ಯಂತ್ರಗಳನ್ನು ಟ್ರಾಮ್ ಎಳೆಯುತ್ತಿದ್ದವು. ಇದು ಆಧುನೀಕರಣಕ್ಕೆ ದಾರಿ ಮಾಡಿಕೊಟ್ಟಿತು. ಮೊದಲ ವಿದ್ಯುತ್ ಚಾಲಿತ ಟ್ರಾಮ್ 1900ರಲ್ಲಿ ಆರಂಭಗೊಂಡಿತ್ತು. ಇದು ನಗರದಲ್ಲಿ ಸಾರ್ವಜನಿಕ ಸಾರಿಗೆ ಸೇವೆಗೆ ದೊಡ್ಡ ಬದಲಾವಣೆ ತಂದುಕೊಟ್ಟಿತು. ಒಂದು ಶತಮಾನಕ್ಕೂ ಹೆಚ್ಚು ಎಲೆಕ್ಟ್ರಿಕ್ ಎಂಜಿನ್ ಓಡಾಟದ ಬಳಿಕ 2013 ರಲ್ಲಿ ಎಸಿ ಟ್ರಾಮ್‌ಗಳನ್ನು ಪರಿಚಯ ಮಾಡಲಾಯಿತು. ಇದುಗ ಕೋಲ್ಕತ್ತಾದ ಟ್ರಾಮ್ ಸೇವೆಯ ವಿಕಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.

ಟ್ರಾಮ್ ಸೇವೆ ನಿಲ್ಲಿಸಿದ್ದು ಯಾಕೆ?

ಟ್ರಾಮ್‌ಗಳು ನಿಧಾನಗತಿಯ ಸಾರಿಗೆ ಸೇವೆಯಾಗದೆ. ಆದರೆ ಪ್ರಯಾಣಿಕರಿಗೆ ವೇಗದ ಆಯ್ಕೆಗಳು ಬೇಕಾಗುತ್ತವೆ ಎಂದು ಸಾರಿಗೆ ಸಚಿವ ಸ್ನೇಹಾಸಿಸ್ ಚಕ್ರವರ್ತಿ ಹೇಳಿದ್ದಾರೆ. ಎಸ್ಪ್ಲನೇಡ್‌ನಿಂದ ಸ್ಟೇಡಿಯಮ್‌ಗೆ ಹೋಗುವ ಒಂದು ಮಾರ್ಗವನ್ನು ಹೊರತುಪಡಿಸಿ ಸಂಚಾರ ಸಮಸ್ಯೆಗಳಿಂದಾಗಿ ಕೋಲ್ಕತ್ತಾದಲ್ಲಿ ಟ್ರಾಮ್‌ಗಳು ನಿಧಾನವಾಗಿ ಸಾಗುತ್ತಿದ್ದವು.

1873 ರಲ್ಲಿ ಕುದುರೆ ಎಳೆಯುವ ಗಾಡಿಗಳಾಗಿ ಪರಿಚಯಿಸಿದ ನಂತರ ಟ್ರಾಮ್ ಗಳು ನಿಸ್ಸಂದೇಹವಾಗಿ ಕೋಲ್ಕತ್ತಾದ ಪರಂಪರೆಯ ಒಂದು ಭಾಗ ಎನಿಸಿಕೊಂಡಿತ್ತು. ಹಿಂದಿನ ಶತಮಾನದಲ್ಲಿ ಸಾರಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಆದರೆ ರಸ್ತೆಗಳು ಕೋಲ್ಕತಾದ ಮೇಲ್ಮೈ ಪ್ರದೇಶದ ಕೇವಲ ಶೇ 6ರಷ್ಟು ಮಾತ್ರ ಒಳಗೊಂಡಿರುವುದರಿಂದ ವಾಹನ ದಟ್ಟಣೆ ಹೆಚ್ಚಳದೊಂದಿಗೆ, ಟ್ರಾಮ್‌ಗಳು ನಿಧಾನವಾಗಿ ಸಾಗುತ್ತಿದ್ದವು. ಈ ಮಾರ್ಗಗಳಲ್ಲಿ ವಾಹನಗಳನ್ನು ಓಡಿಸಲೂ ಸಾಧ್ಯವಾಗುತ್ತಿರಲಿಲ್ಲ. ಟ್ರಾಫಿಕ್ ಜಾಮ್‌ನಿಂದಾಗಿ ಜನರು ಕಚೇರಿಗೆ ತಡವಾಗಿ ಬರದಂತೆ ನೋಡಿಕೊಳ್ಳಲು, ಟ್ರಾಮ್‌ಗಳನ್ನು ನಿಲ್ಲಿಸಲಾಗಿದೆ.

ಇದನ್ನೂ ಓದಿ: Mallikarjun Kharge : ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಮಲ್ಲಿಕಾರ್ಜುನ ಖರ್ಗೆ

ಎಲ್ಲೆಡೆ ನಿಲ್ಲಿಸಿರುವ ಹೊರತಾಗಿಯೂ ಪಾರಂಪರಿಕ ಟ್ರಾಮ್‌ಗಳು ಮೈದಾನ ಮತ್ತು ಎಸ್ಪ್ಲನೇಡ್ ನಡುವೆ ಸಂಚರಿಸಲಿವೆ.

ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯ ಪ್ರಯಾಣಿಕರೊಬ್ಬರು, “ಇದನ್ನು ನಿಲ್ಲಿಸಬಾರದು. ಇದು ಕೋಲ್ಕತ್ತಾದ ಜನರಿಗೆ ವಿಶೇಷವಾಗಿ ಬಡವರ ಜೀವನಾಡಿಯಾಗಿದೆ. ಈಗ ಹಣದುಬ್ಬರ ಹೆಚ್ಚಾಗಿದೆ. ಟ್ರಾಮ್ ನಲ್ಲಿ ಪ್ರಯಾಣಿಸುವುದಕ್ಕಿಂತ ಬಸ್ ನಲ್ಲಿ ಟಿಕೆಟ್ ಮತ್ತು ಟ್ಯಾಕ್ಸಿಯಲ್ಲಿ ಪ್ರಯಾಣಿಸುವುದು ಹೆಚ್ಚು ದುಬಾರಿ. ಇದು ಪ್ರಯಾಣದ ಅಗ್ಗದ ವಿಧಾನವಾಗಿದೆ. ಇದು ವಿದ್ಯುತ್ ನಿಂದ ಚಲಿಸುವುದರಿಂದ ಪರಿಸರ ಸ್ನೇಹಿಯಾಗಿದೆ ಎಂದು ಹೇಳಿದ್ದಾರೆ.