Sunday, 29th September 2024

Arvind Kejriwal : ತಿಹಾರಿ ಜೈಲಲ್ಲಿ ಟಾರ್ಚರ್ ಕೊಟ್ರು, ಹರಿಯಾಣ ರ್ಯಾಲಿಯಲ್ಲಿ ಕೇಜ್ರಿವಾಲ್‌ ಹೇಳಿಕೆ

Arvind Kejriwal

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಗೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal ). ತಾವು ಜೈಲಿನಲ್ಲಿದ್ದಾಗ ಭಾರತೀಯ ಜನತಾ ಪಕ್ಷ (BJP) ನೇತೃತ್ವದ ಕೇಂದ್ರ ಸರ್ಕಾರವು ನನ್ನನ್ನು ಎದ್ಧೇಳದಂತೆ ಮಾಡಲು ಯತ್ನಿಸಿತ್ತು ಎಂದ ಆರೋಪಿಸಿದ್ದಾರೆ.

ನಾನು ಜೈಲಿನಲ್ಲಿದ್ದಾಗ ಅವರು ನನ್ನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಲು ಪ್ರಯತ್ನಿಸಿದರು ಎಂದು ಕೇಜ್ರಿವಾಲ್ ರೇವಾರಿಯಲ್ಲಿ ನಡೆದ ಸಭೆಯಲ್ಲಿ ಹೇಳಿದರು.

“ನಾನು ಮಧುಮೇಹ ರೋಗಿ, ಮತ್ತು ನನಗೆ ಪ್ರತಿದಿನ ನಾಲ್ಕು ಇನ್ಸುಲಿನ್ ಚುಚ್ಚುಮದ್ದು ಬೇಕಾಗುತ್ತದೆ. ಆದರೆ ಅವರು ನನಗೆ ಔಷಧಿ ಕೊಡುವುದನ್ನು ನಿಲ್ಲಿಸಿದರು. ಅವರು ನನ್ನನ್ನು ಎದ್ದೇಳದಂತೆ ಮಾಡಲು ಯತ್ನಿಸಿದರು. ನಾನು ಹರಿಯಾಣದವನು ಎಂಬುದು ಅವರಿಗೆ ಗೊತ್ತಿಲ್ಲ. ಹರಿಯಾಣದ ವ್ಯಕ್ತಿಯನ್ನು ಸೋಲುವಂತೆ ಮಾಡಲು ಸಾಧ್ಯವಿಲ್ಲಎಂದು ಕೇಜ್ರಿವಾಲ್ ಹೇಳಿಕೊಂಡಿದ್ದಾರೆ.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ಕೇಜ್ರಿವಾಲ್ ಸೆಪ್ಟೆಂಬರ್ 13ರಂದು ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು. ಅದಕ್ಕಿಂತ ಮೊದಲು ಅವರು ಐದು ತಿಂಗಳು ಜೈಲಿನಲ್ಲಿದ್ದರು.

ಇದನ್ನೂ ಓದಿ: Mallikarjun Kharge : ಮೋದಿಯನ್ನು ಅಧಿಕಾರದಿಂದ ಇಳಿಸದೇ ಸಾಯವುದಿಲ್ಲ ಎಂದು ಶಪಥ ಮಾಡಿದ ಮಲ್ಲಿಕಾರ್ಜುನ ಖರ್ಗೆ

ಬಾದ್ಶಾಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ದೆಹಲಿ ಮತ್ತು ಪಂಜಾಬ್‌ನಲ್ಲಿ ಅವರ ರಾಜಕೀಯ ಯಶಸ್ಸಿನಿಂದಾಗಿ ಬಿಜೆಪಿ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಕೇಜ್ರಿವಾಲ್ ದೆಹಲಿ ಮತ್ತು ಪಂಜಾಬ್‌ನಲ್ಲಿ ಸರ್ಕಾರ ರಚಿಸಿದ್ದಾರೆ ಎಂದು ಪ್ರಧಾನಿ ಮೋದಿ ಭಾವಿಸಿಕೊಂಡಿದ್ದಾರೆ. ಈಗ, ನಾನು ಹರಿಯಾಣದಲ್ಲೂ ಸರ್ಕಾರ ರಚಿಸುವುದನ್ನು ನೋಡಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಕೇಜ್ರಿವಾಲ್ ಹೇಳಿಕೊಂಡಿದ್ದಾರೆ.